DHARWAD:ಕರ್ನಾಟಕ ವಿಶ್ವ ವಿದ್ಯಾಲಯಕ್ಕೆ ನೂತನವಾಗಿ ಆಗಮಿಸಿದಂತಹ ಕುಲಪತಿಗಳಾದ ಡಾ|| ಎ.ಎಮ್ ಖಾನ ರವರಿಗೆ ಸನ್ಮಾನಿಸಲಾಯಿತು,


 ಧಾರವಾಡ ಜಿಲ್ಲಾ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಎನ್.ಎಸ್.ಯು.ಐ ವತಿಯಿಂದ ಕರ್ನಾಟಕ ವಿಶ್ವ ವಿದ್ಯಾಲಯಕ್ಕೆ ನೂತನವಾಗಿ ಆಗಮಿಸಿದಂತಹ ಕುಲಪತಿಗಳಾದ ಡಾ|| ಎ.ಎಮ್ ಖಾನ ರವರಿಗೆ ಸನ್ಮಾನಿಸಲಾಯಿತು,
ಮೂಲತಃ ಧಾರವಾಡದವರಾಗಿರುವ ಇವರು ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪದವಿ ಪಡೆದು ಮುಂದೆ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಮೌಲ್ಯಮಾಪನ ಕುಲಸಚಿವರಾಗಿ ಹಾಗೂ ಅನುಭವ ಇವರಿಗಿರುವುದು ಆಡಳಿತದ ಕುಲಸಚಿವರಾಗಿ
 ನಿರ್ವಹಿಸಿರುವ ಕಾರ್ಯ ತಿಳಿದು ಸಂತಸಪಡುತ್ತೇವೆ, ಅಲ್ಪಸಂಖ್ಯಾತರಾಗಿರುವ ಇವರು ಎಲೆಕ್ಟ್ರಾನಿಕ್ಸನಲ್ಲಿ ಸ್ನಾತಕೋತ್ತರ ಪದವಿ ಪಡೆದು ಇಸ್ರೋ (ISRO) ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ತಮ್ಮದೇ ಚಾಪನ್ನು ಮೂಡಿಸಿರುವ ಇವರು ಕರ್ನಾಟಕದಲ್ಲೇ ಹೆಸರು ವಾಸಿಯಾದಂತಹ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾಗಿ
 ನೇಮಕಗೊಂಡಿರುವದನ್ನು ನಾವು ಜಿಲ್ಲಾ ಎನ್.ಎಸ್.ಯು.ಐ ವತಿಯಿಂದ ಸ್ವಾಗತಿಸುತ್ತೇವೆ. ಪ್ರದಾನ ಕಾರ್ಯದರ್ಶಿ ರಾಬರ್ಟ ದದ್ದಾಪುರಿ
 ಕೆ.ಪಿ.ಸಿ.ಸಿ ಎನ್.ಎಸ್.ಯು.ಐ ನ ರಾಜ್ಯ ಉಪಾಧ್ಯಕ್ಷ ರೋಹನ ಹಿಪ್ಪರಗಿ, ಜಿಲ್ಲಾಧ್ಯಕ್ಷ ಸೌರಭ ಮಾಸಿಕರ, ಪಶ್ಚಿಮ ವಿದಾನಸಭಾ ಕ್ಷೇತ್ರದ ಅಧ್ಯಕ್ಷ ಕಮರ್ ತಮಟಗಾರ, ಕಾರ್ಯದರ್ಶಿ ತರುಣ ನಾಯಕ, ಹಾಗೂ ಮಾರುಫ ನದಾಫ, ಸುಪ್ರಿತ ಕುಮಾರ, ಕಿರಣ ದೊಡಮನಿ, ಸಾಯಿದ ನದಾಫ, ಜಫರ ಇನ್ನಿತರರು ಉಪಸ್ಥಿತರಿದ್ದರು.
ನವೀನ ಹಳೆಯದು

نموذج الاتصال