BENGALURU:*ಕಾಶ್ಮೀರದಿಂದ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತಂದ ಸಂತೋಷ್ ಲಾಡ್*
========
*ವಿವಿಧ ಸಂಘಟನೆಗಳಿಂದ ಸಚಿವ ಲಾಡ್ ರಿಗೆ ಅಭಿನಂದನೆ*
===============
ಬೆಂಗಳೂರು, ಏಪ್ರಿಲ್ 26: ಜಮ್ಮು-ಕಾಶ್ಮೀರ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ಪ್ರವಾಸಿಗರನ್ನು ಗುತಿಯಾಗಿರಿಸಿ ನಡೆದ ಭಯೋತ್ಪಾದನಾ ದಾಳಿಯ ನಂತರ ಸಂತ್ರಸ್ತರಾಗಿದ್ದ 180 ಕನ್ನಡಿಗರನ್ನು ಸುರಕ್ಷಿತವಾಗಿ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ರಾಜ್ಯಕ್ಕೆ ಕರೆತಂದ ಹಿನ್ನೆಲೆಯಲ್ಲಿ ಮೈಸೂರಿನ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು.
ಸಚಿವ ಲಾಡ್ ಅವರ ಬೆಂಗಳೂರಿನ ಅಧಿಕೃತ ನಿವಾಸಕ್ಕೆ ಭೇಟಿ ನೀಡಿದ್ದ ಶ್ರೀ ದುರ್ಗಾ ಫೌಂಡೇಶನ್, ಕೆವಿಕೆ ಫೌಂಡೇಶನ್ ಸೇರಿದಂತೆ ಇನ್ನಿತರ ಸಂಘಟನೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದರು
ಈ ಸಂದರ್ಭದಲ್ಲಿ ಕುಶಾಲ್ ಹರವೇಗೌಡ, ಕುರುಬರು ಪಡೆ ಸಂಚಾಲಕ ಲೋಕೇಶ್ ಹಗರಿಬೊಮ್ಮನಹಳ್ಳಿ, ದಶಮಿ, ರೇಖಾ ಶ್ರೀನಿವಾಸ್, ಖುಷಿ, ದೀಪ ನಾಯಕ್, ಶಾಜಿಯಾ ಸುಲ್ತಾನ್, ಸಂಪತ್ ಸುಬ್ಬಯ್ಯ, ತ್ರಿವೇಣಿ, ನಕುಲ್, ಸಾರಥಿ ಕುಮಾರ್ ನಂದೀಶ್, ವಾಸಿಂ, ಮತಿನ್, ಆದಿತ್ಯ ಜ್ಞಾನಿ, ಮಂಜುನಾಥ, ತ್ರಿವೇಣ್ ಮುರುಳಿ, ಕವಿತಾ ರೆಡ್ಡಿ, ಸಂಪತ್ ಸುಬ್ಬಯ್ಯ, ತ್ರಿಔಏಣಿ, ಅರ್ಜುನ್ ಗೌಡ, ಸಾರಥಿ ಕುಮಾರ್, ನಕುಲ್ ಹಾಗೂ ಇನ್ನಿತರರು ಇದ್ದರು.