DHARWAD:ದ್ವಿಚಕ್ರ ವಾಹನ ಕಳ್ಳನ ಬಂಧನ 6 ವಾಹನ ವಶ

ದ್ವಿಚಕ್ರ ವಾಹನ ಕಳ್ಳನ ಬಂಧನ 6 ವಾಹನ ವಶ 
ಇತ್ತೀಚೆಗೆ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳ್ಳತನವಾಗಿದ್ದರ ಬಗ್ಗೆ ಪ್ರಕರಣ ದಾಖಲಾಗಿದ್ದು, ಸದರಿ ಕಳ್ಳತನ ಪ್ರಕರಣವನ್ನು ಭೇದಿಸಲು ಹುಬ್ಬಳ್ಳಿ ಧಾರವಾಡ ಪೊಲೀಸ್‌ ಕಮಿಷನರೇಟ್‌ನ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬೆಂಡಿಗೇರಿ ಪೊಲೀಸ್ ಠಾಣೆ ಪೊಲೀಸ್ ಇನ್ಸ್ ಪೆಕ್ಟರ ರವರಾದ  ಎಸ್.ಆರ್.ನಾಯಕ ರವರ ನೇತೃತ್ವದಲ್ಲಿ ವಿಶೇಷ ತಂಡವೊಂದನ್ನು ರಚಿಸಲಾಗಿತ್ತು.
ಸದರಿ ತಂಡವು ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಿದ ತಂಡವು, ಬೈಕ್ ಕಳ್ಳತನ ಮಾಡಿದ್ದ ಹುಬ್ಬಳ್ಳಿಯ ನೇಕಾರನಗರದ ಫಯಾಜ್ @ ಶ್ಯಾಂಪೂ ತೂರೆವಾಲೆ, ಎಂಬ ಆರೋಪಿತನನ್ನು ಬಂಧಿಸಿದ್ದು, ಬಂಧಿತ ಆರೋಪಿತನಿಂದ ಕಳ್ಳತನವಾಗಿದ್ದ ಬೈಕ್‌ ವಶಪಡಿಸಿಕೊಂಡಿದ್ದು, ಹೆಚ್ಚಿನ ವಿಚಾರಣೆ ವೇಳೆ ಇದೇ ಆರೋಪಿತನು ಮತ್ತಷ್ಟು ಬೈಕ್‌ಗಳನ್ನು ಕಳ್ಳತನ ಮಾಡಿದ್ದರ ಬಗ್ಗೆ ತಿಳಿದುಬಂದಿದ್ದು, ಕಳ್ಳತನವಾಗಿದ್ದ 2,25,000/- ರೂ ಮೌಲ್ಯದ ವಿವಿಧ ಕಂಪನಿಗಳ 06 ಬೈಕ್‌ಗಳನ್ನು ವಶಕ್ಕೆ ಪಡೆದುಕೊಂಡು, ಆರೋಪಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಈ ಪ್ರಕರಣದ ಕಾರ್ಯಾಚರಣೆಯಲ್ಲಿ ವಿಶೇಷ ಕರ್ತವ್ಯವನ್ನು ನಿರ್ವಹಿಸಿದ ಬೆಂಡಿಗೇರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಎಸ್.ಆರ್.ನಾಯಕ ಪಿ.ಎಸ್.ಐ  ರವಿ ವಡ್ಡರ ಮತ್ತು ಸಿಬ್ಬಂದಿ ಜನರಾದ ಸಿ.ಎಫ್‌.ಅಂಬಿಗೇರ, ಎನ್.ಐ.ನೀಲಗಾರ, ಹನಮಂತ ಕರಗಾಂವಿ, ಆರ್.ಎಸ್.ಹರಕಿ, ಬಿ.ಎಸ್ ಗಳಗಿ, ಆರ್.ಹೆಚ್.ಹಿತ್ತಲಮನಿ, ಎಸ್‌.ಎಸ್.ಮೇಟಿ, ಜಿ.ವಿ.ವಗ್ಗಣ್ಣವರ ರವರನ್ನೊಳಗೊಂಡ ತಂಡದ ಕಾರ್ಯವೈಖರಿಯನ್ನು ಮಾನ್ಯ ಪೋಲಿಸ್ ಆಯುಕ್ತರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿ ಪ್ರಶಂಸೆ
ವ್ಯಕ್ತಪಡಿಸಿರುತ್ತಾರೆ.
ನವೀನ ಹಳೆಯದು

نموذج الاتصال