ಶಿಗ್ಗಾವಿ ಕಾಂಗ್ರೇಸ್ ಅಭ್ಯರ್ಥಿ ವಿರುದ್ಧ ಸೆಡ್ಡು ಹೊಡೆದು ಕಣಕ್ಕೆ ಇಳಿದಿದ್ದ ಮಾಜಿ ಶಾಸಕ ಅಜ್ಜಂಪೀರ ಖಾದ್ರಿ
ಸೋಮವಾರ ನಾಮಪತ್ರ ವಾಪಸ ಪಡೆಯಲಿದ್ದಾರೆ.
ಇಂದು ಬೆಂಗಳೂರಿನಲ್ಲಿ ಸಿ ಎಂ ನಿವಾಸ ಕಾವೇರಿಯಲ್ಲಿ ಸಿ ಎಂ ಸಿದ್ದರಾಮಯ್ಯನವರು ಮತ್ತು ಸಚಿವ ಜಮೀರ ಅಹ್ಮದ ಖಾನ ಅವರು ಮಾತುಕತೆ ನಡೆಸಿ, ನಾಮಪತ್ರ ವಾಪಸ ಪಡೆಯಲು ಮನವೊಲಿಸಿದ್ದಾರೆ.
ಉತ್ತರ ಕರ್ನಾಟಕದ ಮುಸ್ಲಿಮ್ ಸಮಾಜದ ಪ್ರಭಾವಿ ಪ್ರಭಾವಿ ಮುಖಂಡ ಇಸ್ಮಾಯಿಲ್ ತಮಟಗಾರ ಮಧ್ಯಸ್ಥಿಕೆ ವಹಿಸಿದ ಪರಿಣಾಮ ಈ ಬೆಳವಣಿಗೆ ನಡೆದಿದೆ.