ಕೇಂದ್ರ ಸರ್ಕಾರದ ರಾಷ್ಟ್ರೀಯ ಪುರಸ್ಕಾರ ಶಿಕ್ಷಣ ಶಿಷ್ಯವೇತನ' (ಎನ್‌ಎಂಎಂಎಸ್,) ಸಾಧನೆ.
ಧಾರವಾಡ ಗ್ರಾಮೀಣ 04 :
ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಹಣಕಾಸು ಪುರಸ್ಕಾರ ಒದಗಿಸುವ ರಾಷ್ಟ್ರಮಟ್ಟದಲ್ಲಿ ಏಕ ರೂಪದಲ್ಲಿ ನಡೆಯುವ ಕೇಂದ್ರ ಸರ್ಕಾರದ ಎನ್‌ಎಂಎಂಎಸ್ 'ರಾಷ್ಟ್ರೀಯ ಪುರಸ್ಕಾರ ಶಿಕ್ಷಣ ಶಿಷ್ಯವೇತನ' ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಧಾರವಾಡ ಗ್ರಾಮೀಣ ತಾಲ್ಲೂಕಿನಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಪುರಸ್ಕಾರಕ್ಕೆ ಅರ್ಹತೆ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
2024 -25 ನೇ ಶೈಕ್ಷಣಿಕ ವರ್ಷದಲ್ಲಿ 8 ನೇ ತರಗತಿಗೆ ಓದುವ ಮಕ್ಕಳಿಗಾಗಿ ನಡೆದ ಪರೀಕ್ಷೆಗೆ ತಾಲ್ಲೂಕಿನ 1400 ವಿದ್ಯಾರ್ಥಿಗಳು ಹಾಜರಾಗಿದ್ದರು. ಆಯ್ಕೆಯಾಗಿರುವ ಧಾರವಾಡ ಜಿಲ್ಲೆಯ 191 ವಿದ್ಯಾರ್ಥಿಗಳ ಪೈಕಿ ಧಾರವಾಡ ಗ್ರಾಮೀಣ ತಾಲ್ಲೂಕಿನ 75 ವಿದ್ಯಾರ್ಥಿಗಳು ನಿಗದಿತ ಅರ್ಹತೆ ಪಡೆಯುವ ಮೂಲಕ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ ಮತ್ತು ಶಿಕ್ಷಣ ಸಂಯೋಜಕರು ಹಾಗೂ ಎನ್.ಎಂ.ಎಂ.ಎಸ್. ನೋಡಲ್ ಅಧಿಕಾರಿಯಾದ ಬಸವರಾಜ ಛಬ್ಬಿ, ಬಿಇಓ, ಬಿಆರಸಿ ತಂಡ ಆರಂಭವಾದಾಗಿನಿಂದಲೂ ಪರೀಕ್ಷೆ ಪೂರ್ವ ಸಿದ್ದತೆ ತಾಲ್ಲೂಕಿನ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳೇ ಅರ್ಹತೆ ಪಡೆಯುತ್ತ ಪ್ರಯತ್ನದ ಫಲ ಬಂದಿದೆ. ಈ ಬಾರಿಯೂ ಜಿಲ್ಲಾ ಮಟ್ಟದಲ್ಲಿ ಉತ್ತಮ ಸಾಧನೆಗೈದಿರುವುದು ಹೆಮ್ಮೆಯ ಸಂಗತಿ' ಎಂದರು.
ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ ಗರಗದ ರಕ್ಷಿತ ಭೀಮನಗೌಡ ಪಾಟೀಲ್ 124 ಅಂಕ ಪಡೆದು ಜಿಲ್ಲೆಯಲ್ಲಿಯೆ ಅತೀ ಹೆಚ್ಚು ಅಂಕಪಡೆದ ವಿದ್ಯಾರ್ಥಿನಿ.
ಸಂಪನ್ಮೂಲ ಶಿಕ್ಷಕರುಗಳಿಗೆ 'ಸ್ಪರ್ಧಾ ಯಶಸ್ಸು' ಪುಸ್ತಕಗಳು ಮತ್ತು ಈ ಪರೀಕ್ಷೆಗೆ ಸಂಬಂಧಿಸಿದ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಒದಗಿಸಲಾಗುತ್ತದೆ. ಆ ಶಿಕ್ಷಕರು ಶಾಲಾ ಹಂತದಲ್ಲಿ 8 ನೇ ತರಗತಿಯ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಕಾಳಜಿ ಪೂರ್ವಕವಾಗಿ ತರಬೇತಿ ನೀಡಿದ ಫಲವಾಗಿ ಹಾಗೂ ತಾಲೂಕಾ ಮಟ್ಟದ ವಿದ್ಯಾರ್ಥಿಗಳಿಗೆ ಎನ್‌ಎಂಎಂಎಸ್ ಪರೀಕ್ಷೆಯ ಕುರಿತು ಕಾರ್ಯಗಾರ ಮಾಡಲಾಯಿತು. ಇದರ ಫಲವಾಗಿ ತಾಲ್ಲೂಕಿನ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಪುರಸ್ಕಾರ ಶಿಷ್ಯವೇತನಕ್ಕೆ ಆಯ್ಕೆಯಾಗಲು ಸಾಧ್ಯವಾಗಿದೆ' ಎಂದರು.
ಏನಿದು ಯೋಜನೆ: ಆರ್ಥಿಕವಾಗಿ ಹಿಂದುಳಿದಿರುವ ಅದರಲ್ಲೂ ಪ್ರತಿಭಾವಂತ ವಿದ್ಯಾರ್ಥಿಗಳು ಶೈಕ್ಷಣಿಕ ಮುಖ್ಯವಾಹಿನಿಯಿಂದ ಹೊರಗೆ ಉಳಿಯದೆ ನಿರಂತರ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಹಣಕಾಸಿನ ನೆರವು ಕಲ್ಪಿಸುವುದು ಎನ್‌ಎಂಎಂಎಸ್ ಅರ್ಹತಾ ಪರೀಕ್ಷೆಯ ಮುಖ್ಯ ಉದ್ದೇಶ. ಈ ಸ್ಪರ್ಧಾತ್ಮಕ ಪರೀಕ್ಷೆಯನ್ನು ಪ್ರತಿವರ್ಷ ನಡೆಯುತ್ತದೆ. ಪರೀಕ್ಷೆಯ ಮೂಲಕ ಅರ್ಹ ವಿದ್ಯಾರ್ಥಿಗಳನ್ನು ಗುರುತಿಸಿ 9 ನೇ ತರಗತಿಯಿಂದ ದ್ವಿತೀಯ ಪಿಯುವರೆಗೆ ಪ್ರತಿ ತಿಂಗಳು ತಲಾ ₹ 1,000 ದಂತೆ ವರ್ಷಕ್ಕೆ ಒಟ್ಟು ₹ 12,000 ಪ್ರತಿಭಾ ಪುರಸ್ಕಾರ ಒದಗಿಸಲಾಗುತ್ತದೆ.
ಪರೀಕ್ಷೆಯಲ್ಲಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪುರಸ್ಕಾರ ಶಿಷ್ಯವೇತನಕ್ಕೆ ಅರ್ಹತೆ ಗಳಿಸುವ ನಿಟ್ಟಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಅಗತ್ಯ ಇರುವ ಎಲ್ಲ ರೀತಿಯ ಸಹಕಾರ ನೀಡಲಿದೆ' ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ ಹೇಳಿದ್ದಾರೆ.