ಮೇ 10 ರ ವರೆಗೆ ಜಿಲ್ಲೆಯಲ್ಲಿ ಭಗವದ್ಗೀತೆ ಅಭಿಯಾನ .
ಧಾರವಾಡ : ತ್ರೈತ ಸಿದ್ಧಾಂತ ಭಗವದ್ಗೀತೆ ಹಾಗೂ ಅದರ ಅನುಬಂಧ ಗ್ರಂಥಗಳ ಜ್ಞಾನ ಪ್ರಚಾರ ಕಾರ್ಯಕ್ರಮವು ಮೇ 01 ರಿಂದ ಜಿಲ್ಲೆಯಲ್ಲಿ ಆರಂಭಗೊಂಡಿದ್ದು, ಮೇ 10 ರವರೆಗೆ ನಡೆಯಲಿದೆ.
ಧಾರವಾಡ, ಹುಬ್ಬಳ್ಳಿ, ಕಲಘಟಗಿ, ಅಣ್ಣಿಗೇರಿ, ಅಳ್ನಾವರ, ನವಲಗುಂದ, ಕುಂದಗೋಳ ಸೇರಿದಂತೆ ಇಡೀ ಜಿಲ್ಲೆಯಲ್ಲಿ ಈ ಪ್ರಚಾರ ಅಭಿಯಾನ ಜರುಗಲಿದ್ದು, ಆಂಧ್ರಪ್ರದೇಶ ಹಾಗೂ ತೆಲಂಗಾಣದಿಂದ ಬಂದಿರುವ ಪ್ರಬೋಧ ಆಶ್ರಮ-ಶ್ರೀಕೃಷ್ಣ ಮಂದಿರದ ಭಕ್ತರು ಭಾಗಿಯಾಗಿದ್ದಾರೆ.
ಶ್ರೀಕೃಷ್ಣ ಪರಮಾತ್ಮ ಬೋಧಿಸಿರುವ ಭಗವದ್ಗೀತೆಯಲ್ಲಿನ ಪುರುಷೋತ್ತಮ ಪ್ರಾಪ್ತಿ ಯೋಗದ 16 ಹಾಗೂ 17 ನೇ ಶ್ಲೋಕಗಳಲ್ಲಿನ ಜೀವಾತ್ಮ (ಕ್ಷರನು), ಆತ್ಮ (ಅಕ್ಷರನು), ಪರಮಾತ್ಮ (ಪುರುಷೋತ್ತಮನು) ಎನ್ನುವ ಮೂರು ಆತ್ಮಗಳನ್ನು ಆಧಾರ ಮಾಡಿಕೊಂಡು "ತ್ರೈತ ಸಿದ್ಧಾಂತ" ವನ್ನು ಶ್ರೀ ಆಚಾರ್ಯ ಪ್ರಬೋಧಾನಂದ ಯೋಗೀಶ್ವರರು ಪ್ರತಿಪಾದಿಸಿರುತ್ತಾರೆ.
ಶ್ರೀಕೃಷ್ಣ ಪರಮಾತ್ಮರು ತಿಳಿಸಿರುವ ಜೀವಾತ್ಮ ,ಆತ್ಮ ,ಪರಮಾತ್ಮ ಎನ್ನುವ ಮೂರು ಆತ್ಮಗಳನ್ನು ಆಧಾರ ಮಾಡಿಕೊಂಡು ಶ್ರೀ ಆಚಾರ್ಯ ಪ್ರಬೋಧಾನಂದ ಯೋಗೀಶ್ವರರು ಸುಮಾರು ನೂರಕ್ಕಿಂತಲೂ ತ್ರೈತ ಸಿದ್ಧಾಂತ ಆಧ್ಯಾತ್ಮಿಕ ಗ್ರಂಥಗಳನ್ನು ರಚಿಸಿರುತ್ತಾರೆ. ಹೀಗಾಗಿ ಮಾನವನ ಅಜ್ಞಾನ ಜನಿತ ತನ್ನ ಮೂಢನಂಬಿಕೆಗಳಿಂದ ಆತ್ಮಜ್ಞಾನದ ಕಡೆಗೆ ನಡೆದು ಪರಮ ಶಾಂತಿಯನ್ನು ಹೊಂದಬೇಕೆಂದರೆ ತ್ರೈತ ಸಿದ್ಧಾಂತ ಗ್ರಂಥಗಳಿಂದ ಮಾತ್ರವೇ ಸಾಧ್ಯ ಎನ್ನುವ ಸಂದೇಶವನ್ನು ತಿಳಿಸಲು ಸುಮಾರು 250 ಭಕ್ತರ ಮುಖಾಂತರ ತ್ರೈತ ಸಿದ್ಧಾಂತ ದೈವ ಗ್ರಂಥಗಳ ಪ್ರಚಾರ ಕಾರ್ಯ ಸಾಗಿದೆ.
ಈ ಅಭಿಯಾನದಲ್ಲಿ ಮನೋಹರ್, ಭರತ್, ಶ್ರೀದೇವಿ, ಯೋಗೇಶ್, ಆದಿ, ನಾಗರಾಜ್, ಚಂದ್ರು, ಶಿವರಾಜ್, ರವಿ, ಮಲ್ಲಿಕಾರ್ಜುನ, ರಾಘವೇಂದ್ರ, ವಿಶ್ವಮೂರ್ತಿ, ಬಾಲಯ್ಯ, ನರೇಶ್, ವೆಂಕಟೇಶ್, ನಾಗಭೂಷಣ್,ಆದಿನಾರಾಯಣ, ಹರಿ, ಮಾಣಿಕ್ಯಂ ಸೇರಿದಂತೆ ಹಲವರು ಇದ್ದರು.