ಶಿಕ್ಷಣ ಚಿಂತನ ಶೀಲರಾಗಿ ಮಾಡುತ್ತದೆ - ಡಾ.ರವಿಕುಮಾರ್

ಶಿಕ್ಷಣ ಚಿಂತನ ಶೀಲರಾಗಿ ಮಾಡುತ್ತದೆ - ಡಾ.ರವಿಕುಮಾರ್
ಅಣ್ಣಿಗೇರಿ : 
ವಿದ್ಯಾರ್ಥಿಗಳು ತಮ್ಮ ಪದವಿ ಶಿಕ್ಷಣ ಪಡೆದ ನಂತರ ಉನ್ನತ ಶಿಕ್ಷಣವನ್ನು ಪಡೆಯವದರ ಮೂಲಕ ಉಜ್ಬಲ್ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ದಾವಣಗೆರೆ ವಿಶ್ವವಿದ್ಯಾಲಯದ ಸಹಾಯಕ ಪ್ರಾದ್ಯಾಪಕರು ಡಾ.ರವಿಕುಮಾರ ಕುಂಬಾರ ಹೇಳಿದರು.
ಇವರು ಪಟ್ಟಣದ ಪಟ್ಟಣದ ಶ್ರೀ ಎಮ್.ಬಿ‌.ಹಳ್ಳಿ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ವತಿಯಿಂದ ಹಮ್ಮಿಕೊಂಡ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಂತರ ಮಾತನಾಡಿ ವಿಧ್ಯಾರ್ಥಿಗಳು ನಿರಂತರ ಶಿಕ್ಷಣದ ಕುರಿತು ಚಿಂತನೆ ಮಾಡುವದರ ಜೊತೆಗೆ  ವಿಷಯಗಳ ವಿಮರ್ಶಾತ್ಮಕ  ಗುಣವನ್ನು ಬೆಳೆಸಿಕೊಳ್ಳುವದು ಅವಶ್ಯಕವಾಗಿದೆ.ಕೇವಲ ಪಠ್ಯದ ಪುಸ್ತಕವಷ್ಟೆ ಓದದೇ  ಬೇರೆ ಬೇರೆ ಮೂಲಗಳಿಂದ ಜ್ಞಾನ ಸಂಪಾದಿಸಬೇಕು ಎಂದರು.

ಕಾಲೇಜಿನ ಇಂಗ್ಲೀಷ ವಿಭಾಗದ ಮುಖ್ಯಸ್ಥೆ  ವಿಜಯಲಕ್ಷ್ಮಿ ಪಾಟೀಲ,  ಮಾತನಾಡಿ ವಿಧ್ಯಾರ್ಥಿಗಳು ಇಂಗ್ಲಿಷ್ ಅನ್ನು ಒಂದು ವಿಷಯದ ಬದಲಾಗಿ ಒಂದು ಭಾಷೆ ಎಂದು ಓದಿದಾಗ  ಅದು ಸುಲಭ ಮತ್ತು ಪರಿಣಾಮಕಾರಿಯಾಗಿ  ಕಲಿಯಬಹುದು ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಎಚ್.ಬುಳ್ಳನ್ನವರ,ಸಹಾಯಪ್ರಾಧ್ಯಾಪಕರಾದ  ಡಾ. ಅಣ್ಣಪ್ಪ ರೋಟ್ಟಿಗವಾಡ ,ಕೀರ್ತಿ ಕಳ್ಳೆರ,ಶೋಭಾ ಎನ್,ಭಾರತಿ ಮಣ್ಣೂರ, ಬೋಧಕ ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳು ಇದ್ದರು.
ನವೀನ ಹಳೆಯದು

نموذج الاتصال