8 ,9 ಮತ್ತು 10 ರಂದು ಬಯಲಾಟ ಹೊಸ ಸಾಧ್ಯತೆಗಳು ಶೀರ್ಷಿಕೆಯಡಿಯಲ್ಲಿ ಚಿಂತನ-ಮಂಥನ ಕಾರ್ಯಕ್ರಮ.
ಧಾರವಾಡ 06 : ಕರ್ನಾಟಕ ಬಯಲಾಟ ಅಕಾಡೆಮಿ, ಬಾಗಲಕೋಟೆ ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘ, ಸಂಯುಕ್ತ ಆಶ್ರಯದಲ್ಲಿ
ಬಯಲಾಟಗಳು ಹೊಸ ಸಾಧ್ಯತೆಗಳು ದಿ 08, 09 ಮತ್ತು 10 ರಂದು ಆಯೋಜಿಸಿದ ಎಂದು ಡಾ. ಕೆ ಆರ್. ದುರ್ಗಾದಾಸ್ ಅವರು ತಿಳಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಒಂದೂಂದು ಜಿಲ್ಲೆಯಲ್ಲಿ ಇನ್ನೂರ ರಿಂದ ಮುನ್ನೂರು ಕಲಾವಿದರು ಕನಾ೯ಟಕ ಆದ್ಯಂತ ಇದ್ದಾರೆ ಎಂದರು.
ಕರ್ನಾಟಕದ ಪಾರಂಪರಿಕ ಕಲೆಯಾದ ಬಯಲಾಟವನ್ನು ಆಧುನಿಕ ಜೀವನದ ಅಗತ್ಯಗಳಿಗೆ ತಕ್ಕಂತೆ ನವೀಕರಿಸಲು ಸಾಧ್ಯವೇ? ಎಂಬುದರ ಕುರಿತಾಗಿ ಚಿಂತನ-ಮಂಥನ ನಡೆಸಲು “ಬಯಲಾಟ : ಹೊಸ ಸಾಧ್ಯತೆಗಳು” ಎಂಬ ಶೀರ್ಷಿಕೆಯಡಿಯಲ್ಲಿ ದಿ 8 , 9 , ಹಾಗೂ 10 ರಂದು ಮೂರು ದಿನಗಳ ಕಾರ್ಯಕ್ರಮವನ್ನು ಕರ್ನಾಟಕ ಬಯಲಾಟ ಅಕಾಡೆಮಿ, ಬಾಗಲಕೋಟೆ ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘ, ಸಹಯೋಗದಲ್ಲಿ ಪಾಟೀಲ ಪುಟ್ಟಪ್ಪ ಸಭಾ ಭವನ ಧಾರವಾಡದಲ್ಲಿ ಆಯೋಜಿಸಲಾಗಿದೆ. ಕಾಲ ಬದಲಾದಂತೆ ಹೊಸತನವನ್ನು ಮೈಗೂಡಿಸಿ ಕೊಂಡ ಕಲಾ ಪ್ರಕಾರಗಳು ಹಿಂದಿನಿಂದ ಇಂದಿಗೂ ಉಳಿದುಕೊಂಡು ಬಂದಿವೆ. ಒಂದು ಕಾಲಕ್ಕೆ ತುಂಬಾ ಜನಪ್ರಿಯವಾಗಿದ್ದ ಸಹಸ್ರಾರು ಪ್ರೇಕ್ಷಕರಿಗೆ ಮನೋರಂಜನೆ ನೀಡುತ್ತಿದ್ದ ಬಯಲಾಟ ಕಲೆ ಇಂದು ಜನ ಮಾನಸದಿಂದ ನಿಧಾನಕ್ಕೆ ಕಣ್ಮರೆಯಾಗುತ್ತಿದೆಯೆನೋ ಎಂದೆನಿಸುತ್ತದೆ ಎಂದರು.
ಈ ದೃಷ್ಟಿಯಿಂದ ಈ ಕಲೆಯನ್ನು ಸಂರಕ್ಷಿಸಿಕೊಳ್ಳುವ ಕುರಿತು ಚರ್ಚಿಸಲು ವಿಚಾರ ಸಂಕಿರಣ ಹಾಗೂ ಪ್ರದರ್ಶನವನ್ನು ಕೂಡಿಯೇ ಆಯೋಜಿಸಲಾಗಿದೆ. ಜುಲೈ 8 ರಂದು ಬೆಳಗ್ಗೆ 10:30 ಗಂಟೆಗೆ ಈ ಕಾರ್ಯಕ್ರಮವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಅವರು ಉದ್ಘಾಟಿಸುವರು. ಬೆಂಗಳೂರು ಆಕಾಶವಾಣಿ ಕೇಂದ್ರದ ನಿವೃತ್ತ ನಿರ್ದೇಶಕರಾದ ಡಾ. ಬಸವರಾಜ ಸಾದರ ಅವರು ಆಶಯ ಭಾಷಣವನ್ನು ಮಾಡುವರು. ಖ್ಯಾತ ಹಿಂದೂಸ್ತಾನಿ ಗಾಯಕರಾದ ಪಂಡಿತ್ ವೆಂಕಟೇಶ್ ಕುಮಾರ್ ಅವರು ಅತಿಥಿಗಳಾಗಿ ಭಾಗವಹಿಸುವರು. ಬಯಲಾಟ ಅಕಾಡೆಮಿ ಅಧ್ಯಕ್ಷರಾದ ಡಾ. ಕೆ. ಆರ್. ದುರ್ಗಾದಾಸ ಅವರು ಅಧ್ಯಕ್ಷತೆ ವಹಿಸುವರು ಎಂದು ತಿಳಸಿದರು.
ಕಲಾವಿದರು ಈ ಕಾರ್ಯಕ್ರಮದಲ್ಲಿ ಡಾ. ರಾಜಪ್ಪ ದಳವಾಯಿ, ಡಾ. ಗುರುಪಾದ ಮರಿಗುದ್ದಿ, ಡಾ. ರಾಮಕೃಷ್ಣ ಮರಾಠ, ಡಾ. ವಿನಯ ವಕ್ಕುಂದ, ಡಾ. ಪ್ರಕಾಶ ಗರುಡ, ಡಾ. ಮಹಾದೇವ ಹಡಪದ, ಡಾ. ಆರ್‌ಡಿ, ಮಲ್ಲಯ್ಯ ಮುಂತಾದ ವಿದ್ವಾಂಸರು ವಿವಿಧ ವಿಷಯಗಳ ಕುರಿತು ವಿಚಾರ ಮಂಡನೆ ಮಾಡುವರು. ಜೊತೆಗೆ 13 ಬಯಲಾಟ ತಂಡಗಳು, ಹಾಡುಗಾರಿಕೆ ಮತ್ತು ಪ್ರದರ್ಶನ ನೀಡುತ್ತವೆ. ಇದರಲ್ಲಿ ನೂರಕ್ಕೂ ಹೆಚ್ಚು ಬಯಲಾಟ ಭಾಗವಹಿಸುವರು. ದಿ 10 ರಂದು ಸಾಯಂಕಾಲ 4 ಗಂಟೆಗೆ ಸಮಾರೋಪ ಸಮಾರಂಭ ಜರುಗುವದು. ಸಮಾರೋಪ ಭಾಷಣವನ್ನು
ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಶ್ರಾಂತ ಆಯುಕ್ತರಾದ ವೆಂಕಟೇಶ ಮಾಚಕನೂರ ಅವರು ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಭಾಗವಹಿಸುವರು ಎಂದು ತಿಳಸಿದರು. ಪತ್ರಿಕಕಗೋಷ್ಟಿಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ರಾಜೇಶ್ವರಿ ಹಿರೇಮಠ,ಈರಣ್ಣ ವಡ್ಡಿನ,ಜಿನದತ್ತ ಹಡಗಲಿ,ಶಂಕರ ಕುಂಬಿ,ಗುರು ಹಿರೇಮಠ,ಶಿವಾನಂದ ಭಾವಿಕಟ್ಟಿ , ಸತೀಶ ತುರಮರಿ ಇದ್ದರು.