ಅತಿಥಿ ಉಪನ್ಯಾಸಕರ ಧರಣಿ--
ಜಯ ಕರ್ನಾಟಕ ಜನಪರ ವೇದಿಕೆ ಬೆಂಬಲ
ನಗರದ ಜಂಟಿ ನಿರ್ದೇಶಕರ ಆವರಣದಲ್ಲಿ ಅತಿಥಿ ಉಪನ್ಯಾಸಕರ ಅನಿರ್ಧಿಷ್ಟ ಧರಣಿ ಹೋರಾಟವು ಮುಂದುವರೆದಿದಕ್ಕೆ ಜಯ ಕರ್ನಾಟಕ ಜನಪರ ವೇದಕೆಯ. ರಾಜ್ಯ ಉಪಾಧ್ಯಕ್ಷರಾದ ಮುತ್ತು ಬೆಳಕ್ಕಿ ನೇತೃತ್ವದಲ್ಲಿ ಬೆಂಬಲ ವ್ಯಕ್ತಪಡಿಸಿದರು.
ಅತಿಥಿ ಉಪನ್ಯಾಕರ ಬೇಡಿಕೆಯಾದ ಖಾಯಮಾತಿಯು ನ್ಯಾಯಯುತ ಬೇಡಕೆಯಾಗಿದೆ, ಖಾಯಂಮಾತಿ ಹೋರಾಟಕ್ಕೆ ಜಯ ಸಿಗುವವರಿಗೆ ನಮ್ಮ ವೇದಿಕೆಯಿಂದ ಸಂಪೂರ್ಣ ಬೆಂಬಲವಿದೆ ಎಂದು ಸೂಚಿಸಿ, ಪ್ರಾದೇಶಿಕ ಜಂಟಿ ನಿರ್ದೇಶಕರಿಗೆ ಉಪನ್ಯಾಸಕರ ಬೇಡಿಕೆಯನ್ನು ಶೀಘ್ರವಾಗಿ ಶೀಘ್ರವಾಗಿ ಈಡೇರಿಸ ಬೇಕೆಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವೇದಿಕೆಯ ಪದಾಧಿಕಾರಿಗಳಾದ ಜಗದೀಶ ಜಾದವ, ಮಲ್ಲಿಕಾರ್ಜುನ ಅಸುಂಡಿ, ಅರ್ಷದ ಪಠಾಣ, ಪ್ರಶಾಂತ ಏಣಗಿ, ಎ,ಬಿ, ಅವ್ವನ್ನವರ, ಅರುಣ ಸುತಾರೆ, ವೀರೇಂದ್ರಸಿಂಗ ಕುಂಮದಾನ, ರಾಜು ಆಲೂರು, ಗುರು ಸುಣಗದ, ಸಂತೋಷ ಇಂಗಳೆ, ಸಂಜಯ ಪಾಟೀಲ, ಜ್ಯೋತಿಬಾ ಪಾಟೀಲ, ಪ್ರಮೋದ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.