ನಾಳೆ ಸಾಂಸ್ಕೃತಿಕ ಕಲಾ ವೈಭವ
ಧಾರವಾಡ 03 :
ಸಾಂಸ್ಕೃತಿಕ ಲೋಕ ಆರ್ಟ್ ಮತ್ತು ಕಲ್ಚರಲ್ ಅಕಾಡೆಮಿ, ಧಾರವಾಡ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ದಿ 04 ರ ಗುರುವಾರ ಸಂಜೆ 5-30 ಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಭವನದ ಸಭಾಭವನದಲ್ಲಿ ಸಾಂಸ್ಕೃತಿಕ ಕಲಾ ವೈಭವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು
ಸಾಂಸ್ಕೃತಿಕ ಲೋಕದ ಕಾರ್ಯದರ್ಶಿಗಳಾದ ಸೈಯದ ಎ ಎಮ್ ತಿಳಿಸಿದರು,
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು
ಸಮಾಜಸೇವಕರು, ಯುವ ಮುಖಂಡರಾದ ಅರವಿಂದ ಏಗನಗೌಡರ ಉದ್ಘಾಟನೆ ಮಾಡುವರು. ಅಧ್ಯಕ್ಷತೆಯನ್ನು ಸಾಹಿತಿ,ಸಂಘಟಕರಾದ ಮಾರ್ತಾಂಡಪ್ಪ ಕತ್ತಿ ವಹಿಸುವರು. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಬೆಕ್ಕೇರಿ, ಕರವೇ ಧಾರವಾಡ ಜಿಲ್ಲಾಧ್ಯಕ್ಷರಾದ ರುದ್ರೇಶ ಹಳವದ, ನೃತ್ಯ ನಿರ್ದೇಶಕರಾದ ಡಾ.ಪ್ರಕಾಶ ಮಲ್ಲಿಗವಾಡ, ಶೀತಲ್ ಗೋಲ್ಡ ಸಂಸ್ಥೆಯ ಮುಖ್ಯಸ್ಥರಾದ ಜಯಂತಿಲಾಲ್ ಜೈನ್, ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದ ಅಧ್ಯಕ್ಷರಾದ ಎಮ್.ಎಸ್ ಫರಾಸ್, ಕರವೇ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಮಲ್ಲಮ್ಮ ಗೌಡರ, ಕಮಾಡೋಸ್ ನ ಮುಖ್ಯಸ್ಥರಾದ ಎನ್.ಎ ದೇಸಾಯಿ, ಕಲಾವಿದರಾದ ಅಶೋಕ ನಿಂಗೋಲಿ ಆಗಮಿಸುವರು.
ನಂತರ ಪಂ ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ, ಧಾರವಾಡ, ಸಾಂಸ್ಕೃತಿಕಲೋಕ ಆರ್ಟ್ & ಕಲ್ಚರಲ್ ಅಕಾಡೆಮಿ, ಧಾರವಾಡ, ಕಲಾ ಸ್ಪಂದನ, ಹಾವೇರಿ, ಸುನೀಲ ಅರಳಿಕಟ್ಟಿ ಮತ್ತು ತಂಡ, ರಿತಿಕಾ ನೃತ್ಯ ತಂಡ, ಮಲ್ಲನಗೌಡ ಪಾಟೀಲ ಮತ್ತು ತಂಡ, ಶ್ರೀಮತಿ ಆಶಾ ಮತ್ತು ತಂಡ, ಕಾರ್ತೀಕ ಗೋಸಾವಿ ಮತ್ತು ತಂಡ, ಶ್ರೀಮತಿ ಮಾಜಾನ್ ನದಾಫ ತಂಡ, ಶಿವಾನಂದ ಅಮರಶೆಟ್ಟಿ ತಂಡಗಳಿಂಡ ವಿವಿಧ ಸಾಂಸ್ಕೃತಿಕ ಕಲಾ ವೈಭವದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಹಾಗೂ ವಿವಿಧ ಕ್ಷೇತ್ರದದಲ್ಲಿ ಸಾಧನೆ ಮಾಡಿದ ಸಾಧಕರಾದ ಶ್ರೀ ನಾಗರಾಜ ಕಲ್ಲೂರು (ವಕೀಲ ಕ್ಷೇತ್ರ), ಕುಮಾರಿ ಅಮೃತಾ ಕುರಲಿ (ಕ್ರೀಡಾ ಕ್ಷೇತ್ರ), ಶ್ರೀಮತಿ ನಂದಾ ಅಚಲಕರ (ಯೋಗ ಮತ್ತು ಧ್ಯಾನ), ಶ್ರೀ ಆತ್ಮಾನಂದ ಕಬ್ಬೂರ (ನೃತ್ಯ ಕಲಾವಿದರು), ಕುಮಾರಿ ಶ್ರೇಯಾ ಪಡಸಲಗಿ (ಸಂಗೀತ ಕ್ಷೇತ್ರ) ಡಾ.ಮುರಳಿಧರ (ಮಾಜಿ ಅಭಿಯಂತರರು ಪಿ.ಡಬ್ಲ್ಯೂ.ಡಿ), ಶ್ರೀಮತಿ ನಾಗವೇಣಿ ಪುಡಕಲಕಟ್ಟಿ(ಪ್ರಾಚಾರ್ಯರು), ಶ್ರೀ ಮನೋಜ (ZAC
ಹು.ಧಾ.ಮ.ಪಾಲಿಕೆ) ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ
ಎನ್ ಎ ದೇಸಾಯಿ, ಪ್ರೇಮಾನಂದ ಶಿಂದೆ ಇದ್ದರು.