ಡಿಜಿಟಲ್‌ ತಂತ್ರಜ್ಞಾನವನ್ನು ತಿಳಿದುಕೊಳ್ಳವದು ಅವಶ್ಯಕ -ಡಾ. ಸುರೇಶ ತುವಾರ .

ಡಿಜಿಟಲ್‌ ತಂತ್ರಜ್ಞಾನವನ್ನು ತಿಳಿದುಕೊಳ್ಳವದು ಅವಶ್ಯಕ -ಡಾ. ಸುರೇಶ ತುವಾರ .
ಧಾರವಾಡ  : 
ವಿದ್ಯಾರ್ಥಿಗಳು ಪ್ರಸ್ತುತ  ಹೊಸ ವಿದ್ಯಮಾನಗಳನ್ನು ತಿಳಿದುಕೊಳ್ಳಲು ಮತ್ತು  ಜ್ಞಾನವನ್ನು ವೃದ್ಧಿಸಿ ಕೊಳ್ಳಲು ಬೆಳೆಸಿಕೊಳ್ಳಲು ಡಿಜಿಟಲ್‌ ತಂತ್ರಜ್ಞಾನವನ್ನು ತಿಳಿದುಕೊಳ್ಳವದು ಅವಶ್ಯಕವಾಗಿದೆ  ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕರಾದ ಡಾ. ಸುರೇಶ ತುವಾರ  ಅಭಿಪ್ರಾಯಪಟ್ಟರು.  

ಅವರು ಕರ್ನಾಟಕ ಕಲಾ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗವು  ಫ್ಯಾರನ್ ಹಾಲ್ ನಲ್ಲಿ ಆಯೋಜಿಸಿದ್ದ ಅರ್ಥಶಾಸ್ತ್ರ ಅಧ್ಯಯನ ಕೂಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.  

ವಿದ್ಯಾರ್ಥಿಗಳು ಪ್ರಸ್ತುತ ಡಿಜಿಟಲ್ ವಿದ್ಯಮಾನಗಳನ್ನು ತಮ್ಮ ಜ್ಞಾನವನ್ನು ಬೆಳೆಸಿಕೊಳ್ಳಲು ಹಾಗೂ ಹೊಸ ವಿಷಯಗಳನ್ನು ಕಲಿಯಲು ಬಳಸಿಕೊಳ್ಳಬೇಕು  ಎಂದ ಅವರು ಹೊಸ ಶಿಕ್ಷಣ ನೀತಿಯ ಆಯ್ಕೆ ಆಧಾರಿತ ಕ್ರೆಡಿಟ್ ವ್ಯವಸ್ಥೆಯ ಮೂಲಕ ಎಲ್ಲ ವಿಷಯಗಳಿಗೆ ಸಮಾನ ಮಾನ್ಯತೆ ದೊರಕಿದೆ ಎಂದರು. 

ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ. ಶೌಕತ್ ಅಲಿ ಮೇಗಲಮನಿ ಮಾತನಾಡಿ ವಿದ್ಯಾರ್ಥಿಗಳು ಜ್ಞಾನವನ್ನು ಕೌಶಲ್ಯಕ್ಕೆ ಪರಿವರ್ತನೆ ಮಾಡಿಕೊಳ್ಳದೇ ಇದ್ದರೆ ಶಿಕ್ಷಣ  ಅಪೂರ್ಣ, ಎಂದ ಅವರು ಕೌಶಲ್ಯದಿಂದ ಉದ್ಯೋಗ ಅವಕಾಶಗಳು ಪಡೆಯಲು ಹೆಚ್ಚು ಅನುಕೂಲಕ ಕರ್ನಾಟಕ ಕಾಲೇಜಿನಲ್ಲಿ ಓದಿದವರು ಎಂದಿಗೂ ಜೀವನದಲ್ಲಿ ಎಂದಿಗೂ ವಿಫಲತೆಯನ್ನು ಕಂಡಿಲ್ಲ ಎಂದರು. 

ಕರ್ನಾಟಕ ಕಲಾ ಮಹಾವಿದ್ಯಾಲಯದ ಐ. ಕ್ಯೂ. ಎ. ಸಿ. ವಿಭಾಗದ ಸಂಯೋಜಕರಾದ ಡಾ. ಐ. ಸಿ. ಮುಳಗುಂದ ಮಾತನಾಡಿ...ಸಮಾಜ ವಿಜ್ಞಾನದ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಉಪಯುಕ್ತವಾಗಿದ್ದು, ತರಬೇತಿ ಆಧಾರಿತ ಬೋಧನೆ ಬಹಳ ಮಹತ್ವ ಪಡೆದುಕೊಂಡಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಭಾರ ಪ್ರಾಚಾರ್ಯರಾದ ಡಾ.ಮಂಜುಳಾ ಚಲುವಾದಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಐ. ಕ್ಯೂ. ಎ. ಸಿ. ವಿಭಾಗದ ಸಂಯೋಜಕರಾದ ಡಾ. ಐ. ಸಿ. ಮುಳಗುಂದ, ಕರ್ನಾಟಕ ಕಲಾ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಎಸ್. ಅನ್ನಪೂರ್ಣ, ಎಸ್, ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರು, ವಿದ್ಯಾರ್ಥಿ ಕಾರ್ಯದರ್ಶಿ ಸೃಷ್ಟಿ ದೇಶಪಾಂಡೆ, ಈರಪ್ಪ ಬಿಸನಾಳ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

                            -------------

ಫೊಟೊ ಶೀರ್ಷಿಕೆ:-1

ಕರ್ನಾಟಕ ಕಲಾ ಕಾಲೇಜಿನ ಅರ್ಥಶಾಸ್ತ್ರ ವಿಭಾಗವು ಆಯೋಜಿಸಿದ ಕಾರ್ಯಕ್ರಮದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕರಾದ ಡಾ. ಸುರೇಶ ತುವಾರ  ಮಾತನಾಡಿದರು. 

ಫೊಟೊ ಶೀರ್ಷಿಕೆ:-2

ಕರ್ನಾಟಕ ಕಲಾ ಕಾಲೇಜಿನ ಅರ್ಥಶಾಸ್ತ್ರ ವಿಭಾಗವು ಆಯೋಜಿಸಿದ ಕಾರ್ಯಕ್ರಮದಲ್ಲಿ ಆಡಂ ಸ್ಮಿತ್ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು.
ನವೀನ ಹಳೆಯದು

نموذج الاتصال