DHARWAD:ಸಂಚಾರಿ ಪೊಲೀಸ್ ಠಾಣೆ ಎದುರು ನಿಲ್ಲಿಸಿದ್ದ "ಬೇಂದ್ರೆ ಬಸ್ಎಗರಿಸಿ ಆವಾಂತರ ಸೃಷ್ಟಿಸಿದ್ದ ಭೂಪ.

ಧಾರವಾಡದ ಸಂಚಾರಿ ಪೊಲೀಸ್ ಠಾಣೆ ಎದುರು ನಿಲ್ಲಿಸಿದ್ದ "ಬೇಂದ್ರೆ ಬಸ್
ಎಗರಿಸಿ ಆವಾಂತರ ಸೃಷ್ಟಿಸಿದ್ದ ಭೂಪ. 
ಹೀಗೂ ಆಗತ್ತೆ ಪೊಲೀಸರೇ ಜಾಗ್ರತೆ.    ಧಾರವಾಡ 24 : ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ವಶಕ್ಕೆ ಪಡೆದಿದ್ದ ಬೇಂದ್ರೆ ಸಾರಿಗೆಯ ಬಸ್‌ನ್ನ ಪೊಲೀಸ್ ಠಾಣೆಯ ಮುಂಭಾಗದಿಂದಲೇ ಆಸಾಮಿಯೋರ್ವ ಎಗರಿಸಿಕೊಂಡು ಹೋಗಿ ಆವಾಂತರ ಸೃಷ್ಟಿಸಿದ ಘಟನೆ ನಡೆದಿದೆ.

 ಧಾರವಾಡದ ಸಂಚಾರಿ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದ ಕೆಎ-25 ಡಿ-5136 ವಾಹನವನ್ನ ಠಾಣೆಯ ಮುಂಭಾಗದಲ್ಲಿ ನಿಲ್ಲಿಸಿದ್ದರು. ಬಸ್ ಚಾಲಕ ಚಾವಿಯನ್ನ ಅದರಲ್ಲಿಯೇ ಬಿಟ್ಟು ಹೋಗಿದ್ದನ್ನ ಯಾರೂ ಗಮನಿಸಿಯೇ ಇಲ್ಲ.ಇದೇ ಮಾರ್ಗದ ಮೂಲಕ ಹೋಗುತ್ತಿದ್ದ ವ್ಯಕ್ತಿಯೋರ್ವ ನೇರವಾಗಿ ಬಸ್ ಚಲಾಯಿಸಿಕೊಂಡು ಹೊರಟಿದ್ದಾನೆ. ಅಷ್ಟೇ ಅಲ್ಲ, ಜುಬ್ಲಿ ವೃತ್ತದ ಬಳಿ ಕಾರಿಗೂ ಡಿಕ್ಕಿ ಹೊಡೆದು ಅಲ್ಲಿಂದ ಹಳಿಯಾಳ ರಸ್ತೆಯತ್ತ ಹೊರಟಾಗ, ಪೊಲೀಸರು ಹಿಡಿದು ಎಳೆದು ತಂದಿದ್ದಾರೆ.

ಘಟನೆಯ ಕುರಿತು ಪೊಲೀಸ್ ಇಲಾಖೆಯ ಬಗ್ಗೆ ಮರುಕ ಹುಟ್ಟಿದಂತಾಗಿದೆ. ಬಸ್ ಎಗರಿಸಿದರೂ ಡ್ಯೂಟಿಯಲ್ಲಿ ಎಷ್ಟು ಮಗ್ನರಾಗಿದ್ದರೂ ಎಂಬುದು ಈ ಮೂಲಕ ಗೊತ್ತಾಗುತ್ತಿದೆ ಎಂಬ ಕುಹಕಗಳು ಕೇಳಿಬರತೊಡಗಿವೆ.

ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರೇ, ಇದು ನಿಮ್ಮ ಸಿಬ್ಬಂದಿಗಳ ಅತ್ಯುತ್ತಮ ಕಾರ್ಯ ತತ್ಪರತೆ. ನೋಡಿ, ಸಾಧ್ಯವಾದರೇ ನಿಮ್ಮ ರೀತಿಯಲ್ಲಿಯೇ ಅತ್ಯುತ್ತಮ ಫಲಕ ಕೊಟ್ಟು ಕಳಿಸಿ ಎಂದು ಪ್ರಜ್ಞಾವಂತರು ಹೇಳುವ ಸ್ಥಿತಿಗೆ ಈ ಘಟನೆ ಕಾರಣವಾಗಬಹುದು ಎಂದಿದ್ದಾರೆ.
ನವೀನ ಹಳೆಯದು

نموذج الاتصال