SIRSI:ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ ಆರ್.ಡಿ. ಹೆಗಡೆ, ಆಲ್ಮನೆ ಆಯ್ಕೆ*

*ಸ್ಟಾರ್ 74 ನ್ಯೂಸ್ ಬ್ರೇಕಿಂಗ್*

*ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ  ಆರ್.ಡಿ. ಹೆಗಡೆ, ಆಲ್ಮನೆ ಆಯ್ಕೆ*
ದಾಂಡೇಲಿ: ಶಿರಸಿಯಲ್ಲಿ ಡಿಸೆಂಬರ್ 3 ಮತ್ತು 4 ರಂದು ನಡೆಯಲಿರುವ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ, ವಿಮರ್ಶಕ ಆರ್. ಡಿ. ಹೆಗಡೆ, ಆಲ್ಮನೆಯವರು  ಆಯ್ಕೆಯಾಗಿದ್ದಾರೆ  ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದ್ದಾರೆ.
 ಶನಿವಾರ ದಾಂಡೇಲಿಯ ಸಾಹಿತ್ಯ ಭವನದಲ್ಲಿ ನಡೆದ  ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ  ಸಮ್ಮೇಳನಾಧ್ಯಕ್ಷರ ಒಮ್ಮತದ ಆಯ್ಕೆ ಪ್ರಕ್ರಿಯೆ ನಡೆದಿದ್ದು,  ಸರ್ವಾಧ್ಯಕ್ಷತೆಗೆ ಜಿಲ್ಲೆಯ ಕೆಲವು ಸಾಹಿತಿಗಳ ಹೆಸರುಗಳ ಪ್ರಸ್ತಾವನೆ ಮತ್ತು ಚರ್ಚೆಯ ನಂತರ  ಸಭೆಯಲ್ಲಿ ಅಂತಿಮವಾಗಿ  ಸರ್ವಾನುಮತದಿಂದ  ಆರ್.ಡಿ. ಹೆಗಡೆಯವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಘೋಷಿಸಲಾಯಿತು  ಎಂದು ಬಿ.ಎನ್. ವಾಸರೆ ತಿಳಿಸಿದ್ದಾರೆ.
ನವೀನ ಹಳೆಯದು

نموذج الاتصال