ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಡಾ ಶಾಮನೂರ ಶಿವಶಂಕರಪ್ಪನವರ ನಡೆ ಖಂಡನೀಯ- ಆರ್ ಆರ್ ಕುಡವಕ್ಕಲಿಗೇರ.

ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಡಾ ಶಾಮನೂರ ಶಿವಶಂಕರಪ್ಪನವರ  ನಡೆ ಖಂಡನೀಯ- ಆರ್ ಆರ್ ಕುಡವಕ್ಕಲಿಗೇರ. 
ಧಾರವಾಡ 19 : 
24 ನೆಯ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಅಧಿವೇಶನವು 2023 ರ ಡಿಸೆಂಬರ 23-24 ರಂದು ದಾವಣಗೆರೆ ನಗರದಲ್ಲಿ ಏರ್ಪಡಿಸಿ ಸಮಸ್ತ ವೀರಶೈವ ಲಿಂಗಾಯತ ಸಮಾಜವನ್ನು ಎಚ್ಚರಿಸಿ ಅಭಿವೃದ್ಧಿಯತ್ತ ಕರೆದೊಯ್ಯುವ ತಮ್ಮ ಪ್ರಯತ್ನಕ್ಕೆ ಅಭಿನಂದನೆಗಳು ಎಂದು ಶ್ರೀ ಲಿಂಗರಾಜ ವಿವಿದೋದ್ದೇಶ ಸಂಸ್ಥೆಯ ಧಾರವಾಡದ ಅಧ್ಯಕ್ಷ  ಆರ್ ಆರ್ ಕುಡವಕ್ಕಲಿಗೇರ ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು
1904 ರಲ್ಲಿ ಪೂಜ್ಯ ಹಾನಗಲ್ ಕುಮಾರಸ್ವಾಮಿಗಳವರ ಮಾರ್ಗದರ್ಶನದಲ್ಲಿ ತ್ಯಾಗವೀರ ಸಿರಸಂಗಿ ಶ್ರೀಲಿಂಗರಾಜರ ಮತ್ತು ಅರಟಾಳ ರುದ್ರಗೌಡರು ಮತ್ತು ಸಮಾಜದ ಅನೇಕ ಹಿರಿಯರ ನಿರಂತರ ಪ್ರಯತ್ನದಿಂದ ಮಹಾಸಭೆ ಸ್ಥಾಪಿತವಾಯಿತು. 1904 ಮೇ ದಿ 13,14, ಮತ್ತು 15 ರಂದು ಧಾರವಾಡದ ಟೌನ್ ಹಾಲ್‌ನಲ್ಲಿ ನಡೆದ ಪ್ರಥಮ ಅಧಿವೇಶನ ಹಾಗೂ 1905 ಜುಲೈ ದಿ 13,14,ಮತ್ತು 15 ರಂದು ಬೆಂಗಳೂರಿನಲ್ಲಿ ನಡೆದ ದ್ವೀತಿಯ ಅಧಿವೇಶನದ ಸರ್ವಾಧ್ಯಕ್ಷರಾಗಿ ಶ್ರೀಲಿಂಗರಾಜರು ಲಿಂಗಾಯತ ಸಮಾಜಕ್ಕೆ ನೀಡಿದ ಅಮೂಲ್ಯವಾದ ಸಂದೇಶಗಳು ಮತ್ತು ಲಿಂಗಾಯತ ಮಹಾಸಭಾದ ಅಭಿವೃದ್ಧಿಗಾಗಿ ಅವರು ನೀಡಿದ ಆರ್ಥಿಕ ನೆರವನ್ನು ಮಹಾಸಭಾ ಮರೆಯಬಾರದು. ಅನೇಕ ಲಿಂಗಾಯತ ಮತ್ತು ವೀರಶೈವ ಮಠಮಾನ್ಯಗಳಿಗೆ, ಕೃಷಿಯ ಅಭಿವೃದ್ಧಿಗಾಗಿ ಅವರ ಕಾಣಿಕೆ ಅದ್ಭುತ. ಅಂತಿಮವಾಗಿ ಶೈಕ್ಷಣಿಕ ಅಭಿವೃದ್ಧಿಯಿಂದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಸಾಧ್ಯವೆಂದು ನಂಬಿ ತಮ್ಮ ಸಂಸ್ಥಾನದ ಸಾವಿರಾರು ಕೋಟಿ ರೂಪಾಯಿಗಳ ಆಸ್ತಿಯನ್ನು ತನ್ನವರಿಗಾಗಿ ಏನನ್ನು ನೀಡದೆ ಸಮಗ್ರ ಲಿಂಗಾಯತ ಸಮಾಜದ ಅಭಿವೃದ್ಧಿಗೆ ತ್ಯಾಗ ಮಾಡಿದ ಮಹಾದಾನಿ ಶ್ರೀಲಿಂಗರಾಜರು ಲಿಂಗಾಯತ ಸಮಾಜಕ್ಕೆ ಪ್ರಾಥಸ್ಮರಣಿಯರು. ದೇಶದ ಪ್ರಪ್ರಥಮ ಮಹಾದಾನಿಗಳೆಂದರೆ ಶ್ರೀಲಿಂಗರಾಜರು ಇಂತಹ ಪ್ರಾಥಸ್ಮರಣೀಯರಾದ ಸಿರಸಂಗಿ ಶ್ರೀ ಲಿಂಗರಾಜರ ಹೆಸರನ್ನು "24 ನೇ ಮಹಾಸಭೆಯ ಅಧಿವೇಶನದಲ್ಲಿ ಅವರ ಹೆಸರನ್ನು ಪ್ರಸ್ತಾಪಿಸದೆ ಇರುವುದು ಲಿಂಗರಾಜರ ಅಭಿಮಾನಿಗಳಿಗೆ ನೋವನ್ನುಂಟು ಮಾಡಿದೆ " 
ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಕಟ್ಟಲು ಪ್ರಮುಖರಾದವರು ಸಾಕಷ್ಟು ಜನ ಇದ್ದರೂ ಸಹಿತ ಅದರಲ್ಲಿ ಸಿರಸಂಗಿ ಶ್ರೀ ಲಿಂಗರಾಜರು ಅಗ್ರಗಣ್ಯರು. ಇಂದಿಗೂ ಅವರ ದಾನದಿಂದ ರಚಿಸಲ್ಪಟ್ಟ ನವಲಗುಂದ – ಸಿರಸಂಗಿ ಟ್ರಸ್ಟ ಬೆಳಗಾಂವ ಇಂದಿಗೂ ಜಿಲ್ಲಾಧಿಕಾರಿಗಳು ಬೆಳಗಾಂವ ಇವರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಲಿಂಗಾಯತ ಬಡ ಮಕ್ಕಳ ಶಿಕ್ಷಣಕ್ಕಾಗಿ ಶಿಷ್ಯವೇತನ ಕೊಡುತ್ತಿದ್ದಾರೆ. ಈಗಾಗಲೇ ಲಕ್ಷಾಂತರ ಲಿಂಗಾಯತ ಬಡ ಮಕ್ಕಳು  ಪಡೆದಿರುತ್ತಾರೆ.
ನವಲಗುಂದ ಸಿರಸಂಗಿ ಟ್ರಸ್ಟನಿಂದ ಅನೇಕರು ಶಿಕ್ಷಣಕ್ಕಾಗಿ ಶಿಷ್ಯವೇತನ ಪಡೆದಿದ್ದು ಅಂತಹ ಮ್ರಮುಖರಲ್ಲಿ  ಬಿ ಡಿ ಜತ್ತಿ,  ರತ್ನಪ್ಪಣ್ಣ ಕುಂಬಾರ,  ಎಸ್ ಆರ್ ಬೊಮ್ಮಾಯಿ, ಡಾ|| ಎಂ ಸಿ ಮೋದಿ, ಹೀರೆಮಲ್ಲೂರು ಈಶ್ವರನ್, ಡಾ|| ಎಂ ಆಯ್ ಸವದತ್ತಿ, ಡಾ|| ಎಂ ಎಸ್ ಸುಂಕಾಪೂರ, ಡಾ|| ಆರ್ ಸಿ ಹಿರೇಮಠ ಹೀಗೆ ಇನ್ನೂ ಅನೇಕ ಪ್ರಮುಖರು ಶ್ರೀಲಿಂಗರಾಜರು ದಾನವಾಗಿ ನೀಡಿದ ನವಲಗುಂದ ಸಿರಸಂಗಿ ಟ್ರಸ್ಟನಿಂದ ಶಿಕ್ಷಣಕ್ಕಾಗಿ ಶಿಷ್ಯವೇತನ ಪಡೆದು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿರುತ್ತಾರೆ.

ತಮ್ಮ ಸಮಸ್ತ ಆಸ್ತಿಯನ್ನು ಲಿಂಗಾಯತ ಸಮಾಜಕ್ಕೆ ದಾನ ನೀಡಿದ ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯನ್ನು ಅಸ್ತಿತ್ವಕ್ಕೆ ತರಲು ತಮ್ಮದೆ ಆದ ಕಾಣಿಕೆ ನೀಡಿದ ಮಹಾನ್ ಪುರುಷರಾದ ತ್ಯಾಗವೀರ ಸಿರಸಂಗಿ ಶ್ರೀ ಲಿಂಗರಾಜರ ಹೆಸರನ್ನು ಡಿಸೆಂಬರ ದಿನಾಂಕ: 23 ಮತ್ತು 24 ರಂದು ದಾವಣಗೆರೆಯಲ್ಲಿ ನಡೆಯುವ 24ನೇ ಅಧಿವೇಶನದಲ್ಲಿ ಅವರ ಹೆಸರನ್ನಾಗಲಿ, ಭಾವ ಚಿತ್ರವನ್ನಾಗಲಿ ಎಲ್ಲಿಯೂ ಪ್ರಸ್ಥಾಪಿಸದೆ ಇರುವದು ವಿಷಾಧನಿಯ. ಕಾರಣ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಅಧಿವೇಶನ ನಡೆಯುತ್ತಿರುವ ಈ ಸಂದರ್ಭದಲ್ಲಿ ತ್ಯಾಗವೀರ ಸಿರಸಂಗಿ ಶ್ರೀಲಿಂಗರಾಜರ ಹೆಸರನ್ನು ಜೊತೆಗೆ ಅವರ ಭಾವಚಿತ್ರವನ್ನು ಪ್ರಮುಖ ವೇದಿಕೆಯಲ್ಲಿ ಪ್ರಚುರ ಪಡಿಸಿ ಗೌರವ ಸೂಚಿಸಬೇಕಾಗಿ ವಿನಂತಿ, ಇದನ್ನು ಕಾಯ೯ರೂಪಕ್ಕೆ ತರದೆಇದ್ದಲ್ಲಿ ನಮ್ಮ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆಯನ್ನು ನೀಡಿದರು.

ಪತ್ರಿಕಾಗೋಷ್ಟಿಯಲ್ಲಿ ಲಿಂಗರಾಜರ ಸಂಸ್ಥೆಯ 
ಕಾರ್ಯದರ್ಶಿಗಳು  ವಾಯ್ ಎಪ್ ಹುಲಗೂರ ,ಶೇಖರ ಹುಬ್ಬಳ್ಳಿ,ಎಮ್ ಸಿ ಹುಲ್ಲೂರ, ಆರ್ ಪಿ. ಹುಲ್ಲುರ  ಎಮ್ ಸಿ ಹುಗ್ಗಿ,ಎಮ್ ಸಿ ರೋಗಿ ಇದ್ದರು
ನವೀನ ಹಳೆಯದು

نموذج الاتصال