18 ರಿಂದ 22 ರ ವರೆಗೆ ರಾಜ್ಯಮಟ್ಟದ ಸಬ್‌ ಜ್ಯೂನೀಯರ್ ಟೇಕ್ವಾಂಡೊ ಸ್ಪರ್ಧೆ.

18 ರಿಂದ 22 ರ ವರೆಗೆ  ರಾಜ್ಯಮಟ್ಟದ ಸಬ್‌ ಜ್ಯೂನೀಯರ್ ಟೇಕ್ವಾಂಡೊ ಸ್ಪರ್ಧೆ.  
  ಧಾರವಾಡ 18 : ರಾಷ್ಟ್ರಮಟ್ಟದ ರೌಂಡ್‌ 9 ನೇ ಅಸ್ಮಿತಾ ಟೆಕ್ವಾಂಡೊ ಲೀಗ್ (ಖೇಲೊ ಇಂಡಿಯಾ) ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಕ್ರೀಡಾ ಸಚಿವಾಲಯ ಭಾರತ ಸರ್ಕಾರದಿಂದ ಮಂಜೂರಾಗಿದೆ
41 ನೇ ರಾಜ್ಯಮಟ್ಟದ ಸಬ್‌ ಜ್ಯೂನೀಯರ್ ಟೇಕ್ವಾಂಡೊ ಸ್ಪರ್ಧೆ – 2024 ದಿ 18 ರಿಂದ 22 ರ ವರೆಗೆ  ಜಿಲ್ಲಾ ಒಳಾಂಗಣ ಕ್ರೀಡಾಂಗಣ, ಧಾರವಾಡ,
 ಮೊದಲನೇ ಬಾರಿಗೆ ಜಿಲ್ಲಾ ಟೇಕ್ವಾಂಡೋ ಸಂಸ್ಥೆಯಿಂದ ರಾಷ್ಟ್ರಮಟ್ಟದ ರೌಂಡ್ ೨ ನೇ ಅಸ್ಮಿತಾ ಟೆಕ್ವಾಂಡೊ ಲೀಗ್ (ಖೇಲೊ ಇಂಡಿಯಾ) ಮತ್ತು 41 ನೇ ರಾಜ್ಯಮಟ್ಟದ ಸಬ್ ಜ್ಯೂನೀಯ‌ ಟೇಕ್ವಾಂಡೊ ಸ್ಪರ್ಧೆ - 2024 ಸಂಘಟಿಸುತ್ತಿದ್ದೇವೆ ಎಂದು ತಿಳಿಸಲು ಸಂತೋಷಿಸುತ್ತೇವೆ.ಎಂದು ಆನಂದ ಕುಲಕರ್ಣಿ ತಿಳಸಿದರು.  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು   ಈ ಸ್ಪರ್ಧೆಯನ್ನು ಟೇಕ್ವಾಂಡೋ ಫೆಡರೇಶನ ಆಫ್ ಇಂಡಿಯಾ (ರಿ), ಕರ್ನಾಟಕ ಟೇಕ್ವಾಂಡೊ ಸಂಸ್ಥೆ (ರಿ), ಕ್ರೀಡಾ ಭಾರತಿ ಧಾರವಾಡ(ರಿ) ಮತ್ತು ಜಿಲ್ಲಾ ಒಲಿಂಪಿಕ್ ಸಂಸ್ಥೆ(ರಿ) ಸಂಯುಕ್ತ ಆಶ್ರಯದಲ್ಲಿ, ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ  ಜಿಲ್ಲಾ ಟೇಕ್ವಾಂಡೊ ಸಂಸ್ಥೆ ಧಾರವಾಡ (ರಿ) ಸಂಘಟಿಸುತ್ತಿದ್ದೇವೆ ಎಂದರು .

ಟೆಕ್ವಾಂಡೊ ಇದು ಕೋರಿಯನ್ ದೇಶದ ಆತ್ಮರಕ್ಷಣೆಯ ಕಲೆಯಾಗಿದೆ. ಯಾವುದೇ ಆಯುಧ ಇಲ್ಲದೆ ಕೈ ಮತ್ತು ಕಾಲಿನಿಂದ ರಕ್ಷಣೆ ಮಾಡಿಕೊಳ್ಳುವ ಕಲೆಯಾಗಿದೆ. ಟೇಕ್ವಾಂಡೊ ಈಗ ಕರ್ನಾಟಕದ್ಯಾದಂತ ಅತಿ ತೀವ್ರಗತಿಯಲ್ಲಿ ಬೆಳೆಯುತ್ತಿದೆ. ಭಾರತದಲ್ಲಿ 30 ಲಕ್ಷಗಿಂತ ಅಧಿಕ ಜನರು ಈ ಸಂಘಟನೆಯಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿದ್ದಾರೆ. ಜಗತ್ತಿನಾದ್ಯಂತ 160 ರಾಷ್ಟ್ರಗಳಲ್ಲಿ ವಿಶ್ವ ಟೇಕ್ವಾಂಡೊ ಒಕ್ಕೂಟದ ಆಶ್ರಯದಲ್ಲಿ 10 ಕೋಟಿಗಿಂತ ಹೆಚ್ಚು ಜನರು ಅತಿ ಆಸಕ್ತಿಯಿಂದ ಈ ಕ್ರೀಡೆಯಲ್ಲಿ ಭಾಗವಹಿಸುತ್ತಿದ್ದಾರೆ. ಹಾಗೂ ಈ ಕ್ರೀಡೆಯನ್ನು ಅಂತರಾಷ್ಟ್ರೀಯ ಒಲಿಪಿಂಕ್ ಕ್ರೀಡೆ ಎಂದು ಪರಿಗಣಿಸಲ್ಪಟ್ಟಿದೆ ಎಂದರು. 

ಈ ಕ್ರೀಡಾಕೂಟಕ್ಕೆ ಸುಮಾರು 600 ಜನ ಕ್ರೀಡಾಪಟುಗಳು, 60 ಜನ ಕ್ರೀಡಾ ತರಬೇತಿಗಾರರು, 40 ಜನ ಕ್ರೀಡಾ ನಿರ್ಣಾಯಕರು 
ಭಾಗಿ ಆಗಲಿದ್ದಾರೆ ಎಂದರು. 
 ಪತ್ರಿಕಾಗೋಷ್ಠಿಯಲ್ಲಿಎಸ್ ಕೆ ಭಿಮಣ್ಣವರ, ಶಿವು ಹಿರೇಮಠ, ಪರಫ್ಫ ಇದ್ದರು.
ನವೀನ ಹಳೆಯದು

نموذج الاتصال