ಜಿಲ್ಲಾ ಪಂಚಾಯಿತ ಆವರಣದಲ್ಲಿ ಸರ್ಕಾರಿ ನೌಕರ ಮೇಲೆ ಆಗುತ್ತಿರುವ ಹಲ್ಲೆ ಹಾಗೂ ಅನ್ಯಾಯದ ವಿರುದ್ಧ ಪ್ರತಿಭಟನೆ .
ಧಾರವಾಡ 28 :
ಮೇಲ್ದಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಅವಗಾಹಣೆ ತಳಿಯಬಯಸುವುದೆನೆಂದರೆ, ದಿ 25/04/2025 ರಂದು ಉಪನಗರ ಪೊಲೀಸ್ ಠಾಣೆ, ಧಾರವಾಡದಲ್ಲಿ ವಾಯ್.ಡಿ. ಕುನ್ನಿಬಾವಿ ನಿವೃತ್ತ ಮಾಜಿ ಉಪಕಾರ್ಯದರ್ಶಿ ಜಿಲ್ಲಾ ಪಂಚಾಯತ ಧಾರವಾಡ ಇವರ ವಿರುದ್ಧ ಜಾತಿ ನಿಂದನೆ ದೂರನ್ನು ಪುಷ್ಪಾವತಿ ಮೇದಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತ್ ಹಳ್ಳಿಗೇರಿ ದಾಖಲಿಸಿದ್ದು ಇರುತ್ತದೆ ಅಂತಾ ಮಾನ್ಯರ ಗಮನಕ್ಕೆ ತರಬಯಸುತ್ತೆವೆ..
ಉಪನಗರ ಪೊಲೀಸ ಠಾಣಿ ಧಾರವಾಡದಲ್ಲಿ ಜಾತಿನಿಂದನೆ ಅವಾಚ್ಯ ಶಬ್ದ ಬಳಕೆ ಹಾಗೂ ಸರಕಾರಿ ಕಛೇರಿಯಲ್ಲಿ ಗೊಂದಲ, ಜಗಳ, ಮಹಿಳೆಯ ಮೇಲೆ ದೌರ್ಜನ್ಯದ ಮೇಲೆ ದೂರು ದಾಖಲಾಗಿದ್ದರೂ ಸಹ ಇದುವರೆಗೂ ನ್ಯಾಯಾಂಗಬಂದನವಾಗಿರುವುದಿಲ್ಲ ಆರೋಪಿಯ ಬಂದನ ಆಗುವರೆಗೂ ಪ್ರತಿಭಟವನೆ ನಿರತರಾಗಿರುತ್ತೆವೆ. ಅಷ್ಟೇ ಅಲ್ಲದೆ ಮುಂದುವರೆದು ಸದರಿ ವ್ಯಕ್ತಿಯು ಧಾರವಾಡ, ಗದಗ, ಹಾವೇರಿ, ವಿಜಯಪುರ, ಬಾಗಲಕೋಟ, ಬೆಳಗಾವಿ ಹಾಗೂ ಇನ್ನೂಳಿದ ಜಿಲ್ಲೆಗಳಲ್ಲಿಯೂ ಅನಾವಶ್ಯಕವಾಗಿ ಸರ್ಕಾರಿ ನೌಕರರುಗಳ ಮೇಲೆ ದೂರಿನ ಅರ್ಜಿ ಬರಯುವುದು ಸರ್ಕಾರಿ ಕಛೇರಿಗಳಿಗೆ ಸ್ವತಃ ಆಗಮಿಸಿ ಸರ್ಕಾರಿ ನೌಕಕರ ಮೇಲೆ ದಬ್ಬಾಳಿಕೆ ಮಾಡುವುದು, ಯಾರಾದರೂ ನೌಕರರು ಪ್ರಶ್ನಿಸಿದರೆ ಅವರ ಮೇಲೂ ದೂರು ನೀಡಿ ಹೆದರಿಸುವುದು ಇವರ ಪ್ರವೃತ್ತಿಯಾಗಿದೆ. ಸದಯವರು 2017 ರಿಂದ ನಿವೃತ್ತಿ ಹೊಂದಿದ ನಂತರ ಜಿಲ್ಲಾ ಪಂಚಾಯತ್, ತಾಲೂಕ ಪಂಚಾಯತ್ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಸುಮಾರು 3000 (ಮೂರು ಸಾವಿರ) ಕ್ಕೂ ಹೆಚ್ಚು ಅರ್ಜಿಗಳನ್ನು ನಿಡೀರುತ್ತಾರೆ. ನಮ್ಮ ಇಲಾಖೆ ಅಷ್ಟೇ ಅಲ್ಲದೆ ಉಳಿದ ಇಲಾಖೆಗಳಾದ ಆರ್‌ಡಬ್ಲೂಎಸ್, ಪಿಆರ್‌ಇಡಿ, ನಿರಾವರಿ ಇಲಾಖೆ ಹಾಗೂ ಹತ್ತು ಹಲವು ಇಲಾಖೆಯಲ್ಲಿಯೂ ಕೂಡ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಸದರಿಯವರು ಯಾವುದೇ ಸಾರ್ವಜನಿಕ ಹಿತಾಸಕ್ತಿ ಇರುವುದಿಲ್ಲಾ. ನೌಕರರಿಗೆ ಕಿರುಕುಳ ಕೊಡುವ ಹಾಗೂ ಲಾಭಿ ಮಾಡಿಕೊಳ್ಳುವ ಉದ್ದೇಶದಿಂದ ಮಾಡುತ್ತಿದ್ದಾರೆ. ಸದರಿಯವರಿಂದ ಬಹಳಷ್ಟು ನೌಕರರಿಗೆ ನೆಮ್ಮದಿಯೇ ಇಲ್ಲದಂತಾಗಿದೆ.ಆದಕಾರಣ ವಾಯ್.ಡಿ. ಕುನ್ನಿಬಾವಿ ನಿವೃತ್ತ ಮಾಜಿ ಉಪಕಾರ್ಯದರ್ಶಿ ಜಿಲ್ಲಾ ಪಂಚಾಯತ ಧಾರವಾಡ ಇವರನ್ನು ನ್ಯಾಯಾಂಗ ಬಂದನ ಮಾಡುವರೆಗೂ ಹಾಗೂ ಸದರಿಯವರ ದೂರುಗಳಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲಾ, ಕೇವಲ ಸ್ವ ಹಿತಾಸಕ್ತಿ ಹಾಗೂ ಲಾಬಿ ಮಾತ್ರ ಇದೆ ಎಂದು ಸರ್ಕಾರ ಹಾಗೂ ನಮ್ಮ ಇಲಾಖೆಯ ಗಮನಕ್ಕೆ ತರುವ ಸಲುವಾಗಿ ಹಾಗೂ ಸದರಿಯವರ ಅರ್ಜಿಯನ್ನು ಮಾನ್ಯಮಾಡಬಾರದು ಹಾಗೂ ಸದರಿಯವರನ್ನು ಕಪ್ಪು ಪಟ್ಟಿಗೆ ಸೇರಿಸುವ ಉದ್ದೇಶದಿಂದ ದಿ 27/04/2025 ರಿಂದ ಅನಿಷ್ಠಾವಧಿ ಪ್ರತಿಭಟನೆಯನ್ನು ಜಿಲ್ಲೆಯ ಎಲ್ಲ ನೌಕರರು ಜಿಲ್ಲಾ ಪಂಚಾಯತ ಧಾರವಾಡ ಹೊರಾಂಗಣದಲ್ಲಿ ಹಮ್ಮಿಕೊಂಡಿದ್ದು ಇರುತ್ತದೆ. ಆದಕಾರಣ ಸದರಿ ವಿಷಯವನ್ನು ಮಾನ್ಯರ ಅವಗಾಹಣೆ ತರಬಯಸುತ್ತೇವೆ. ಸದರಿ ವ್ಯಕ್ತಿಯ ಬಗ್ಗೆ ನಡುವಳಿಕೆ ಬಗ್ಗೆ ಹಾಗೂ ಸದರಿ ವ್ಯಕ್ತಿಯನ್ನು ಸರಕಾರದಿಂದ ಕಪ್ಪು ಪಟ್ಟಿಗೆ ಸೇರಿಸಲು ತಾವು ಕೂಡ ಸರಕಾರಕ್ಕೆ ಹಾಗೂ ನಮ್ಮ ಇಲಾಖೆಗೆ ಪತ್ರ ವ್ಯವಹಾರ ಮಾಡಬೇಕೆಂದು ಮನವಿ ಮಾಡಿದರು.