ಲಾಲಾ ಲಜಪತ್ ರಾಯ್ ಹುತಾತ್ಮ ದಿನದ ಕಾರ್ಯಕ್ರಮ.
ಧಾರವಾಡ 18 :
ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎ ಐ ಕೆ ಕೆ ಎಂ ಎಸ್ ) ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ಸ್ವಾತಂತ್ರ ಹೋರಾಟಗಾರರು ಮತ್ತು ಪಂಜಾಬಿನ ಸಿಂಹ ಲಾಲಾ ಲಜಪತ್ ರಾಯ್ ಅವರ ಹುತಾತ್ಮ ದಿನದ ಅಂಗವಾಗಿ ಧಾರವಾಡ ತಾಲೂಕಿನ ಮುಗದ ಗ್ರಾಮದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಅಧ್ಯಕ್ಷರಾದ ದೀಪಾ ಧಾರವಾಡ ಮಾತನಾಡಿ ಬ್ರಿಟಿಷ್ ರ ವಿರುದ್ಧ , ಸಮರಶೀಲ ಹೋರಾಟವನ್ನು ಕಟ್ಟಿದ ಪಂಜಾಬಿನ ಸಿಂಹ ಎಂದೆ ಖ್ಯಾತರಾದ ಲಾಲಾ ಲಜಪತ್ ರಾಯ್ ಅವರು ಪಗಡಿ ಸಂಬಾಲ ಜಟ್, ನೀರಿನ ಕರ ವಿರುದ್ಧ ದ ರೈತರ ಹೋರಾಟವನ್ನು ಸ್ವಾತಂತ್ರ್ಯ ಹೋರಾಟದೊಂದಿಗೆ ಬೆಸೆದು ಹೋರಾಟವನ್ನು ಅಂದು ಅವರು ಕಟ್ಟಿದರು. ಇಂದು ರೈತ ಹೋರಾಟವನ್ನು ದೇಶದ ವಿಮೋಚನ ಹೋರಾಟವನ್ನಾಗಿ ಬೆಳೆಸುವ ಅವಶ್ಯಕತೆ ಇದೆ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಶರಣು ಗೋನವಾರ, ಗ್ರಾಮದ ಮುಖಂಡರಾದ ನಾಗಪ್ಪ, ಮಲ್ಲಪ್ಪ, ರಾಮಣ್ಣ, ಬಸನಗೌಡ ಪಾಟೀಲ್ ಮುಂತಾದವರು ಇದ್ದರು.