**ಹುಬ್ಬಳ್ಳಿಯಲ್ಲಿ KMCRI ನ ನೂತನ ನಿರ್ದೇಶಕರಾಗಿ ನೇಮಕವಾದ ಡಾ. ಈಶ್ವರ್ ಹೊಸಮನಿ ಅವರಿಗೆ ಸನ್ಮಾನ — ಸೋನಿಯಾ ಎಜುಕೇಶನ್ ಟ್ರಸ್ಟ್ ಕಾಲೇಜ್ ಆಫ್ ಫಾರ್ಮಸಿ ವತಿಯಿಂದ ಗೌರವ**
ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (KMCRI), ಹುಬ್ಬಳ್ಳಿಯ ನೂತನ ನಿರ್ದೇಶಕರಾಗಿ ನೇಮಕಗೊಂಡಿರುವ ಸರ್ಜರಿ ವಿಭಾಗದ ಪ್ರಮುಖರಾದ ಡಾ. ಈಶ್ವರ್ ಹೊಸಮನಿ ಅವರನ್ನು ಸೋನಿಯಾ ಎಜುಕೇಶನ್ ಟ್ರಸ್ಟ್ ಕಾಲೇಜ್ ಆಫ್ ಫಾರ್ಮಸಿ ವತಿಯಿಂದ ಭಾವಪೂರ್ವಕವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ವೇಳೆ ಟ್ರಸ್ಟ್ ನಿರ್ದೇಶಕರಾದ ಶ್ರೀ ನವೀನ್ ಡಂಬಲ್ ಅವರು ಡಾ. ಈಶ್ವರ್ ಹೊಸಮನಿ ಅವರಿಗೆ ಕಾಲೇಜಿನ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ, ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ವೈದ್ಯಕೀಯ ಕ್ಷೇತ್ರದಲ್ಲಿ ಅವರ ಸೇವೆ ಮತ್ತು ಶೈಕ್ಷಣಿಕ ಸಾಧನೆಗಳನು ಪ್ರಶಂಸಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಉಪನ್ಯಾಸಕರಾದ ಡಾ. ಆದರ್ಶ ಜಿ. ಎಸ್., “ಡಾ. ಈಶ್ವರ್ ಹೊಸಮನಿ ಅವರು ಅತ್ಯಂತ ಶಿಸ್ತಿನ ನಿರ್ವಹಣೆಯೊಂದಿಗೆ, ಸದಾ ವಿದ್ಯಾರ್ಥಿಗಳಿಗೆ ಮತ್ತು ಸಹೋದ್ಯೋಗಿಗಳಿಗೆ ಮಾದರಿಯಾಗಿದ್ದಾರೆ. ಅವರ ಸರಳತೆ, ನಿಷ್ಠೆ ಮತ್ತು ಕಾರ್ಯ ಎಲ್ಲರಿಗೂ ಪ್ರೇರಣೆಯಾಗಿದೆ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆರ್ಥೋಪೆಡಿಕ್ ವಿಭಾಗದ ಡಾ.ಸೂರ್ಯಕಾಂತ್ ವಿದ್ಯಾರ್ಥಿಗಳಾದ ಗೌತಮ್, ಪ್ರಂಜಲ್ ಎ. ಸಂಕಪಾಲ್,ಹೇಮಶ್ರೀ, ಚೇತನಾ, ಮಂಜುನಾಥ ಬೆಂದಿಗೇರಿ, ನಿವೇದಿ, ವಿನಿತ್ ಕುಮಾರ್, ಅಭಿಷೇಕ್ ಸಾಕರೆ, ಶುಭಾಂಗಿ,ಭಗಿರಥಿ*, ನಿಕಿತಾ ಆರಿ, ದರ್ಶನಸ್ವಾಮಿ,ಅಕ್ಷಯ ಮತ್ತು ಇತರರು ಉಪಸ್ಥಿತರಿದ್ದು, ಈ ಘನ ಕ್ಷಣಕ್ಕೆ ಸಾಕ್ಷಿಯಾಗಿದರು.
ಡಾ. ಈಶ್ವರ್ ಹೊಸಮನಿಯ ನೇಮಕವು KMCRI ಗೆ ಹೊಸ ಶಕ್ತಿಯ ರೂಪವಾಗಿ ಪರಿಗಣಿಸಲಾಗುತ್ತಿದ್ದು, ಅವರ ನೇತೃತ್ವದಲ್ಲಿ ಸಂಸ್ಥೆ ಇನ್ನಷ್ಟು ಉನ್ನತಿಮಟ್ಟಕ್ಕೇರಲಿದೆ ಎಂಬ ವಿಶ್ವಾಸವನ್ನು ಎಲ್ಲರೂ ವ್ಯಕ್ತಪಡಿಸಿದರು.