DHARWAD: 3 ರಿಂದ 9 ರ ವರೆಗೆ ಇಟಗಟ್ಟಿ ಗ್ರಾಮದಲ್ಲಿ ಶ್ರೀ ಪಾಂಡುರಂಗ ರುಕುಮಾಯಿಯ ಪುನ‌ ನಿರ್ಮಾಣಗೊಂಡ ದೇವಸ್ಥಾನ ಲೋಕಾರ್ಪಣೆ.

3 ರಿಂದ 9 ರ ವರೆಗೆ  ಇಟಗಟ್ಟಿ ಗ್ರಾಮದಲ್ಲಿ ಶ್ರೀ ಪಾಂಡುರಂಗ ರುಕುಮಾಯಿಯ ಪುನ‌ ನಿರ್ಮಾಣಗೊಂಡ ದೇವಸ್ಥಾನ ಲೋಕಾರ್ಪಣೆ.
 ಧಾರವಾಡ  01 :                ಶ್ರೀ ಪಾಂಡುರಂಗ ರುಕುಮಾಯಿ ಸಾಂಸ್ಕೃತಿಕ ಸೇವಾ ಟ್ರಸ್ಟ, ಇಟಗಟ್ಟಿ ಹಾಗೂ
ಇಟಿಗಟ್ಟಿ ಗ್ರಾಮದ ಸಮಸ್ತ ಗುರುಹಿರಿಯರು ಹಾಗೂ ಸಂತ ಮಂಡಳಿ ಸಂಯುಕ್ತಾಶ್ರಯದಲ್ಲಿ ಧಾರವಾಡ ಜಿಲ್ಲೆಯ ಧಾರವಾಡ ತಾಲೂಕಿನ ಸುಕ್ಷೇತ್ರ ಇಟಗಟ್ಟಿ ಗ್ರಾಮದಲ್ಲಿ ಶ್ರೀ ಪಾಂಡುರಂಗ ರುಕುಮಾಯಿಯ ಪುನ‌ ನಿರ್ಮಾಣಗೊಂಡ ದೇವಸ್ಥಾನ ಲೋಕಾರ್ಪಣೆ ಹಾಗೂ ಶ್ರೀ ಪಾಂಡುರಂಗ ರುಕುಮಾಯಿ ಮೂರ್ತಿಗಳ ಪುನರ್ ಪ್ರತಿಷ್ಠಾಪನೆ ಮತ್ತು ಶ್ರೀ ಜ್ಞಾನೇಶ್ವರ ಮಹಾರಾಜರ ಮತ್ತು ಶ್ರೀ ತುಕಾರಾಮ ಮಹಾರಾಜರ ಮೂರ್ತಿಗಳ ನೂತನ ಪ್ರತಿಷ್ಠಾಪನೆ 
ಇಟಗಟ್ಟಿ ಗ್ರಾಮದಲ್ಲಿ 28 ನೇ ವರ್ಷದ ದಿಂಡಿ ಮಹೋತ್ಸವ ವಿಜೃಂಭಣೆಯಿಂದ ಮಾಡುವದಾಗಿ 
ಪ್ರಭು ಕುಂದರಗಿ ತಿಳಸಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ದಿ 3 ರಂದು ಬೆಳಿಗ್ಗೆ 10:30 ಕ್ಕೆ ಪೂತಿ ಸ್ಥಾಪನೆ,ಪಾರಾಯಣ,ಕೀರ್ತನೆ,ಭಜನೆ ಅಖಂಡ ಜಾಗರಣೆ ಕಾರ್ಯಕ್ರಮ. ದಿ 7 ರ ವರೆಗೆ ನಿತ್ಯ ಬೆಳಗಿನ 9 ರಿಂದ ಜ್ಞಾನೇಶ್ವರಿ ಪಾರಾಯಣ ಇರುವದು ಎಂದರು. ಗುರುವಾರ ದಿ 8 ರಂದು ಉತ್ತರಾ ನಕ್ಷತ್ರ, ಏಕಾದಶಿ ತಿಥಿ, ಬೆಳಿಗ್ಗೆ 5 ರಿಂದ ಮುಂಜಾನೆ 6-00 ರ ವರೆಗೆ ಕಾಕಡಾರತಿ ನಂತರ ಮುಂಜಾನೆ 7 ರಿಂದ ಸಾಯಂಕಾಲದವರೆಗೆ ಶ್ರೀ ಪಾಂಡುರಂಗ ರುಕುಮಾಯಿ ಹಾಗೂ ಶ್ರೀ ಜ್ಞಾನೇಶ್ವರ ಮಹಾರಾಜರ ಮತ್ತು ಶ್ರೀ ತುಕಾರಾಮ ಮಹಾರಾಜರ ಮೂರ್ತಿಗಳನ್ನು ಇಟಿಗಟ್ಟಿ ಗ್ರಾಮದ ರಾಜ ಬೀದಿಗಳಲ್ಲಿ ಸಕಲವಾದ್ಯ ಮೇಳಗಳೊಂದಿಗೆ ಭವ್ಯವಾದ ಮೆರವಣಿಗೆ, ಚಾಲನೆಯನ್ನು ಶಾಸಕರಾದ ಅರವಿಂದ ಚಂದ್ರಕಾಂತ ಬೆಲ್ಲದ, ಹು.ಧಾ. ಪಶ್ಚಿಮ ಕ್ಷೇತ್ರ, ಧಾರವಾಡ ಇವರಿಂದ ನಂತರ ಜಲವಾಸ, ಧಾನ್ಯವಾಸ, ಹೋಮ ಹವನದೊಂದಿಗೆ ಪೂಜಾ ಕಾರ್ಯಕ್ರಮ  ಕಾಶೀನಾಥ ಭಟ್ಟರು, ನವಲೂರ ಇವರಿಂದ ಪ್ರಾರಂಭವಾಗುವುದು ಎಂದರು . ಶುಕ್ರವಾರ ದಿ 9 ಹಸ್ತಾ ನಕ್ಷತ್ರ ದ್ವಾದಶಿ ತಿಥಿ, ಬೆಳಿಗ್ಗೆ 5 ರಿಂದ ಮುಂಜಾನೆ 6 ರ ವರೆಗೆ ಕಾಕಡಾರತಿ ನಂತರ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ಪೂರ್ಣಾಹುತಿ ಕಾರ್ಯಕ್ರಮ ಜರಗುವದು ಎಂದು ತಿಳಸಿದರು.           ಹ.ಭ.ಪ. ಶ್ರೀ ಮನೋ ಮಹಾರಾಜರು ಪಂಡರಪೂರ ಇವರ ಅಮೃತ ಹಸ್ತದಿಂದ ಕಳಸಾರೋಹಣ ಶ್ರೀ ಪರಮಪೂಜ್ಯ ಅಭಿನವ ಸಿದ್ಧಲಿ೦ಗ ಮಹಾಸ್ವಾಮಿಗಳು, ವಿರಕ್ತಮಠ ಇನಾಂಹೊಂಗಲ ಇವರ ಅಮೃತ ಹಸ್ತದಿಂದ ಪಲ್ಲಕ್ಕಿ ಉತ್ಸವ ಕಾಲಾ ಪ್ರಸಾದ. ದೇವಸ್ಥಾನ ಕಟ್ಟದ ಲೋಕಾರ್ಪಣೆ ಶಾಸಕರಾದ ಅರವಿಂದ ಚಂದ್ರಕಾಂತ ಬೆಲ್ಲದ, ಹು.ಧಾ. ಪಶ್ಚಿಮ ಕ್ಷೇತ್ರ, ಧಾರವಾಡ. ಇವರಿಂದ, ಕಾರ್ಯಕ್ರಮದ  ಅಧ್ಯಕ್ಷತೆ   ರವೀಂದ್ರ ಹನುಂತರಾವ ದೇಸಾಯಿ ವಹಿಸುವರು ಮುಖ್ಯ ಅತಿಥಿಗಳಾಗಿ ಶ್ರೀಮತಿ ನೀಲವ್ವ ಯಲ್ಲಪ್ಪ ಅಲವಾಳ, ಸದಸ್ಯರು ಹು.ಧಾ. ಮಹಾನಗರ ಪಾಲಿಕ, ಪಾರಾಯಣ ಪೀಠದ ಅಧಿಕಾರಿ  ಹನುಂತಪ್ಪ ಸರಾವರಿ, ಸಾ।। ತಂಬೂರ, ಸಂತರಾದ ಮಾರುತಿ ವಾಲಿಕಾರ,  ಶಿವಪ್ಪ ಲಮಾಣಿ, ಸುನೀಲ ಮಹಾರಾಜರು, ಚನ್ನಬೀರಪ್ಪ ಮಲ್ಲಗವಾಡ, ಜ್ಞಾನೇಶ್ವರ ಗಂಗಾಧರ , ಎಂ.ಕೆ. ಹುಬ್ಬಣ್ಣ, ಶಿವಪ್ಪ ಕಟದಾಳ,  ಗುರುನಾಥ ಶ್ರೀಗಟ್ಟಿ, ದೇವಸ್ಥಾನ ಕಟ್ಟಡದ ಶಿಲ್ಪ ಕಲಾಕಾರರಾದ  ಅಡಿವೆಪ್ಪ ಸುರೇಶ, ಕಟ್ಟೇಪ್ಪಗೋಳ,  ಗೋಪರದ ಶಿಲ್ಪ ಕಲಾಕಾರರಾದ  ಗೋವಿ೦ದ ಕೊ೦ಡೆಬಾ ಪವಾರ,  ಶಿವಕುಮಾರ ಪಾಟೀಲ, ನಿರ್ಮಿತ ಕೇಂದ್ರ, ಧಾರವಾಡ. ಮತ್ತು  ಸುರೇಂದ್ರಕುಮಾರ ಕಳಸ, ನಿರ್ಮಿತ ಕೇಂದ್ರ, ಧಾರವಾಡ ಇವರು ಉಪಸ್ಥಿತರಿರುವರು ಎಂದರು .     
 ಮಹಾಪ್ರಸಾದದೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಗೆ ಮಕ್ತಾಯಗೊಳ್ಳುವುದು.  ದಿ 9 ರಿಂದ 48 ದಿನಗಳವರರೆಗೆ ನಿರಂತರ ಮಹಾಅಭಿಷೇಕ, ಭಜನೆ, ಹರಿಪಾಠ, ಕೀರ್ತನೆ ನಡೆಯುವವು.ಆದ್ದರಿಂದ ಸರ್ವಭಕ್ತಾಧಿಗಳು, ಸಂತ ಮಂಡಳಿಯವರು, ತಾಳ ವೃಂದಂಗ ವೀಣೆ ಸಮೇತ ಆಗಮಿಸಿ ಈ ಕಾರ್ಯಕ್ರಮ ಯಸಸ್ವಿಗೊಳಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ. ಮತ್ತು ಇಟಿಗಟ್ಟಿ ಗ್ರಾಮದ ಸುತ್ತ ಮುತ್ತಲಿನ ಗ್ರಾಮಗಳಾದ ತಡಸಿನಕೊಪ್ಪ, ನವಲೂರ, ಛಾವಣಿ, ಸತ್ತೂರು, ಸುತಗಟ್ಟಿ, ಆಶ್ರಯಕಾಲನಿ, ಗಾಮನಗಟ್ಟಿ, ಗೋಕುಲ, ರೇವಡಿಹಾಳ, ತಾರಿಹಾಳ, ಬೈರಿದೇವರಕೊಪ್ಪ, ರಾಯಾಪೂರ, ಕಣವಿ ಹೊನ್ನಾಪೂರ, ನಾಯಕನ ಹೂಲಿಕಟ್ಟಿ, ಎರಿಕೊಪ್ಪ, ಜೋಗೆಲ್ಲಾಪೂರ, ನುಗ್ಗಿಕೇರಿ, ಜೋಡಳ್ಳಿ, ಜಿ. ಬಸವನಕೊಪ್ಪ, ನೀರಸಾಗರ, ನಿಂಗನಕೊಪ್ಪ, ದುಮ್ಮವಾಡ, ಕುರುವಿನಕೊಪ್ಪ, ಉಗ್ನಿಕೇರಿ, ಬಿ. ಗುಡಿಹಾಳ, ಬೇಗೂರು, ಗಟ್ಟಿ, ದೇವಿಕೊಪ್ಪ, ಮಲ್ಲಿಗವಾಡ, ಬೇಲೂರು, ಕಲಘಟಗಿ, ಧಾರವಾಡ, ಈ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಶ್ರೀ ಪಾಂಡುರಂಗ ರುಕುಮಾಯಿ ಸಾಂಸ್ಕೃತಿಕ ಸೇವಾ ಟ್ರಸ್ಟ್, ಸಂತ ಮಂಡಳಿ, ಇಟಿಗಟ್ಟಿ ಗ್ರಾಮದ ಸಮಸ್ತ ಗುರುಹಿರಿಯರು, ಇಟಿಗಟ್ಟಿ ಗ್ರಾಮದ ಎಲ್ಲ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸ್ವಾಗತಕೋರುತ್ತೆವೆ ಎಂದರು.

ವಿಶೇಷ ಸೂಚನೆ  ಶ್ರೀ ಪಾ೦ಡುರ೦ಗ ರುಕುಮಾಯಿ ಸೇವಾ ಟ್ರಸ್ಟ ಇಟಿಗಟ್ಟಿ, ತಾ.ಜಿ, ಧಾರವಾಡ ಹಾಗೂ ಕನ್ನಡ ಮತ್ತು ಸ೦ಸ್ಥತಿ ಇಲಾಖೆ, ಬೆಂಗಳೂರು, ಇವರ ಸ೦ಯುಕ್ತ ಅಶ್ರಯದಲ್ಲ ದಿನಾ0ಕ 4 ರಿಂದ 8 ರ ವರೆಗೆ 5 ದಿನಗಳ ಕಾಲ ಸ್ಥಳೀಯ ಕಲಾವಿದರಿಂದ ಹಾಗೂ ಉತ್ತರ ಕರ್ನಾಟಕ ಹಿರಿಯ ಕಲಾವಿದರಿಂದ ಸಾ೦ಸ್ಥತಿಕ ಮನೋರ೦ಜನೆ ಕಾರ್ಯಕ್ರಮ ರಾತ್ರಿ 8 ರಿಂಂದ 11 ಗಂಟೆಯವರೆಗೆ ನಡೆಯುವವು ಎಂದು ತಿಳಸಿದರು. 
              ನಾಮಪದ ಅಥವಾ ನಮಾರ್ಥಾ ಸ್ಥಿರ ಎಂದಾಗುತ್ತದೆ, ಈಟಿ+ಗಟ್ಟಿ=ಈಟಿಗಟ್ಟಿ ಎಂಬ ಶಬ್ದಾರ್ಥ ಸ್ಥಿರವಾದ ಕಠಿಣವಾದ ಶಕ್ತಿ ಶಾಲಿಯಾದ, ಬಲ, ಬಾಳಿಕೆಯ ಭರ್ಚಿಯನ್ನು ತಯಾರಿಸುವ ಗ್ರಾಮ ಈ ಶಸ್ತ್ರಗಳನ್ನು ಶಾತವಾಹನರು, ಕದಂಬರು, ಗಂಗರು, ಬಾದಾಮಿಯ ಚಾಲುಕ್ಯರು, ಹೊಯ್ಸಳ ರಾಜ ಮಹಾರಾಜರುಗಳಿಗೆ ಯುದ್ಧಕ್ಕೆ ಭರ್ಚಿಗಳನ್ನು ಪೂರೈಕೆ ಮಾಡುವ ಈ ಊರಿಗೆ ಇಟಿಗಟ್ಟಿ ಎಂದು ಹೆಸರು ಬಂದಿರುವುದು ಸಂಶೋಧನೆಯ ಮುಖಾಂತರ ಬಹಳ ಸ್ಪಷ್ಟವಾಗಿದೆ ಎಂದರು . ಪತ್ರಿಕಾಗೋಷ್ಟಿಯಲ್ಲಿ ಆನಂದ ಜಾಧವ,ವಿಜಯ ಬಸನಕೂಪ್ಪ,ಚನ್ನಬಸಪ್ಪ ನವಲೂರ,ಎ ಬಿ ಚನವೀರಗೌಡರ ವಿನಾಯಕ ರೇವಡಿಹಾಳ ಇದ್ದರು.
ನವೀನ ಹಳೆಯದು

نموذج الاتصال