ಮಹಾಲಕ್ಷ್ಮೀ ಕೋ ಆಪರೇಟಿವ್ ಸೊಸೈಟಿ ನಾಲ್ಕನೇ ಬಾರಿಗೆ ವಿಜಯಕುಮಾರ ಕುಲಕರ್ಣಿ ಚೇರಮನ್

ಮಹಾಲಕ್ಷ್ಮೀ ಕೋ ಆಪರೇಟಿವ್ ಸೊಸೈಟಿ 
ನಾಲ್ಕನೇ ಬಾರಿಗೆ ವಿಜಯಕುಮಾರ ಕುಲಕರ್ಣಿ ಚೇರಮನ್
ಧಾರವಾಡ : ಇಲ್ಲಿನ ಮಹಾಲಕ್ಷ್ಮೀ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಚೇರಮನ್‌ರಾಗಿ ಹಿರಿಯ ಸಹಕಾರಿ ಧುರೀಣ ವಿಜಯಕುಮಾರ ಕುಲಕರ್ಣಿ ಅವಿರೋಧವಾಗಿ ಆಯ್ಕೆಯಾದರು. 
ಶುಕ್ರವಾರ
ಸೊಸೈಟಿಯಲ್ಲಿ ಜರುಗಿದ ನೂತನ ಚೇರಮನ್ ಮತ್ತು ವೈಸ್ ಚೇರಮನ್ ಆಯ್ಕೆ ಪ್ರಕ್ರಿಯೆಯಲ್ಲಿ ಚೇರಮನ್ ಸ್ಥಾನಕ್ಕೆ ವಿಜಯಕುಮಾರ ಕುಲಕರ್ಣಿ ಮತ್ತು  ವೈಸ್ ಚೇರಮನ್ ಸ್ಥಾನಕ್ಕೆ ಹಿರಿಯ ನ್ಯಾಯವಾದಿ ಕೆ.ಕೆ.ತೆರಗುಂಟಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. 
ಎರಡೂ ಸ್ಥಾನಗಳಿಗೆ ತಲಾ ಒಂದು ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ವಿಜಯಕುಮಾರ ಕುಲಕರ್ಣಿ ಮತ್ತು  ಕೆ.ಕೆ.ತೆರಗುಂಟಿ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿಯಾದ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಸುನೀತಾ ಪಾತ್ರೋಟ ಅವರು ಘೋಷಿಸಿದರು.
ವಿಜಯಕುಮಾರ ಕುಲಕರ್ಣಿ ಅವರು ನಾಲ್ಕನೇ ಬಾರಿಗೆ ಚೇರಮನ್ ಆಗಿ ಆಯ್ಕೆಯಾಗುವ ಸೊಸೈಟಿಯ ಆಡಳಿತ ಮಂಡಳಿಯ ನೇತೃತವ್ವಹಿಸಿಕೊಂಡಿದ್ದಾರೆ. 
ಈ ಸಂದರ್ಭದಲ್ಲಿ ಸೊಸೈಟಿಯ ನಿರ್ದೇಶಕರಾದ ಅಮೃತೇಶ್ವರ ಬಳ್ಳೊಳ್ಳಿ, ಶಶಿಧರ ವೀರಭದ್ರಪ್ಪ ಹೊಸೂರ, ರಮೇಶ ಮಲ್ಲಿಕಾರ್ಜುನ ಬಣಕಾರ, ದುಂಡಪ್ಪ ಗದಿಗೆಪ್ಪ ಗುಲಾಲದವರ, ನೇಮಿನಾಥ ಶ್ರೀಕಾಂತ ಪತ್ರಾವಳಿ, ಸಂಗಯ್ಯ ಕೂಡಲಯ್ಯ ಗಣಚಾರಿ, ಕಾಳಪ್ಪ ವೀರಬಸಪ್ಪ ಬಡಿಗೇರ, ಕರಿಯಪ್ಪ ಬಸಪ್ಪ ತಳವಾರ, ನಿರ್ಮಲಾ ಪರಪ್ಪ ಮಾಳಶೆಟ್ಟಿ, ಪ್ರೇಮಾ ಶೇಖರಪ್ಪ ಡಂಗರಿ ಸೇರಿದಂತೆ ಸದಸ್ಯರು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ ನಿಲುಗಲ್ಲ ಮತ್ತು ಸಿಬ್ಬಂದಿ ಈ ಸಂದರ್ಭದಲ್ಲಿದ್ದರು.
ನವೀನ ಹಳೆಯದು

نموذج الاتصال