DHARWAD:ಮರಾಠಾ ಸಮಾಜದ ಗಣ್ಯರಿಂದ ಡಿ ಸಿ ಕಚೇರಿಯ ಎದುರು ಪ್ರತಿಭಟನೆ.

ಮರಾಠಾ ಸಮಾಜದ ಗಣ್ಯರಿಂದ ಡಿ ಸಿ ಕಚೇರಿಯ ಎದುರು ಪ್ರತಿಭಟನೆ. 
ಧಾರವಾಡ 28 : ಜಿಲ್ಲಾಧಿಕಾರಿಗಳು ಧಾರವಾಡ ಇವರ ಮುಖಾಂತರ
ಮುಖ್ಯಮಂತ್ರಿಗಳಿಗೆ ಮನವಿ
 ರಾಜ್ಯದಲ್ಲಿನ ಮರಾಠಾ ಸಮಾಜವನ್ನು ಪ್ರವರ್ಗ 3 ಬಿ ಯಿಂದ 2 ಎ ಗೆ ಸೇರಿಸುವ ಕುರಿತು
ಮನವಿ
ಬಹಳ ವರ್ಷಗಳಿಂದ ನಾವು ಘನ ಸರ್ಕಾರಕ್ಕೆ ನಿವೇದಿಸುತ್ತಿದ್ದು ರಾಜ್ಯದ ಮರಾಠಾ ಸಮುದಾಯವು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದದಾಗಿದ್ದು, ಈ ಸಮುದಾಯವನ್ನು ಪ್ರವರ್ಗ “3ಬಿ” ಯಿಂದ ಪ್ರವರ್ಗ “2ಎ” ಗೆ ಸೇರಿಸಬೇಕು. ಕಾರಣ ಈ ಪ್ರವರ್ಗದಲ್ಲಿ ನಮಗಿಂತ ಬಲಿಷ್ಠ ಸಮುದಾಯದವರು ಇರುವುದರಿಂದ ನಮ್ಮ ಮೇಲೆ ಅನ್ಯಾಯ ಆಗುತ್ತಿದೆ. ನಮ್ಮ ಈ ಆಹವಾಲು ಸ್ವೀಕರಿಸಿದ ಹಿಂದಿನ ಸರಕಾರ ರಾಜ್ಯದ ಹಿಂದುಳಿದ ವರ್ಗಗಳ ಆಯೋಗಕ್ಕೆ ಈ ವರ್ಗದ ಜನರ ಸ್ಥಿತಿಗತಿ ಅಧ್ಯಯನ ಮಾಡಿ ವರದಿ ಸಲ್ಲಿಸುವಂತೆ ಆದೇಶಿಸಿತ್ತು. ಸದರಿ ಆಯೋಗವು  ಶಂಕರಪ್ಪನವರ ಅಧ್ಯಕ್ಷತೆಯಲ್ಲಿ ಡಿಸೆಂಬರ್ 2012 ರಲ್ಲಿ ಈ ವರ್ಗದವರನ್ನು “2ಎ” ಗೆ ಸೇರಿಸಬೇಕೆಂದು ಶಿಫಾರಸ್ಸು ಮಾಡಿ ವರದಿ ಸಲ್ಲಿಸಿತ್ತು. ಜೊತೆಗೆ ಅನೇಕ ಸಾರಿ ಸರಕಾರಕ್ಕೆ ಮನವಿ ಸಲ್ಲಿಸುವುದು, ಪ್ರತಿಭಟನೆ ಮಾಡಿದರು ಕೂಡ ಈ ವರೆಗೆ ಸರಕಾರ ನಮ್ಮ ಬೇಡಿಕೆಗೆ ಗಮನ ಹರಿಸಿಲ್ಲಾ. ಈ ಹಿಂದೆ ತಮಗೆ ಈ ವಿಷಯದ ಬಗ್ಗೆ ಭೇಟಿ ಮಾಡಿ ಮನವಿ ಸಲ್ಲಿಸಿದಾಗ ಹಿಂದುಳಿದ ಆಯೋಗದ ಅಧ್ಯಕ್ಷರಾದ ಕಾಂತರಾಜು ರವರ ಅಧ್ಯಕ್ಷತೆಯಲ್ಲಿ 2015 ರಲ್ಲಿ ಸಮಿತಿ ರಚಿಸಿ ಜಾತಿ ಗಣತಿ ಮಾಡಲಾಗಿದ್ದು ಅದರ ವರದಿ ಬಂದಿದ ನಂತರ ತಮ್ಮ ಬೇಡಿಕೆ ಬಗ್ಗೆ ಗಮನ ಹರಿಸಲಾಗುವುದು ಎಂದು ಅಶ್ವಾಸನೆ ನೀಡಿರುತ್ತಿರಿ.ಶಾಶ್ವತ ಹಿಂದುಳಿದ ಆಯೋಗದ ಅಧ್ಯಕ್ಷರಾದ  ಜಯಪ್ರಕಾಶ ಹೆಗಡೆ ಇವರಿಗೆ ಕಾಂತರಾಜ ಆಯೋಗದ ಪೂನರ್ ಸಮೀಕ್ಷೆ ಮಾಡಲು 31-03-2024 ರಂದು ಆದೇಶ ಮಾಡಿರುತ್ತಿರಿ. ಹಿಂದುಳಿದ ಆಯೋಗದ ಜಾತಿ ಗಣತಿ ವರದಿಯಂತೆ ರಾಜ್ಯದಲ್ಲಿ ಮರಾಠಾ ಸಮುದಾಯ ಕಡಿಮೆ ಸಂಖ್ಯೆಯಲ್ಲಿ ಇದ್ದು, ಅದರಲ್ಲಿ ಬಹು ಸಂಖ್ಯಾತ ಮರಾಠಾ ಜನ ಕೃಷಿಕರು ಹಾಗೂ ಕೃಷಿ ಕಾರ್ಮಿಕರಾಗಿ ದುಡಿಯುತ್ತಿದ್ದು, ಅತಿ ಕಷ್ಟಕರ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ರಾಜ್ಯದ ಪ್ರಗತಿಗಾಗಿ, ರಾಜ್ಯದ ಜನತೆಯ ವಿಕಾಸಕ್ಕಾಗಿ ಹಾಗೂ ರಾಜ್ಯದ ಸ್ವ ರಕ್ಷಣೆಗಾಗಿ ತ್ಯಾಗ ಬಲಿದಾನ ನೀಡಿರುವ ಸಮಾಜ ತಮ್ಮ ನ್ಯಾಯಯುತ ಬೇಡಿಕೆ ಈಡೇರಿಕೆ, ಸಂವಿಧಾನಿಕ ಮಾರ್ಗದಲ್ಲಿ ಹೋರಾಟ ನಿರಂತರವಾಗಿ ನಡೆಸುತ್ತಿದೆ.

ಈ ಮನವಿಯು ಪರಿಗಣಿಸಿ ಬಹುಜನರ ಹಿತಕ್ಕಾಗಿ ಶ್ರಮಿಸಿರುವ ಸನ್ಮಾನ್ಯ ಮುಖ್ಯ ಮಂತ್ರಿಗಳಾದ  ಸಿದ್ಧರಾಮಯ್ಯನವರು ರಾಜ್ಯದಲ್ಲಿ ಅಲ್ಪಸಂಖ್ಯೆಯಲ್ಲಿ ಇರುವ ಮರಾಠಾ ಸಮಾಜಕ್ಕೆ ನ್ಯಾಯ ಒದಗಿಸಿ ಕೊಡುವರೆಂಬ ಆಶಯದೊಂದಿಗೆ ಕರ್ನಾಟಕ ರಾಜ್ಯ ಮರಾಠಾ ಮೊರ್ಚಾದ ವತಿಯಿಂದ ವಿನಮ್ರವಾಗಿ ವಿನಂತಿಸುತ್ತೇವೆ. ಎಂದು ಮನವಿ ಮಾಡಿದರು. ಶಿವಾಜಿ  ಘಾಟಗೆ,ಸುರೇಶ ಸವಾಸಿ, ನಾಮದೇವ ಪಟದಾರಿ, ಸಭಾಷ ಶಿಂದೆ  , ಮಹೇಶ ಜಗದಾಳೆ,ತಾನಾಜಿ ಹಜೇರಿ, ಭೀಮಪ್ಪ ಕಸಾಯಿ ಮುಂತಾದವರು ಇದ್ದರು.
ನವೀನ ಹಳೆಯದು

نموذج الاتصال