DHARWAD:ಧಾರವಾಡ ಅಕ್ಷರತಾಯಿ ಎಂದೇ ಖ್ಯಾತರಾದ ದತ್ತಿ ದಾನಿ ನಿವೃತ್ತ ಶಿಕ್ಷಕಿ ಲೂಸಿ ಸಾಲ್ಡಾನರವರು,

ಧಾರವಾಡ ಅಕ್ಷರತಾಯಿ ಎಂದೇ ಖ್ಯಾತರಾದ ದತ್ತಿ ದಾನಿ ನಿವೃತ್ತ ಶಿಕ್ಷಕಿ ಲೂಸಿ ಸಾಲ್ಡಾನರವರು,
 ಹುಬ್ಬಳ್ಳಿಯ ಹುಬ್ಬಳ್ಳಿಯ ಪವರ್ ಆಫ್ ಯುಥ್ಸ ಫೌಂಡೇಶನ್ ಗೆ ತನ್ನ 116 ನೆಯ ದತ್ತಿಯನ್ನು ನೀಡಿದರು,  ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಈ ದತ್ತಿ ಹಣವನ್ನು ಯಾವುದಾದರೂ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಪಿಕ್ಸ ಡಿಪಾಜಿಟ್ ಮಾಡಿ ಬರುವ ಬಡ್ಡಿಯಲ್ಲಿ ಅತ್ಯುತ್ತಮ ಶಿಕ್ಷಕರಿಗೆ ಗೌರವ ಸನ್ಮಾನ ಮಾಡಿ ಎಂದು ಸಲಹೆ ನೀಡಿದರು, ಇದೇ ಸಂದರ್ಭದಲ್ಲಿ ಪವರ್ ಆಫ್ ಯುಥ್ಸ ಫೌಂಡೇಶನ್ ಅವರನ್ನು ಸಂಸ್ಥೆಗೆ ಮಹಾಪೋಷಕರು ಎಂದು ನೇಮಕ ಮಾಡಿದರು,
ಲೂಸಿ ಅಮ್ಮ ನವರು ನಮ್ಮ ಪವರ್ ಆಫ್ ಯೂಥ್ಸ ಫೌಂಡೇಶನ್ನಿನ  ಮಹಾಪೊಷಕರಾಗಿ ಇಂದು 25,000/- ರೂಪಾಯಿಗಳನ್ನು cheque ಮುಖಾಂತರ ನೀಡಿದರು. ಈ ಹಣವನ್ನು ಸಮಾಜ ಸೇವೆಗೆ ಮಿಸಲಿಡಲು FD ಮಾಡುತ್ತೇವೆ ಎಂದು ನಾನು ಈ ಮೂಲಕ ತಿಳಿಸುತ್ತೇನೆ ಎಂದು ಅಧ್ಯಕ್ಷರಾದ ರವಿಚಂದ್ರನ್ ದೊಡ್ಡಿಹಾಳ ತಿಳಿಸಿದರು.
ಹಾಗೆಯೇ ಪ್ರತಿ ವರ್ಷ ಅಮ್ಮನವರ ಹುಟ್ಟು ಹಬ್ಬದಂದು (ಜೂನ್ 4) ಶಿಕ್ಷಣ ಮತ್ತು ಶೈಕ್ಷಣಿಕ ಬಗೆಗಿನ ಕಾಳಜಿ ಇರುವ ವ್ಯಕ್ತಿಗಳಿಗೆ ಮತ್ತು ಶಿಕ್ಷಕರಿಗೆ ನಾವು ಶಿಕ್ಷಣ ರತ್ನ ಎಂದು ರಾಜ್ಯ ಮಟ್ಟದ ಪ್ರಶಸ್ತಿ ಯನ್ನು ಏಪ್ ಡಿ ಯಿಂದ ಬಂದಂತಹ ಹಣದಿಂದ ನೀಡುತ್ತೇವೆ ಎಂದು ಪವರ್ ಆಫ್ ಯುಥ್ಸ ಫೌಂಡೇಶನ್ ಅಧ್ಯಕ್ಷರಾದ ರವಿಚಂದ್ರನ್ ದೊಡ್ಡಿಹಾಳ ತಿಳಿಸಿದರು. ಜುಲೈ 12 ರಂದು ಲೂಸಿ ಸಾಲ್ಡಾನರವರ ಕರ್ನಾಟಕ ವಿದ್ಯಾವರ್ಧಕ ಸಂಘದ ದತ್ತಿ ಕಾರ್ಯಕ್ರಮದಲ್ಲಿ, ಅತ್ಯುತ್ತಮ ಶಾಲೆ, ಶಿಕ್ಷಕರತ್ನ, ಶ್ರಮಿಕರತ್ನ ಪ್ರಶಸ್ತಿಯನ್ನು ನೀಡಲಾಗುವುದು ಎಂದು, ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಎಲ್ ಐ ಲಕ್ಕಮ್ಮನವರ ತಿಳಿಸಿದರು.
ನವೀನ ಹಳೆಯದು

نموذج الاتصال