ಸುವರ್ಣ ಸಂಭ್ರಮ
ಕರ್ನಾಟಕ ಯುನಿವರ್ಸಿಟೆ ಪಬ್ಲಿಕ್ ಸ್ಕೂಲ್, ಧಾರವಾಡದ 1973-74 ನೇ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿ-ವಿದ್ಯಾರ್ಥಿನಿಯರೆಲ್ಲ ಐದು ದಶಕಗಳ ನಂತರ ಸೇರಿ ಪರಸ್ಪರ ಅಭಿನಂದಿಸಿ ಆನಂದಿಸಿ ತಮಗೆ ವಿದ್ಯಾ ದಾನ ಮಾಡಿದ ಗುರುವೃಂದಕ್ಕೆ ಪುಷ್ಪವೃಷ್ಟಿಗೈದು ಸಂಭ್ರಮಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಡಾ.ರಾಜೇಶ್ವರಿ ಕುಬೀಹಾಳ ಗಿಡಗಳಿಗೆ ನೀರೆರದು ಚಾಲನೆ ನೀಡಿದರು.
ಗುರುಗಳಾದ ಡಾ. ರಾಮಚಂದ್ರ ಜಂಟ್ಲಿ ರವರು ಮಾತನಾಡುತ್ತ ಈ ಗೌರವ ನಮಗೆ ನೋಬೆಲ್ ಪಾರಿತೋಷಕ ಸಿಕ್ಕಷ್ಟೇ ಸಂತಸ ತಂದಿದೆ ಎಂದರು.
ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಸವಿನೆನಪಿಗಾಗಿ ಸಿಹಿ ಹಂಚಿ, ಪೆನ್ನುಗಳನ್ನು, ಸ್ಟೀಲಿನ ಡಬ್ಬಗಳನ್ನು ಉಪಹಾರ ನೆನಪಿನ ಕಾಣಿಕೆಯಾಗಿ ನೀಡಿದರು.
ಕಾರ್ಯಕ್ರಮದ
ಅಧ್ಯಕ್ಷತೆಯನ್ನು ಎ.ಬಿ. ನಾಯಕ, ಪ್ರಿನ್ಸಿಪಾಲರು ವಹಿಸಿ, ಶಾಲೆಯ ಇಂದಿನ ಸ್ಥಿತಿ-ಗತಿಗಳನ್ನು ವಿವರಿಸಿದರು.
ಬೇರೆ ಬೇರೆ ರಾಜ್ಯ, ದೇಶ, ವಿದೇಶಗಳಿಂದ ಆಗಮಿಸಿದ್ದ ಎಲ್ಲಾ ವಿದ್ಯಾರ್ಥಿಗಳು ತಮ್ಮ ಈವರೆಗಿನ ಸಾಧನೆ ಹಾಗೂ ಪರಿಚಯ ನೀಡಿದರು.
2023. ನಮ್ಮದೇ ಸಹಪಾಠಿಯಾದಂತಹ ಬಿ.ವಿ. ಶಿವಯೋಗಿ ಇವರ ಮಗಳು ಶ್ರೀದೇವಿ, 2023 ರ ಯು.ಪಿ.ಎಸ್.ಸಿ ಕರ್ನಾಟಕ ಕೇಡರ್‌ನಲ್ಲಿ ಐ.ಪಿ.ಎಸ್ ಉತ್ತೀರ್ಣಳಾಗಿದ್ದು, ಅವಳನ್ನು ಸತ್ಕರಿಸಲಾಯಿತು.
ಶಾಲೆಯ ವಿದ್ಯಾರ್ಥಿಗಳಿಗೆ ಗುರು-ಹಿರಿಯರಲ್ಲಿ ಶೃದ್ಧೆ ಹಾಗೂ ಅವರ ಮಾರ್ಗದರ್ಶನದಲ್ಲಿ ಛಲ ಬಿಡದೆ ಶ್ರಮಿಸಿದರೆ ಗುರಿ ಸಾಧಿಸುವುದರಲ್ಲಿ ಸಂದೇಹವಿಲ್ಲ ಎಂದು ಉತ್ತೇಜನಾತ್ಮಕ ಹಿತವಚನ ನೀಡಿದಳು.
ಪ್ರಾರ್ಥನೆ ಮಮತಾ ಒಡೆಯರ
ಮಹೇಶ ಮಾಮಲೇದೇಸಾಯಿ ಹಾಗೂ ಶೈಲಾ ಹಿರೇಮಠ ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರೂಪಿಸಿದರು. ಶೈಲಜಾ ಶಿರಿಯಣ್ಣವರ ವಂದನಾರ್ಪಣೆ ಮಾಡಿದರು. ಸಹಭೋಜನದೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತು.