ಚುನಾಯಿತ ಜನಪ್ರತಿನಿಧಿಗಳ ಅಧಿಕಾರ ಮೊಟಕು ಗೊಳಿಸುವಷಡ್ಯಂತ್ರದಲ್ಲಿಶಾಸಕ ವಿನಯ್ ಕುಲಕರ್ಣಿ ಪ್ರತ್ಯೇಕ ಮಹಾನಗರ ಪಾಲಿಕೆ ರಚಿಸುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ ಆಡಳಿತ ವಹಿಸುತ್ತಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾಯಿತ ಪ್ರತಿನಿಧಿಗಳ ಅಧಿಕಾರ ಮೊಟಕುಗೊಳಿಸಿ, ಷಡ್ಯಂತ್ರ ಮಾಡಿರುವ ಹುನ್ನಾರವನ್ನ ಶಾಸಕ ವಿನಯ ಕುಲಕರ್ಣಿ ರಚಿಸಿದ್ದಾರೆ ಎಂದು ಮಾಜಿ ಮೇಯರ್ ಈರೇಶ ಅಂಚಟಗೇರಿ ಗಂಭೀರ ಆರೋಪ‌ ಮಾಡಿದ್ದಾರೆ.ಈ ಬಗ್ಗೆ ಪತ್ರಿಕಾ‌ ಪ್ರಕಟಣೆ ನೀಡಿರುವ ಅವರು, ಕೇವಲ ಧಾರವಾಡ ಮಹಾನಗರ ಪಾಲಿಕೆ ಪ್ರತ್ಯೇಕವಾಗಿ ರಚಿಸಲು ಕಾನೂನಿನಲ್ಲಿ ಅವಕಾಶ ಇರದೇ ಇದ್ದರೂ, ಚುನಾಯಿತ ಪ್ರತಿನಿಧಿಗಳ ಅಧಿಕಾರ ಇನ್ನು ಎರಡು ವರ್ಷ ಇರುವಾಗಲೇ ಸೂಪರಸೀಡಮಾಡಿ ಅವರ ಅಧಿಕಾರವನ್ನು ಮೊಟಕುಗೊಳಿಸುತ್ತಿರುವುದು ದುರುದ್ದೇಶಪೂರ್ವಕ ಕಾರಣವಾಗಿದೆ.‌ ಘನವೆತ್ತ ರಾಜ್ಯಪಾಲರು ಕಾನೂನಿನ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು , ಕಾನೂನಿನಲ್ಲಿ ಇದಕ್ಕೆ ಅವಕಾಶ ಇರದೇ ಇದ್ದ ಕಾರಣ ರಾಜ್ಯಪಾಲರು ತಡೆ ಹಿಡಿದಿದ್ದಾರೆ .ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆ ಸಂದರ್ಭದಲ್ಲಿ ಸಾರ್ವಜನಿಕ ಅಹವಾಲುಗಳನ್ನ ಸ್ವೀಕರಿಸುವ ಸಂದರ್ಭದಲ್ಲಿ ಹಲವಾರು ಧೀಮಂತರು, ಸಂಘಟನೆಗಳು, ಇಂಜಿನೀಯರ ಅಸೋಸಿಯೇಷನ್, ಸರ್ಕಾರಿ ನೌಕರರ ಸಂಘಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು ಧಾರವಾಡವನ್ನ ರಾಜ್ಯದಲ್ಲಿ ಅತ್ಯಂತ ಚಿಕ್ಕ ಮಹಾನಗರ ಪಾಲಿಕೆ ನಿರ್ಮಾಣ ಮಾಡಲು ವಿನಯ ಕುಲಕರ್ಣಿ ಷಡ್ಯಂತ್ರ ರಚಿಸಿದ್ದು ಖೇದಕರವಾಗಿದೆ. ಇಂತಹ ದುರುದ್ದೇಶ ಈಡರದೇ ಇದ್ದ ಸಂದರ್ಭದಲ್ಲಿ ಶಾಸಕರು ಇಲ್ಲಸಲ್ಲದ ಆರೋಪಗಳನ್ನ ಬಿಜೆಪಿ ಮುಖಂಡರ ಮೇಲೆ ಮಾಡತಾ ಇರೋದು ದುರದೃಷ್ಟಕರ. ಕಳೆದ ಎರಡು ವರ್ಷಗಳಿಂದ ಧಾರವಾಡದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೇ ತಮ್ಮ ಕಾರ್ಯವೈಫಲ್ಯ ಮರೆಮಾಚಲು ಶಾಸಕ ವಿನಯ ಕುಲಕರ್ಣಿ ಈ ಹುನ್ನಾರ ರಚಿಸಿದ್ದಾರೆ .ಧಾರವಾಡದಲ್ಲಿ IIT ,IIIT, NFU ಯುನಿವರ್ಸಿಟಿ,ಲಲಿತಕಲಾ ಅಕಾಡೆಮಿ ಮಾದರಿ ಏರಪೋರ್ಟ CRFನಿಧಿಯಡಿ ಕಾಂಕ್ರೀಟ್ ರಸ್ತೆ, ರೈಲು ನಿಲ್ದಾಣ, ಇಂತಹ ನೂರಾರು ಅಭಿವೃದ್ಧಿ ಕಾರ್ಯ ಮಾಡುತ್ತಿರುವ ಕೇಂದ್ರ ಸಚಿವರು ಒಂದು ಕಡೆಯಾದರೆ, ಜನರ ಅಹವಾಲು ಸ್ವೀಕರಿಸದೆ ಬೆಂಗಳೂರಿನಲ್ಲಿ ಇರುವ ಶಾಸಕ ಒಂದು ಕಡೆ. ತಮ್ಮ ವೈಫಲ್ಯವನ್ನು ಮರೆಮಾಚಲು ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಿ ಚುನಾಯಿತ ಪ್ರತಿನಿಧಿಗಳ ಅಧಿಕಾರ ಮೊಟಕುಗೊಳಿಸುವ ಷಡ್ಯಂತ್ರ ಹಾಗು ಅತ್ಯಂತ ಸಣ್ಣ ಮಹಾನಗರ ಪಾಲಿಕೆ ಮಾಡುವ ಹುನ್ನಾರ ಹಾಗು ಕೇವಲ ಹೆಸರಿಗೋಸ್ಕರ ಪ್ರತ್ಯೇಕ ಪಾಲಿಕೆ ರಚನೆ ಮಾಡುತ್ತಿರುವದು ಧಾರವಾಡ ಜನತೆಗೆ ಮಾಡುವ ಅನ್ಯಾಯ .ಕೂಡಲೆ ಶಾಸಕ ವಿನಯ ಕುಲಕರ್ಣಿ ಪಾಲಿಕೆ ಸದಸ್ಯರ ಅಧಿಕಾರ ಮೊಟಕುಗೊಳಿಸಿ ಪಾಲಿಕೆ ಸೂಪರಸೀಡ ಮಾಡುವ ಹುನ್ನಾರವನ್ನ ಕೈಬಿಟ್ಟು, ಜನತೆಯ ಕ್ಷಮೆಯಾಚಿಸಿ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಬೇಕೆಂದು ಮಾಜಿಮಹಾಪೌರರು ಈರೇಶ ಅಂಚಟಗೇರಿ ಆಗ್ರಹಿಸಿದ್ದಾರೆ.

ಚುನಾಯಿತ ಜನಪ್ರತಿನಿಧಿಗಳ ಅಧಿಕಾರ ಮೊಟಕು ಗೊಳಿಸುವ ಷಡ್ಯಂತ್ರದಲ್ಲಿ ಶಾಸಕ ವಿನಯ ಕುಲಕರ್ಣಿ ಭಾಗಿ
ಮಾಜಿ ಮೇಯರ್ ಈರೇಶ ಅಂಚಟಗೇರಿ ಗಂಭೀರ ಆರೋಪ

ಹುಬ್ಬಳ್ಳಿ

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯನ್ನ ವಿಂಗಡಿಸಿ  ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ರಚಿಸುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ ಆಡಳಿತ ವಹಿಸುತ್ತಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾಯಿತ ಪ್ರತಿನಿಧಿಗಳ ಅಧಿಕಾರ ಮೊಟಕುಗೊಳಿಸಿ, ಷಡ್ಯಂತ್ರ ಮಾಡಿರುವ ಹುನ್ನಾರವನ್ನ ಶಾಸಕ ವಿನಯ ಕುಲಕರ್ಣಿ ರಚಿಸಿದ್ದಾರೆ ಎಂದು ಮಾಜಿ ಮೇಯರ್ ಈರೇಶ ಅಂಚಟಗೇರಿ ಗಂಭೀರ ಆರೋಪ‌ ಮಾಡಿದ್ದಾರೆ.

ಈ ಬಗ್ಗೆ ಪತ್ರಿಕಾ‌ ಪ್ರಕಟಣೆ ನೀಡಿರುವ ಅವರು, 
ಕೇವಲ ಧಾರವಾಡ ಮಹಾನಗರ ಪಾಲಿಕೆ ಪ್ರತ್ಯೇಕವಾಗಿ ರಚಿಸಲು ಕಾನೂನಿನಲ್ಲಿ ಅವಕಾಶ ಇರದೇ ಇದ್ದರೂ,  ಚುನಾಯಿತ ಪ್ರತಿನಿಧಿಗಳ ಅಧಿಕಾರ ಇನ್ನು ಎರಡು ವರ್ಷ ಇರುವಾಗಲೇ ಸೂಪರಸೀಡಮಾಡಿ ಅವರ ಅಧಿಕಾರವನ್ನು ಮೊಟಕುಗೊಳಿಸುತ್ತಿರುವುದು ದುರುದ್ದೇಶಪೂರ್ವಕ ಕಾರಣವಾಗಿದೆ.‌

 ಘನವೆತ್ತ  ರಾಜ್ಯಪಾಲರು ಕಾನೂನಿನ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ,  ಕಾನೂನಿನಲ್ಲಿ ಇದಕ್ಕೆ ಅವಕಾಶ ಇರದೇ ಇದ್ದ ಕಾರಣ ರಾಜ್ಯಪಾಲರು ತಡೆ ಹಿಡಿದಿದ್ದಾರೆ .

ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆ ಸಂದರ್ಭದಲ್ಲಿ ಸಾರ್ವಜನಿಕ ಅಹವಾಲುಗಳನ್ನ ಸ್ವೀಕರಿಸುವ ಸಂದರ್ಭದಲ್ಲಿ ಹಲವಾರು ಧೀಮಂತರು, ಸಂಘಟನೆಗಳು, ಇಂಜಿನೀಯರ ಅಸೋಸಿಯೇಷನ್, ಸರ್ಕಾರಿ ನೌಕರರ ಸಂಘಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು ಧಾರವಾಡವನ್ನ ರಾಜ್ಯದಲ್ಲಿ ಅತ್ಯಂತ ಚಿಕ್ಕ ಮಹಾನಗರ ಪಾಲಿಕೆ ನಿರ್ಮಾಣ ಮಾಡಲು ವಿನಯ ಕುಲಕರ್ಣಿ ಷಡ್ಯಂತ್ರ ರಚಿಸಿದ್ದು ಖೇದಕರವಾಗಿದೆ. 

 ಇಂತಹ ದುರುದ್ದೇಶ ಈಡರದೇ ಇದ್ದ ಸಂದರ್ಭದಲ್ಲಿ ಶಾಸಕರು ಇಲ್ಲಸಲ್ಲದ ಆರೋಪಗಳನ್ನ ಬಿಜೆಪಿ ಮುಖಂಡರ ಮೇಲೆ ಮಾಡತಾ ಇರೋದು ದುರದೃಷ್ಟಕರ.

 ಕಳೆದ ಎರಡು ವರ್ಷಗಳಿಂದ ಧಾರವಾಡದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೇ ತಮ್ಮ ಕಾರ್ಯವೈಫಲ್ಯ ಮರೆಮಾಚಲು ಶಾಸಕ ವಿನಯ ಕುಲಕರ್ಣಿ ಈ ಹುನ್ನಾರ ರಚಿಸಿದ್ದಾರೆ .

ಧಾರವಾಡದಲ್ಲಿ IIT ,IIIT, NFU ಯುನಿವರ್ಸಿಟಿ,ಲಲಿತಕಲಾ ಅಕಾಡೆಮಿ ಮಾದರಿ ಏರಪೋರ್ಟ CRFನಿಧಿಯಡಿ ಕಾಂಕ್ರೀಟ್ ರಸ್ತೆ, ರೈಲು ನಿಲ್ದಾಣ, ಇಂತಹ ನೂರಾರು ಅಭಿವೃದ್ಧಿ ಕಾರ್ಯ ಮಾಡುತ್ತಿರುವ ಕೇಂದ್ರ ಸಚಿವರು ಒಂದು ಕಡೆಯಾದರೆ,  ಜನರ ಅಹವಾಲು ಸ್ವೀಕರಿಸದೆ ಬೆಂಗಳೂರಿನಲ್ಲಿ ಇರುವ ಶಾಸಕ ಒಂದು ಕಡೆ.
 ತಮ್ಮ ವೈಫಲ್ಯವನ್ನು ಮರೆಮಾಚಲು ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಿ ಚುನಾಯಿತ ಪ್ರತಿನಿಧಿಗಳ ಅಧಿಕಾರ ಮೊಟಕುಗೊಳಿಸುವ ಷಡ್ಯಂತ್ರ ಹಾಗು ಅತ್ಯಂತ ಸಣ್ಣ ಮಹಾನಗರ ಪಾಲಿಕೆ ಮಾಡುವ ಹುನ್ನಾರ ಹಾಗು ಕೇವಲ ಹೆಸರಿಗೋಸ್ಕರ ಪ್ರತ್ಯೇಕ ಪಾಲಿಕೆ ರಚನೆ ಮಾಡುತ್ತಿರುವದು ಧಾರವಾಡ ಜನತೆಗೆ ಮಾಡುವ ಅನ್ಯಾಯ .
ಕೂಡಲೆ ಶಾಸಕ ವಿನಯ ಕುಲಕರ್ಣಿ ಪಾಲಿಕೆ ಸದಸ್ಯರ ಅಧಿಕಾರ ಮೊಟಕುಗೊಳಿಸಿ ಪಾಲಿಕೆ ಸೂಪರಸೀಡ ಮಾಡುವ ಹುನ್ನಾರವನ್ನ ಕೈಬಿಟ್ಟು,  ಜನತೆಯ ಕ್ಷಮೆಯಾಚಿಸಿ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಬೇಕೆಂದು ಮಾಜಿಮಹಾಪೌರರು ಈರೇಶ ಅಂಚಟಗೇರಿ ಆಗ್ರಹಿಸಿದ್ದಾರೆ.

ನವೀನ ಹಳೆಯದು

نموذج الاتصال