ಎತ್ತಿನಗುಡ್ಡ ಗ್ರಾಮದಲ್ಲಿ ‌ಶ್ರೀ ಸಿದ್ದರಾಮೇಶ್ವರ ಜನ್ಮ‌ ಜಯಂತಿ ಆಚರಣೆ**

*"ಎತ್ತಿನಗುಡ್ಡ ಗ್ರಾಮದಲ್ಲಿ ‌ಶ್ರೀ ಸಿದ್ದರಾಮೇಶ್ವರ ಜನ್ಮ‌ ಜಯಂತಿ ಆಚರಣೆ**

"ವೇಶವ ಧರಿಸಿ ಫಲವೇನಯ್ಯ, ವೇಷದಂತೆ ಆಚರಣೆ ಇಲ್ಲದಿದ್ದಾಗ ಎನ್ನುವ ವಚನ ಸಾರಿ ಹೇಳಿದ 
12ನೇ ಶತಮಾನದ ಖ್ಯಾತ ಶಿವಶರಣರು ಮತ್ತು ವಚನಕಾರರಾಗಿದ್ದ ಶ್ರೀ ಶಿವಯೋಗಿ ಸಿದ್ದರಾಮೇಶ್ವರರ ಜನ್ಮ ಜಯಂತಿಯಂದು ಅವರಿಗೆ ನನ್ನ ಭಕ್ತಿಪೂರ್ವಕ ಪ್ರಣಾಮಗಳು ಎಂದು ಮಾಜಿ ಮಹಾಪೌರರು ಹಾಗೂ ದಕ್ಷಿಣ ಭಾರತ ಹಿಂದಿ‌ ಪ್ರಚಾರ ಸಭಾದ ಅಧ್ಯಕ್ಷರು ಆದ ಈರೇಶ ಅಂಚಟಗೇರಿ ಹೇಳಿದ್ರು. 
ಎತ್ತಿನಗುಡ್ಡ ಗ್ರಾಮದಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾದ ಅವರು, ಶ್ರೀ ಸಿದ್ಧರಾಮೇಶ್ಬರ ಅವರು ಬರೆದ ವಚನದ ಸಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು. 
ಇಂದು ಗುರುಸಿದ್ಧರಾಮೇಶ್ವರ ಜಯಂತಿ - ಬಸವಯೋಗಿ 
ಸಿದ್ಧರಾಮೇಶ್ವರರ ಜಯಂತಿ. ಬಸವತತ್ತ್ವದ ವೈಚಾರಿಕ ಚಿಂತನೆಯಲ್ಲಿ ಅರಳಿದ ಅವರು, ಉಪದೇಶಿಸಿರುವ ಜ್ಞಾನ ಸಂದೇಶಗಳನ್ನು ಅವಲೋಕನ ಮಾಡಿಕೊಳ್ಳುವುದರ ಮೂಲಕ ಅವುಗಳನ್ನು ತನುಮನಗಳಲ್ಲಿ ಕ್ರಿಯಾತ್ಮಕವಾಗಿ ರೂಪಿಸಿಕೊಳ್ಳುವ ಪ್ರಯತ್ನದೊಂದಿಗೆ ಅವರಿಗೆ ಸಲ್ಲಿಸುವ ನಮನ ನಿಜಕ್ಕೂ ಅರ್ಥಪೂರ್ಣ ಎನಿಸುತ್ತದೆ ಎಂದರು. 
ಕಾರ್ಯಕ್ರಮದಲ್ಲಿ ಭೋವಿ ಸಮಾಜದ ಮುಖಂಡರಾದ ಬಸವರಾಜ ರುದ್ರಾಪೂರ, ಶ್ರೀನಿವಾಸ  ಉಣಕಲ್ , ಸುನೀಲ ಮೋರೆ, ಮಂಜು ಕಮ್ಮಾರ, ಮಾಜಿ ಪಾಲಿಕೆ ಸದಸ್ಯ ವೀರನಗೌಡ ಪಾಟೀಲ ಹಾಗೂ ಸ್ಥಳೀಯರ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನವೀನ ಹಳೆಯದು

نموذج الاتصال