DHARWAD:ರಾಜ್ಯ ಸರ್ಕಾರ ಕ್ಯಾಬಿನೆಟ್ ನಲ್ಲಿ ಅನುಮೋದನೆ ಮಾಡಿ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ

ಧಾರವಾಡ  :     ರಾಜ್ಯ ಸರ್ಕಾರ ಕ್ಯಾಬಿನೆಟ್ ನಲ್ಲಿ ಅನುಮೋದನೆ ಮಾಡಿ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ 
ರಾಜ್ಯ ಪತ್ರವನ್ನು ಹೊರಡಿಸಿ ಅಧಿಸೂಚನೆಗೆ ಸುಮಾರು ಒಂದುವರೆ ತಿಂಗಳ ಹಿಂದೆ ಮಾನ್ಯ ರಾಜ್ಯಪಾಲರ ಅಂಕಿತವನ್ನು ಪಡೆಯಲು ಕಡತವನ್ನು  ಕಳುಹಿಸಿದೆ. 
ಈ ವಿಷಯವಾಗಿ ನಿನ್ನೆ ಬೆಂಗಳೂರಿನಲ್ಲಿ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಅಭಿವೃದ್ದಿ ವೇದಿಕೆ ವತಿಯಿಂದ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಲಾಯಿತು. ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಮಾಡುವುದರಿಂದ ಧಾರವಾಡ ಮತ್ತು ಹುಬ್ಬಳ್ಳಿಗೆ  ಆಗುವ ಅನುಕೂಲಗಳು ಮತ್ತು ಅಭಿವೃದ್ಧಿಯ ಬಗ್ಗೆ ಮನವರಿಕೆ ಮಾಡಲಾಯಿತು. 
ಕೇಂದ್ರದ ಮಂತ್ರಿಗಳಾದ ನಮ್ಮ ಧಾರವಾಡದ ಸಂಸದರಾದ ಪ್ರಹ್ಲಾದ ಜೋಶಿ ಅವರು ಮಧ್ಯ ಪ್ರವೇಶಿಸಿ,  ಮಾನ್ಯ ರಾಜ್ಯಪಾಲರಿಗೆ ಧಾರವಾಡ ಪ್ರತ್ಯೇಕ ಪಾಲಿಕೆಯ ಅನುಕೂಲಗಳ ಬಗ್ಗೆ ತಿಳಿಸಿ ಮಾನ್ಯ ರಾಜ್ಯಪಾಲರ ಆದಷ್ಟು ಬೇಗ ಅನುಮೋದನೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಿ ಧಾರವಾಡ ನಗರಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಮಾಡಲು ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಅಭಿವೃದ್ಧಿ ವೇದಿಕೆ ಪ್ರಧಾನ ಕಾರ್ಯದರ್ಶಿ.  ರವಿಕುಮಾರ ಮಾಳಿಗೇರ    
ವಿನಂತಿಸಿಕೊಳ್ಳುತ್ತೇವೆ ಎಂದರು.
ನವೀನ ಹಳೆಯದು

نموذج الاتصال