ಅಗಲಿದ ನಾಡಿನ ಹಿರಿಯ ಸಾಹಿತಿಗಳಿಗೆ - ನುಡಿ ನಮನ ಕಾರ್ಯಕ್ರಮ

ಅಗಲಿದ ನಾಡಿನ ಹಿರಿಯ ಸಾಹಿತಿಗಳಿಗೆ - ನುಡಿ ನಮನ ಕಾರ್ಯಕ್ರಮ
     ಧಾರವಾಡ : ಇತ್ತೀಚೆಗೆ ಅಗಲಿದ
ನಾಡಿನ ಹಿರಿಯ ಸಾಹಿತಿಗಳಿಗೆ - ನುಡಿ ನಮನ ಕಾರ್ಯಕ್ರಮವನ್ನು  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಲಾಗಿತ್ತು.
   ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರೂ ಹಾಗೂ ಸಾಹಿತಿಗಳಾದ ಪ್ರೊ ಜಿ ಎಸ್ ಸಿದ್ಧಲಿಂಗಯ್ಯ, ಧಾರವಾಡದ ಮನೋಹರ ಗ್ರಂಥ ಮಾಲಾ ಮಾಲೀಕರು ಹಾಗೂ ಹಿರಿಯ ಸಾಹಿತಿಗಳಾದ ಡಾ. ರಮಾಕಾಂತ್ ಜೋಶಿ ಹಾಗೂ ೮೪ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು ಹಾಗೂ ಹಿರಿಯ ಸಾಹಿತಿಗಳಾದ ಡಾ. ಏಚ್ ಎಸ್ ವೆಂಕಟೇಶಮೂರ್ತಿ ಅವರಿಗೆ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನುಡಿ ನಮನ ಸಲ್ಲಿಸಲಾಯಿತು.
  ‌‌ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ, ನಾಡಿನ ಹಿರಿಯ ಸಾಹಿತಿಗಳಾದ ಡಾ. ವೀರಣ್ಣ ರಾಜೂರ, ಡಾ.‌ ಬಾಳಣ್ಣ ಶೀಗಿಹಳ್ಳಿ, ಡಾ. ಕೃಷ್ಣ ಕಟ್ಟಿ, ಹಾ ವೆಂ. ಕಾಖಂಡಕಿ, ಶ್ರೀನಿವಾಸ ವಾಡಪ್ಪಿ, ಡಾ. ಶಶಿಧರ ನರೇಂದ್ರ, ಡಾ. ಪ್ರಕಾಶ್ ಗರುಡ, ಡಾ. ಶಶಿಧರ ತೋಡಕರ, ಡಾ. ಬಸು ಬೇವಿನಗಿಡದ, ಶ್ರೀಮತಿ ಶಾಲಿನಿ ರಜನಿ, ಡಾ.‌ಧನವಂತ ಹಾಜವಗೋಳ, ಡಾ. ಸದಾಸಶಿವ ಮರ್ಜಿ, ಡಾ. ಶರಣಬಸವ ಚೋಳಿನ, ಮಹಾಂತಪ್ಪ ನಂದೂರ, ಡಾ. ಸರೋಜಾ ಮೇಟಿ, ಎ. ಎ. ದರ್ಗಾ, ಶಿವಶಂಕರ್ ಹಿರೇಮಠ, ಜೆ ಕೆ ಜಹಗೀರದಾರವರು ಅಗಲಿದ ಸಾಹಿತಿಗಳ ಕುರಿತು  ಮಾತನಾಡಿ ನುಡಿನಮನ ಸಲ್ಲಿಸಿದರು.
    ಡಾ. ವೀರಣ್ಣ ರಾಜೂರ  ಮಾತನಾಡಿ ಮೂವರೂ ಸಾಹಿತಿಗಳು ಕನ್ನಡ ಸಾಹಿತ್ಯ ಬೆಳವಣಿಗೆಗೆ  ಅದ್ಭುತವಾದ ಕೊಡುಗೆ ನೀಡಿದ್ದಾರೆ. ಪ್ರೊ. ಜಿ ಎಸ್ ಸಿದ್ಧಲಿಂಗಯ್ಯ ಅಪ್ಪಟ ಪ್ರಾಮಾಣಿಕ ವ್ಯಕ್ತಿ ಎಂದು ತಿಳಿಸಿದರು. 
 ಹಾ. ವೆಂ. ಕಾಖಂಡಕಿ ಅವರು ಮಾತನಾಡಿ ಡಾ. ರಮಾಕಾಂತ್ ಜೋಶಿ ಅವರು ಧಾರವಾಡದಲ್ಲಿ ಸ್ಥಾಪಿತವಾದ    ಮನೋಹರ ಗ್ರಂಥ ಮಾಲೆಯ ಗ್ರಂಥ ಪ್ರಕಟಣೆಯ ಕೊಡುಗೆ ಮೆಚ್ಚುವಂತಹದ್ದು ಎಂದು ಹೇಳಿದರು. 
     ಡಾ.‌ಬಾಳಣ್ಣ ಶೀಗಿಹಳ್ಳಿ ಅವರು ಡಾ. ಎಚ್ ಎಸ್ ವೆಂಕಟೇಶಮೂರ್ತಿ ಅವರು ಸರಳ ಸಜ್ಜನಿಕೆಯ ಸಾಹಿತಿ ಆಗಿದ್ದರು ಎಂದು ತಿಳಿಸಿದರು.
ಡಾ. ಜಿನದತ್ತ ಹಡಗಲಿ ನಿರೂಪಿಸಿದರು. 
   ಡಾ. ಲಿಂಗರಾಜ ಅಂಗಡಿ ಮೂವರು ಸಾಹಿತಿಗಳಿಗೆ ನುಡಿ ನಮನ ಸಲ್ಲಿಸಿ ವಂದಿಸಿದರು. ಪ್ರಾರಂಭದಲ್ಲಿ ಮೂವರು ಸಾಹಿತಿಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಒಂದು ನಿಮಿಷ ಮೌನಾಚರಣೆ ಆಚರಿಸಲಾಯಿತು.
   ಕಾರ್ಯಕ್ರಮದಲ್ಲಿ ಮಹಾಂತೇಶ ನರೇಗಲ್ , ಶಾಂತವೀರ ಬೆಟಗೇರಿ, ಎಫ್ ಬಿ ಕಣವಿ, ಶ್ರೀಮತಿ ಪ್ರಮೀಳಾ ಜಕ್ಕಣ್ಣವರ,ವ್ಹಿ ಎನ್ ಕೀರ್ತಿವತಿ, ಡಾ.‌ಶರಣಮ್ಮ ಗೊರೇಬಾಳ, ಎಸ್ ಎಮ್ ದಾನಪ್ಪಗೌಡರ, ಬಿ. ಜಿ. ಬಾರ್ಕಿ, ನಾರಾಯಣ ಭಜಂತ್ರಿ ,ಡಾ. ಮಂಜುಳಾ ಮರ್ಜಿ ಉಪಸ್ಥಿತರಿದ್ದರು.
ನವೀನ ಹಳೆಯದು

نموذج الاتصال