ಕೆಸಿಡಿ ಪ್ರಾಣಿಶಾಸ್ತ್ರ ವಸ್ತುಸಂಗ್ರಹಾಲಯದಲ್ಲಿ ವಿಶ್ವ ಗುಬ್ಬಚ್ಚಿಗಳ ದಿನ ಆಚರಣೆ.
ಧಾರವಾಡ : ವಿಶ್ವ ಗುಬ್ಬಿಗಳ ದಿನಾಚರಣೆ ಅಂಗವಾಗಿ,ಕನಾ೯ಟಕದ ಅತಿದೊಡ್ಡ ಪ್ರಾಣಿಶಾಸ್ತ್ರ ವಸ್ತುಸಂಗ್ರ ಹಾಲಯವಾದ ಕೆಸಿಡಿ ಪ್ರಾಣಿಶಾಸ್ತ್ರ ವಸ್ತುಸಂಗ್ರಹಾಲಯಕ್ಕೆ ಧಾರವಾಡ ಜಿಲ್ಲಾ ಅಭಿಯಾನ ಪರಿಸರ ಸಮಿತಿ ಸಂಸ್ಥೆಯ ಅಧ್ಯಕ್ಷರಾದ ಜಯಶ್ರೀ ಗೌಳಿಯವರು ಕೆಲಗೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳೊಂದಿಗೆ ಮತ್ತು ಮುಖ್ಯ ಶಿಕ್ಷಕರಾದ ಮಹಾದೇವಿ.ದೊಡಮನಿ ಮತ್ತು ಹಿರಿಯ ದೈಹಿಕ ಶಿಕ್ಷಕರಾದ ಎಸ್.ಜಿ.ಕವಟೇಕರ ಮತ್ತು ಆರ್.ಎಸ್.ಹಿರೇಗೌಡರ, ಫರ್ನಾಂಡಿಸ್, ಸವಿತಾ,ಶ್ರೀ.ರಾಜೇಂದ್ರರವರ ಜೊತೆಗೆ ಭೇಟಿ ನೀಡಿ, ಎಲ್ಲ ಪ್ರಾಣಿ-ಪಕ್ಷಿಗಳ ಬಗ್ಗೆ ಕೆಸಿಡಿ ಪ್ರಾಣಿಶಾಸ್ತ್ರ ವಸ್ತುಸಂಗ್ರಹಾಲಯದ ಟ್ಯಾಕ್ಸಿಡಮಿ೯ಸ್ಟರಾದ ನವೀನ.ಪ್ಯಾಟಿಮನಿಯವರಿಂದ ಮಾಹಿತಿ ತಿಳಿದುಕೊಂಡರು.
ಈ ಸಂದರ್ಭದಲ್ಲಿ ನವೀನ ಪ್ಯಾಟಿಮನಿಯವರು ಪ್ರಾಣಿಶಾಸ್ತ್ರ ವಸ್ತುಸಂಗ್ರಹಾಲಯದ ಎಲ್ಲ ಪ್ರಾಣಿ-ಪಕ್ಷಿಗಳ ಬಗ್ಗೆ ಮಾಹಿತಿ ನೀಡಿ, ಈಗ ಬೇಸಿಗೆ ಇರುವುದರಿಂದ ಎಲ್ಲ ಪ್ರಾಣಿ-ಪಕ್ಷಿಗಳು ನಮ್ಮ ಹಾಗೆ ತೊಂದರೆಗಳನ್ನು ಅನುಭವಿಸುತ್ತಾ ಇರುತ್ತವೆ.ಮನುಷ್ಯರಾದ ನಾವು ಸ್ವಾಥ೯ತೆಯನ್ನು ಬಿಟ್ಟು ಪ್ರಾಣಿ-ಪಕ್ಷಿಗಳಿಗೆ ಮನೆಯ ಮುಂದೆ ಆಹಾರ ಧಾನ್ಯಗಳನ್ನು ಮತ್ತು ನೀರನ್ನು ಇಟ್ಟು ಪ್ರಾಣಿ-ಪಕ್ಷಿಗಳಿಗೆ ಸಹಾಯ ಮಾಡಬೇಕು. ಎಲ್ಲ ಪ್ರಾಣಿ-ಪಕ್ಷಿಗಳನ್ನು ಮತ್ತು ಪರಿಸರವನ್ನು ಉಳಿಸಿ ಬೆಳಸಬೇಕು ಎಂದು ಹೇಳಿದರು.
ಜಯಶ್ರೀ ಗೌಳಿ ಮಾತನಾಡಿ ಗುಬ್ಬಚ್ಚಿಗಳು ಉಳಿಸಿಬೇಕು ಮತ್ತು ಹೆಚ್ಚು ಹೆಚ್ಚು ಗಿಡಗಳನ್ನು ನೆಟ್ಟು ಪ್ರಾಣಿ-ಪಕ್ಷಿಗಳ ಬಗ್ಗೆ ಕಾಳಜಿ ವಹಿಸಿ ಪರಿಸರವನ್ನು ಕಾಪಾಡಬೇಕೆಂದರು
ಕಾರ್ಯಕ್ರಮದಲ್ಲಿ ಸಸಿಗಳನ್ನು ವಿತರಿಸಲಾಯಿತು.