ಹಳೇ ಬಟ್ಟೆಗೆ ಹೊಸ ಮೆರಗು" ಸ್ಪಧೆ೯ ಮತ್ತು ವಸ್ತು ಪ್ರದರ್ಶನ.

ಸ್ವಾವಲಂಬಿ ಬದುಕಿಗೆ  ಮಹಿಳೆಯರಿಗೆ ಉದ್ಯೋಗ ಮಾಹಿತಿ,ತರಬೇತಿಗಳ ಅವಶ್ಯ
             



ಹಳೇ ಬಟ್ಟೆಗೆ ಹೊಸ ಮೆರಗು" ಸ್ಪಧೆ೯ ಮತ್ತು ವಸ್ತು ಪ್ರದರ್ಶನ.
     
 ಧಾರವಾಡ : ಜಿಲ್ಲಾ ಅಭಿಯಾನ ಪರಿಸರ ಸಮಿತಿಯಿಂದ 6 ನೇ ವಾಷಿ೯ಕೋತ್ಸವ ಹಾಗೂ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಜರುಗಿದ" ಕಸದಿಂದ ರಸ" ಮತ್ತು" ಹಳೇ ಬಟ್ಟೆಗೆ ಹೊಸ ಮೆರಗು" ಸ್ಪಧೆ೯ ಮತ್ತು ವಸ್ತು ಪ್ರದರ್ಶನವನ್ನು ಬೇಂದ್ರೆ ಭವನ ಸಾಧನಕೇರಿ ಯಲ್ಲಿ ಆಯೋಜಿಸಲಾಗಿತ್ತು.
    ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಡಾ. ಎ ಎಸ್ ಬೆಲ್ಲದ್ ರವರು ಹೆಣ್ಣು ಅಬಲೆಯಲ್ಲ, ಸಬಲೆ ಆಕೆ ತನ್ನನ್ನು ರಕ್ಷಿಸಬಲ್ಲಳು, ಕುಟುಂಬ ನಿವ೯ಹಿಸಬಲ್ಲಳು, ಆದರೆ ಶಿಕ್ಷಣ ,ಉದ್ಯೋಗ ಅಂತ ಬಂದಾಗ ಕುಟುಂಬದಲ್ಲಿ   ಗಂಡು ಮಕ್ಕಳಿಗೆ  ಹೆಚ್ಚಿನ ಆದ್ಯತೆ ನೀಡುವ ಪರಿಪಾಠ ನಮ್ಮಲ್ಲಿ ಬೆಳೆದು ಬಂದಿದೆ. ಶೇಕಡಾ 50 ರಷ್ಟು ಮಾತ್ರ ಕುಟುಂಬಗಳು  ಮಾತ್ರ ಹೆಣ್ಣು ಮಕ್ಕಳಿಗೆ ಅವಕಾಶ ನೀಡುತ್ತಿವೆ.  ಸ್ವಾವಲಂಬಿ ಬದುಕಿಗೆ ಬಡ ಮಹಿಳೆಯರಿಗೆ ಉದ್ಯೋಗ ಮಾಹಿತಿ,ತರಬೇತಿಗಳ ಅವಶ್ಯಕತೆ ಇದೆ.ಮಹಿಳಾ ಸಬಲೀಕರಣಕ್ಕೆ ಪರಿಸರ ಸಮಿತಿಯಿಂದ ಸ್ವ ಉದ್ಯೋಗ ತರಬೇತಿ ಗಳನ್ನು ಉಚಿತವಾಗಿ ನೀಡುತ್ತಿರುವ ಜಯಶ್ರೀ ಗೌಳಿಯವರು ಮಹಿಳೆಯರು ತಯಾರಿಸುವ ವಸ್ತುಗಳಿಗೆ ವೇದಿಕೆಗಳನ್ನು ಕಲ್ಪಿಸಿ ಪ್ರೋತ್ಸಾಹಿಸುವ  ಮಹತ್ವದ ಕೆಲಸ ಮಾಡುತ್ತಿರವುದು ಶ್ಲಾಘನೀಯ.ಕಡಿಮೆ ಬಂಡವಾಳದಲ್ಲಿ ಮನೆಯಿಂದಲೇ ಮಾಡಬಹುದಾದ  ಅನೇಕ ಮಾದರಿಗಳನ್ನು ವಸ್ತು ಪ್ರದರ್ಶನದಲ್ಲಿ ಇಂದು ಇಡಲಾಗಿದೆ. ಕಸದಿಂದ ರಸ"ಕಸವನ್ನು ಸಂಪನ್ಮೂಲವಾಗಿ ಬಳಸಿ ಮಹಿಳೆಯರು ವಿನೂತನ  ಕಲಾಕೃತಿಗಳನ್ನು ತಯಾರಿಸಿ ವಸ್ತು ಪ್ರದರ್ಶನದಲ್ಲಿ ಇಟ್ಟಿರುವುದು ನೋಡಿದ್ರೆ ಆಶ್ಚರ್ಯ, ಸಂತೋಷ ವಾಗುತ್ತೆ ಬೇಡವಾದ ವಸ್ತುಗಳನ್ನು ಬಳಸಿ ಸುಂದರವಾಗಿ ತಯಾರಿಸಿದ  ಕಲಾವಿದ  ಮಹಿಳೆಯರಿಗೆ ಅಭಿನಂದನೆಗಳನ್ನು ತಿಳಿಸಿದರು. 

    ಪರಿಸರಕ್ಕೆ ತಮ್ಮದೇ ಸೇವೆಯನ್ನು ನೀಡುತ್ತಿರುವ ಜಯಶ್ರೀ ಗೌಳಿಯವರಿಗೆ ಶುಭಾಶಯ ತಿಳಿಸಿ ಕಾಯ೯ಕ್ರಮ ಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು.              
      
ಕಾಯ೯ಕ್ರಮದಲ್ಲಿ  ಮಹಿಳಾ ಪೌರ ಕಾಮಿ೯ಕರನ್ನು ಗೌರವಿಸಲಾಯಿತು. ಹಾಗೂ ವಿಶ್ವ ಮಹಿಳಾ ದಿನ ದ ವಿಶೇಷವಾಗಿ  ಶ್ರೀಮತಿ ಲಲಿತಾ ಪಾಟೀಲ,(ಶಿಕ್ಷಕಿ) ಪದ್ಮಾವತಿ ತುಂಬಗಿ(ಆರೋಗ್ಯ ನಿರೀಕ್ಷಕರು) ದೇವಕ್ಕ ಲಂಬಾಣಿ (ಆಶಾ ಕಾರ್ಯಕರ್ತೆ) ಸವಿತಾ ಗೌಡರ(ಗೃಹಿಣಿ) ಇವರನ್ನು ಸನ್ಮಾನಿಸಲಾಯಿತು.

        ಸ್ಪಧೆ೯ಯಲ್ಲಿ 120 ಮಹಿಳೆಯರು ಭಾಗವಹಿಸಿದ್ದು , "ಕಸದಿಂದ ರಸ" ಸ್ಫಧೆ೯ಯ ವಿಜೇತರು ಕ್ರಮವಾಗಿ  ಎಸ್. ಕೆ ಮಠಪತಿ, ರೂಪ ಕಳಸದ, ಜ್ಯೋತಿ ಮುರಗಿ, ರಾಜೇಶ್ವರಿ ಎಚ್ ಪಿ, ವಿನೂತ ಹೆಗಡೆ, ತೇಜಸ್ವಿನಿ ಹುಂಡೇಕರ, ಜ್ಯೋತಿ ತೋನ್ಸೆ, ವಾಣಿ ಪಾಟೀಲ್, ಬಹುಮಾನಗಳನ್ನು ಪಡೆದರು." ಹಳೇ ಬಟ್ಟೆಗೆ ಹೊಸ ಮೆರಗು" ವಿಭಾಗದಲ್ಲಿ ಕ್ರಮವಾಗಿ ಅಪಣಾ೯ ಮದರಿಮಠ, ರಾಜೇಶ್ವರಿ ಮಾಳಗಿ, ಜಯಶ್ರೀ ಕರಗುದರಿ, ವೀಣಾ ಪಾಟೀಲ, ಫಾತಿಮಾ ಹಂಚಿನಮನಿ, ಜಯಶ್ರೀ ಯಂಡಿಗೇರಿ, ಅಚ೯ನಾ ತಿವಾರಿ, ರೇಖಾ ಸಾಲಮನಿ ಬಹುಮಾನಗಳನ್ನು ಪಡೆದರು.

      ಕಾಯ೯ಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಪತ್ರಕರ್ತ ರವಿಕುಮಾರ್ ಕಗ್ಗಣ್ಣನವರ, ಡಾ. ಪಾವ೯ತಿ  ಹಾಲಬಾವಿ  ಮಾತನಾಡಿ ವಸ್ತು ಪ್ರದರ್ಶನ ಯಶಸ್ವಿಯಾಗಿ ನಡೆಸಿ ,ಪರಿಸರ ಕ್ಷೇತ್ರದಲ್ಲಿ  ತಮ್ಮ ಸೇವೆಯನ್ನು ನೀಡುತ್ತಿರುವ ಜಯಶ್ರೀ ಗೌಳಿಯವರು ಮಹಿಳಾ ದಿನಾಚರಣೆ ಅಂಗವಾಗಿ ನಡೆದ  ಈ ಕಾರ್ಯಕ್ರಮ ಅಥ೯ಪೂಣ೯ವಾಗಿದ್ದು, ಇನ್ನು ಹೆಚ್ಚಿನ ಕಾಯ೯ಕ್ರಮ ಗಳನ್ನು ಆಯೋಜಿಸುವ ಸಲಹೆ ಸೂಚನೆಗಳನ್ನು ನೀಡಿ ಶುಭಕೋರಿದರು.
   
  ಸಮಿತಿಯ ಅಧ್ಯಕ್ಷರಾದ ಜಯಶ್ರೀ ಗೌಳಿಯವರ  ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣದಲ್ಲಿ,೨೦೨೩ರಲ್ಲಿ ತಾವು ಆಯೋಜಿಸಿದ್ದ  ಪರಿಸರ ಜಾಗೃತಿ ಕಾರ್ಯಕ್ರಮ ಗಳ ಬಗ್ಗೆ ವರದಿ ನೀಡಿದರು. ಕಾಯ೯ಕ್ರಮದ ಅಧ್ಯಕ್ಷತೆಯನ್ನು ಸರಸ್ವತಿ ಭೋಸಲೆ ವಹಿಸಿದ್ದರು. ಅತಿಥಿಗಳನ್ನು ಜಯಶ್ರೀ ಯವರು ಸಸಿಗಳನ್ನು ನೀಡಿ ಗೌರವಿಸಿದರು.ಸ್ಪಧೆ೯ಯಲ್ಲಿ ಭಾಗವಹಿಸಿದ್ದ ಎಲ್ಲಾ ಮಹಿಳೆಯರಿಗೆ ಬಟ್ಟೆಯ ಕೈಚೀಲಗಳನ್ನು, ತುಳಸಿ ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು.  ಸ್ಫಧೆ೯ಯ ತೀಪು೯ಗಾರರಾಗಿ ವಿಜಯಲಕ್ಷ್ಮೀ ಲೂತಿಮಠ, ರೇಖ ಮೊರಬ, ಜಯಶ್ರೀ ಜೋಶಿ,ಅನಿತಾ ಭಾಗವಹಿಸಿದ್ದರು. ಶಶಿಕಲಾ ಪಾಟೀಲ ಹಾಗೂ  ಶ್ರಿಮತಿ ಶ್ರೀದೇವಿ ಗೊಬ್ಬಾನಿ ಯವರು ಕಾಯ೯ಕ್ರಮ ನಡೆಸಿಕೊಟ್ಟರು.

ನವೀನ ಹಳೆಯದು

نموذج الاتصال