ವಿಶೇಷ ಅಗತ್ಯವುಳ್ಳ ಮಕ್ಕಳ ಕುರಿತು ಅಂಗನವಾಡಿ ಕಾರ್ಯಕರ್ತರಿಗೆ ಒಂದು ದಿನದ ತರಬೇತಿ ಕಾರ್ಯಗಾರ .
OR ಅಂಗವಿಕಲರು ಕೂಡಾ ಮನುಷ್ಯರೇ. ಅವರಿಗೂ ಭಾವನೆಗಳಿವೆ - ಆರ್.ಆರ್.ಸದಲಗಿ.
ಧಾರವಾಡ ಗ್ರಾಮೀಣ 08 :
ವಿಶೇಷ ಚೇತನ ಮಕ್ಕಳಲ್ಲಿ ವಿಶೇಷ ಸಾಮರ್ಥ್ಯವಿದ್ದು, ಅದನ್ನು ಅಂಗನವಾಡಿಯಲ್ಲಿ ಗುರುತಿಸಿ ಪ್ರಬುದ್ಧ ಮಟ್ಟಕ್ಕೆ ಬೆಳೆಸಲು ಪ್ರಯತ್ನಿಸುವದರೊಂದಿಗೆ ಜೀವನ ಕೌಶಲ್ಯಗಳನ್ನು ರೂಢಿ ಮಾಡಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್.ಆರ್.ಸದಲಗಿ ಕರೆನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಧಾರವಾಡ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸಮನ್ವಯಾಧಿಕಾರಿಗಳ ಕಾರ್ಯಾಲಯ, ಧಾರವಾಡ ಗ್ರಾಮೀಣ, ದಿ ಅಸೋಸಿಯೇಷನ್ ಪೀಪಲ್ ವಿಥ್ ಡಿಸೆಬಿಲಿಡಿ, ಬೆಂಗಳೂರು (ಎಪಿಡಿ) ಜನಮುಖಿ ಸ್ವಯಂ ಸೇವಾ ಸಂಸ್ಥೆ, ಧಾರವಾಡ ಮಕ್ಕಳ ಪೌಷ್ಠಿಕಾಂಶ ಕುರಿತು ಜಾಗೃತಿ ಹಾಗೂ ವಿಶೇಷ ಚೇತನ ಮಕ್ಕಳನ್ನು ಪ್ರಾಥಮಿಕ ಶಾಲೆಗೆ ದಾಖಲೆ ಮಾಡುವ ಕುರಿತು ಅಂಗನವಾಡಿ ಶಿಕ್ಷಕಿಯರಿಗೆ ಒಂದು ದಿನದ ಕಾರ್ಯಾಗಾರ ಸಹಯೋಗದಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳ ಶೀಘ್ರ ಪತ್ತೆ ಹಚ್ಚುವಿಕೆ ಮತ್ತು ಆರಂಭಿಕ ಶಿಕ್ಷಣದ ಕುರಿತು ಅಂಗನವಾಡಿ ಕಾರ್ಯಕರ್ತರಿಗೆ ಒಂದು ದಿನದ ತರಬೇತಿ ಕಾರ್ಯಗಾರ ಸರಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆಯ ಧಾರವಾಡದಲ್ಲಿ ಹಮ್ಮಿಕೊಳ್ಳಲಾಗಿತ್ತು. ಅವರು ಮತನಾಡುತ್ತಾ ಅವರೊಂದಿಗೆ ಸದಾ ಶಾಲಾ ಶಿಕ್ಷಣ ಇಲಾಖೆ ಇದೆ, ಅಂಗವಿಕಲರು ಕೂಡಾ ಮನುಷ್ಯರೇ. ಅವರಿಗೂ ಭಾವನೆಗಳಿವೆ, ಜಗತ್ತಿನ ಆಗುಹೋಗುಗಳಿಗೆ ಸ್ಪಂದಿಸುವ ಬೌದ್ಧಿಕ ಸಾಮರ್ಥ್ಯವಿದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಅವರನ್ನು ಪ್ರತ್ಯೇಕವಾಗಿ ಪರಿಗಣಿಸುವ ಪರಿಪಾಠವೂ ಕೆಲವೆಡೆ ಕಾಣಿಸುತ್ತಿದೆ. ಅಥವಾ ಕೆಲವೆಡೆ ಅವರಿಗೆ ಇನ್ನಿಲ್ಲದ ಅನುಕಂಪ ತೋರುವುದು ಇದೆ. ಇದು ತಪ್ಪು. ಅಂಗವಿಕಲರಿಗೂ ಸ್ವಾಭಿಮಾನದಿಂದ ಬದುಕುವ ಹಕ್ಕಿದೆ. ಅವರು ಸಮಾಜದ ಮುಖ್ಯವಾಹಿನಿಗಳಲ್ಲಿ ಗುರುತಿಸಿಕೊಳ್ಳಬೇಕು ಎಂದರು.
ಧಾರವಾಡ ತಾಲೂಕ ಮಹಿಳಾ ಮತ್ತು ಮಕ್ಕಳ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಮಂಜುನಾಥ ಕುಂಬಾರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಾ ವಿಶೇಷ ಚೇತನ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು. ನಮಗೆಲ್ಲರಿಗೂ ನಿಸರ್ಗ ಸರಿಯಾದ ಅಂಗಾಂಗಗಳನ್ನು ನೀಡಿದ್ದಾರೆ. ಆದರೆ ಕೆಲವು ಮಕ್ಕಳಿಗೆ ನೂನ್ಯತೆಯನ್ನು ನೀಡಿದ್ದಾರೆ. ನೂನ್ಯತೆಯನ್ನು ಹೊಂದಿರುವ ಮಕ್ಕಳು ಅಂನವಾಡಿಯಲ್ಲಿ ಗುರುತ್ತಿಸಿ ಫಿಜಿಯೋಥೇರಪಿ ಮಾಡುವುದರಿಂದ ಸಬಲೀಕರಣ ಸಾಧ್ಯ ಎಂದರು.
ಫಿಜಿಯೋಥೆರಪಿ ವೈದ್ಯರಾದ ಸುಜಾತ ನಾಯಕ್ ಮಾತನಾಡುತ್ತಾ ವಿಕಲಚೇತನ ಮಕ್ಕಳಿಗೆ ಫಿಸಿಯೋಥೆರಫಿ ಚಿಕಿತ್ಸಾ ವಿಧಾನದಿಂದ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗಳಾಗುತ್ತಿವೆ ಎಂದು ಹೇಳಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾತನಾಡುತ್ತಾ. ವಿಕಲಚೇತನ ಮಕ್ಕಳನ್ನು ನೋಡಿಕೊಳ್ಳುವ ಹೆತ್ತವರು ಮತ್ತು ಶಿಕ್ಷಣ ನೀಡುವ ಶಿಕ್ಷಕರು ಹಾಗೂ ಚಿಕಿತ್ಸೆ ನೀಡುವ ವರ್ಗಕ್ಕೆ ಹೆಚ್ಚಿನ ತಾಳ್ಮೆ ಮತ್ತು ಸಹನೆಯ ಅಗತ್ಯವಿದ್ದು ಇದನ್ನು ಮೈಗೂಡಿಸಿಕೊಳ್ಳಬೇಕಾಗಿದೆ ಎಂದರು.
ಕುಮಾರ್ ಕೆ ಎಫ್ ಕ್ಷೇತ್ರ ಸಮನ್ವಯ ಅಧಿಕಾರಿ ಮಾತನಾಡುತ್ತಾ ಬಹುತೇಕ ಸಂದರ್ಭಗಳಲ್ಲಿ ಅವರನ್ನು ಪ್ರತ್ಯೇಕವಾಗಿ ಪರಿಗಣಿಸುವ ಪರಿಪಾಠವೂ ಕೆಲವೆಡೆ ಕಾಣಿಸುತ್ತಿದೆ. ಅಥವಾ ಕೆಲವೆಡೆ ಅವರಿಗೆ ಇನ್ನಿಲ್ಲದ ಅನುಕಂಪ ತೋರುವುದು ಇದೆ. ಇದು ತಪ್ಪು. ಅಂಗವಿಕಲರಿಗೂ ಸ್ವಾಭಿಮಾನದಿಂದ ಬದುಕುವ ಹಕ್ಕಿದೆ. ಅವರು ಸಮಾಜದ ಮುಖ್ಯವಾಹಿನಿಗಳಲ್ಲಿ ಗುರುತಿಸಿಕೊಳ್ಳಬೇಕು. ಅಂಗವಿಕಲರಿಗೆ ಸರಕಾರದಿಂದ ಇರುವ ಸೌಲಭ್ಯಗಳನ್ನು ವಿಸ್ತಾರವಾಗಿ ತಿಳಿಸಿದರು
ಜನಮುಖಿ ಸ್ವಯಂ ಸೇವಾ ಸಂಸ್ಥೆಯ ಬಸವರಾಜ ಮ್ಯಾಗೇರಿ ಮಾತನಾಡುತ್ತಾ ಹುಟ್ಟು ಎಂಬುದು ಆಕಸ್ಮಿಕವಾದರೆ ಸಾವು ನಿಶ್ಚಿತ. ಕೆಲವರು ಹುಟ್ಟುವಾಗಲೇ ವಿಕಲಚೇತನರಾದರೆ ಇನ್ನು ಕೆಲವರು ತಮ್ಮ ಜೀವನದಲ್ಲಿ ನಡೆಯುವ ಕೆಲವು ಘಟನೆಗಳಿಂದ ವಿಕಲಚೇತನರಾಗುತ್ತಾರೆ. ಇಂತಹ ಸಂದರ್ಭದಲ್ಲಿ ಹೆತ್ತವರು ಮತ್ತು ಸಮಾಜವು ಅವರು ಕುಗ್ಗದಂತೆ ಆತ್ಮಸ್ಥೈರ್ಯ ಮತ್ತು ಆತ್ಮವಿಶ್ವಾಸವನ್ನು ತುಂಬಿಸಿ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳುವಂತೆ ಮಾಡುವ ಜವಾಬ್ದಾರಿಯಿದೆ. ಅಂಗವಿಕಲತೆ ಅಂಗನವಾಡಿಯಲ್ಲಿ ಗುರತಿಸಿ ಎನ್ ಜಿ ಓ ಮೂಲಕ ಚಿಕಿತ್ಸೆ ಹಾಗೂ ಯು ಡಿ ಆಯ ಡಿ ಗುರುತಿನ ಚೀಟಿ ಕೊಡಿಸಲು ಸಹಾಯ ಮಾಡಿಸಲಾಗುವುದು ಎಂದು ತಿಳಿಸಿದರು.
ಸರಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆ ಧಾರವಾಡದ ಪ್ರಾಚಾರ್ಯರಾದ ರವಿಕುಮಾರ ಬಾರಾಟಾಕ್ಕೆ, ಆರಬಿಎಸಕೆ ವೈಧ್ಯರಾದ ಶೃತಿ ಹಾಗೂ ಸುನೀಲ, ಮಂಜುಳಾ ರಾಯನಗೌಡರ್, ಬಿ.ಐ.ಆರ್.ಟಿ ಶಿಕ್ಷಕರಾದ ಲಲಿತ ಹೊನ್ನವಾಡ,ಗೋಪಾಲ್ ಸೊನ್ನಹಳ್ಳಿ, ನಬೀಸಾಬ ಮುದ್ದೇಬಿಹಾಳ ಜನಮುಖಿ ಸ್ವಯಂ ಸೇವಾ ಸಂಸ್ಥೆಯ ವಿದ್ಯಾ ಮ್ಯಾಗೇರಿ, ನನಗೂ ಶಾಲೆಯ ಶಿಕ್ಷಕಿ ಪುಷ್ಪ ಮಾನೆ, ಸರೋಜಾ ಧಾರವಾಡ, ಪ್ರಭಾವತಿ ಕವಳಿ, ಅಕ್ಷತಾ ಪೂಜಾರ ಲಕ್ಷ್ಮೀ ಮಾಳಗಿಮನಿ, ಅಂಗನವಾಡಿ ಶಿಕ್ಷಕಿಯರು ಹಾಜರಿದ್ದು ಯಶಸ್ವಿಗೊಳಿಸಿದರು.
ಸ್ವಾಗತ ಅಕ್ಷತಾ ಪೂಜಾರ, ಪುಷ್ಪ ಮಾನೆ ನಿರೂಪಿಸಿದರು ಕೊನೆಯಲ್ಲಿ ಸರೋಜಾ ಧಾರವಾಡ ವಂದಿಸಿದರು.