ಭರತನಾಟ್ಯದಲ್ಲಿ ರಾಷ್ಟ್ರಮಟ್ಟಕ್ಕೆ ಸಿರಿಗೌರಿ ಆಯ್ಕೆ

ಭರತನಾಟ್ಯದಲ್ಲಿ ರಾಷ್ಟ್ರಮಟ್ಟಕ್ಕೆ ಸಿರಿಗೌರಿ ಆಯ್ಕೆ 
‌‌‌‌    ಧಾರವಾಡ 04 : ಇಲ್ಲಿಯ ಶಾಂತಲಾ ನೃತ್ಯಾಲಯದ ವಿದ್ಯಾರ್ಥಿನಿ ಸಿರಿಗೌರಿ ಎಸ್‌. ಬಾಲೆರಾವ್‌ ಇತ್ತೀಚೆಗೆ ಪುಣೆಯಲ್ಲಿ ಅಖಿಲ ಭಾರತೀಯ ಸಂಸ್ಕೃತಿಕ ಸಂಘವು ನಡೆಸಿದ 21ನೇ ಪ್ರದರ್ಶಕಗಳ ಕಲೆಗಳ ರಾಷ್ಟ್ರೀಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭರತನಾಟ್ಯ ಸ್ಪರ್ಧೆಯಲ್ಲಿ ಕ್ಲಾಸಿಕಲ್‌ ಭರತನಾಟ್ಯ ಸೋಲೋದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ್ದಾರೆ.
     ವಿದೂಷಿ ವಿಜೇತಾ ವರ್ಣೇಕರ ಅವರಲ್ಲಿ ತರಬೇತಿ ಪಡೆದಿರುವ ಸಿರಿಗೌರಿ ಅಕ್ಟೋಬರ್‌ 25 ರಿಂದ 29 ರ ವರೆಗೆ ಥೈಲ್ಯಾಂಡ್‌ನ ಪಟ್ಟಾಯಾದಲ್ಲಿ ಬುರಾಫಾ ವಿಶ್ವವಿದ್ಯಾಲಯದ ಕಲೆ ಹಾಗೂ ಸಂಸ್ಕೃತಿ ಕೇಂದ್ರದಲ್ಲಿ ನಡೆಯಲಿರುವ 15 ನೇ ಕಲ್ಚರಲ್ ಒಲಿಂಪಿಯಾಡ್ ಫಾರ್ ಆರ್ಟ್ ಆಂಡ್ ಕಲ್ಚರ್ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಭರತನಾಟ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ, ಪ್ರದರ್ಶನ ನೀಡಲಿದ್ದಾರೆ.
ನವೀನ ಹಳೆಯದು

نموذج الاتصال