23 ರಂದು
ಕೆ.ಇ.ಬೋರ್ಡ ಹೈಸ್ಕೂಲಿನ ಹಳೆಯ ವಿದ್ಯಾರ್ಥಿಗಳ ಸಮಾವೇಶ.
ಧಾರವಾಡ :
ಮಾಳಮಡ್ಡಿಯ ಕೆ.ಇ.ಬೋರ್ಡ ಹೈಸ್ಕೂಲ ಹಳೆಯ ವಿದ್ಯಾರ್ಥಿಗಳ ಸಮಾವೇಶ ಶಾಲೆಯ ಆವರಣದಲ್ಲಿ ಡಿಸೆಂಬರ್ 23, 2023 ರಂದು ಜರುಗಅದ್ದು ಹಳೆಯ ವಿ ವ್ಯಾರ್ಥಿಗಳ ಸಂಘ “ಕೆಬೋಸಾ" (K E Board's Old Students' Association) ಈ ಸಮಾವೇಶವನ್ನು ಸಂಘಟಿಸಿದೆ. ದೇಶದ ವಿವಿಧ ಭಾಗಗಳಲ್ಲಿ ನೆಲೆಸಿರುವ ಹಳೆಯ ವಿದ್ಯಾರ್ಥಿಗಳು ಮತ್ತು ವಿದೇಶಗಳಲ್ಲಿ ಇರುವ ಕೆಲವು ವಿದ್ಯಾರ್ಥಿಗಳು ಈ ಸಮಾವೇಶದಲ್ಲಿ ಭಾಗವಹಿಸಿ ತಮ್ಮ ಹಳೆಯ ದಿನಗಳನ್ನು ಸ್ಕಲಸಿಕೊಳ್ಳಲಿದ್ದಾರೆ. ಎಂದು
ಕೆ.ಇ. ಬೋರ್ಡ್ ಸಂಸ್ಥೆ ಕಾರ್ಯಾಧ್ಯಕ್ಷ ಶ್ರೀಕಾಂತ್ ಪಾಟೀಲ ತಿಳಸಿದರು .
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು
ಮುಂಜಾನೆಯಿಂದ ಸಾಯಂಕಾಲದವರೆಗೆ ನಡೆಯಲಿರುವ ಸಮಾವೇಶದಲ್ಲಿ ಶಾಲೆಯ ಪರಿಮಾಣಾತ್ಮಕ ಮತ್ತು ಗುಣಾತ್ಮಕ ಅಭಿವೃದ್ಧಿಗಾಲ ಸಂಘ ಮಾಡಬೇಕಾದ ಕೆಲಸ ಕಾರ್ಯಗಳ ಬಗ್ಗೆ ಚರ್ಚೆ, ಮನರಂಜನೆ, ತಮಗೆ ಕಲಿಸಿದ ಶಿಕ್ಷಕರ ಸನ್ಯಾನ ಮತ್ತು ಪರಸ್ಪರ ಸಮಾಲೋಚನೆ ನಡೆಯಲಿವೆ ಎಂದರು .
ಕೆ.ಇ.ಬೋರ್ಡ ಹೈಸ್ಕೂಲಿನ ಹಳೆಯ ವಿದ್ಯಾರ್ಥಿಗಳ ಸಂಘ ಅಕ್ಟೋಬರ 2, 1955 ರಂದು ಅಸ್ತಿತ್ವಕ್ಕೆ ಬಂದಿತು. ಆಗ ಶಾಲೆಯ ಮುಖ್ಯಾಧ್ಯಾಪಕರಾಗಿದ್ದ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಎಸ್.ಜಿ. ನಾಡಗೀರ ಶಾಲೆಯ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಹಳೆಯ ವಿದ್ಯಾರ್ಥಿಗಳ ಪಾಲುಗಾಲಕೆ ಅತೀ ಅವಶ್ಯ ಎಂಬುದನ್ನು ಮನಗಂಡು ಈ ಸಂಘವನ್ನು ಹುಟ್ಟು ಹಾಕಿದರು. ಶಾಲೆ ಹಾಗೂ ವಿದ್ಯಾರ್ಥಿಗಳ ನಡುವೆ ಭಾವನಾತ್ಮಕ ಸಂಬಂಧ ನಿರಂತರವಾಗಿ ಇರಬೇಕು. ಇದಲಂದ ಇಬ್ಬರಿಗೂ ಅನುಕೂಲ ಎಂಬ ದೂರದರ್ಶಿತ್ವ ನಾಡಗೀರ ಅವರನ್ನು ಸಂಘದ ಸ್ಥಾಪನೆಗೆ ಪ್ರೇರೇಪಿಸಿತು. ಮೊದಲನೇ ವರ್ಷ ಸಂಘಕ್ಕೆ ಸಂಗ್ರಹವಾದ ದೇಣಿಗೆ ಮೊತ್ತ ರೂ. 450=00 ಎಂಬುದನ್ನು ಹಿರಿಯರು ನೆನೆಪಿಸಿಕೊಳ್ಳುತ್ತಾರೆ. ಅಂದಿನಿಂದ ಇಂದಿನವರೆಗೆ ಸಂಘ ಗಾತ್ರ ಮತ್ತು ಗುಣಮಟ್ಟದಲ್ಲಿ ಬೆಳೆದು ಶಾಲೆಗೆ ವಿವಿಧ ರೀತಿಯಲ್ಲಿ ಅಪೂರ್ವ ಸೇವೆ ಸಲ್ಲಿಸುತ್ತಿದೆ.
ಕೆ.ಇ.ಬೋರ್ಡ ಶಾಲೆಯಲ್ಲಿ ಶಿಕ್ಷಣ ಪಡೆದು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಅನೇಕ ಹಳೆಯ ವಿದ್ಯಾರ್ಥಿಗಳು ಶಾಲೆಗೆ ವಿವಿಧರೀಯಲ್ಲಿ ನೆರವಾಗುತ್ತಿದ್ದಾರೆ.
- 1938 ರಲ್ಲಿ ಕರ್ನಾಟಕ ಎಜ್ಯುಕೇಶನ್ ಬೋರ್ಡಿನ ಅಂಗ ಸಂಸ್ಥೆಯಾದ ಮಾಳಮಡ್ಡಿಯಲ್ಲಿ ಸ್ಥಾಪನೆಯಾದ ಕೆ.ಇ.ಬೋರ್ಡ ಹೈಸ್ಕೂಲಿನ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಎಸ್. ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರತಿ ವರ್ಷ ಅನೇಕ ಯ್ರಾಂಕಗಳನ್ನು ಪಡೆಯುತ್ತ ಶಾಲೆಗೆ ರ್ಯಾಂಕುಗಳ ಬ್ಯಾಂಕ್ " ಎಂಬ ಖ್ಯಾತಿಯನ್ನು ತಂದುಕೊಟ್ಟಿದ್ದಾರೆ. 86 ವರ್ಷಗಳ ಕಾಲ ವಿದ್ಯಾರ್ಥಿಗಳಗೆ ಶಿಕ್ಷಣ, ಸಂಸ್ಕಾರ ನೀಡುತ್ತ ಅವರನ್ನು ಸುಸಂಸ್ಕೃತ ನಾಗರಿಕರನ್ನಾಗಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಶಾಲೆ ತನ್ನ ಆದರ್ಶ ಸೇವೆಯನ್ನು ಮುಂದುವರೆಸಿದೆ.
ಈ ಶಾಲೆಯಲ್ಲಿ ಶಿಕ್ಷಣ ಪಡೆದು ದೇಶ-ವಿದೇಶಗಳಲ್ಲಿ ಖ್ಯಾತಿ ಹೊಂದಿರುವ ಹಳೆಯ ವಿದ್ಯಾರ್ಥಿಗಳ ಪಟ್ಟ ದೊಡ್ಡದು. ಪ್ರಮುಖ ಹೆಸರುಗಳೆಂದರೆ ಕೇರಳ ಹೈಕೋರ್ಟಿನ ಮಾಜಿ ಮುಖ್ಯ ನ್ಯಾಯಾಧೀಶ ನ್ಯಾ.ಮೂ. ವ್ಹಿ ಎಸ್. ಮಳೀಮಠ, ಅಂತರಾಷ್ಟ್ರೀಯ ಖ್ಯಾತಿಯ ಬಾಹ್ಯಾಕಾಶ ವಿಜ್ಞಾನಿ ಡಾ. ರಂಗನಾಥ ನವಲಗುಂದ, ಲೆ.ಜ. (ನಿ) ಎಸ್. ಸಿ. ಸರದೇಶಪಾಂಡೆ, ಖ್ಯಾತ ಗ್ರಂಥಾಲಯ ವಿಜ್ಞಾನಿ ಪ್ರೊ. ಕೆ.ಎಸ್. ದೇಶಪಾಂಡೆ ಕೇಂದ್ರ ಹಣಕಾಸು ಮಂತ್ರಾಲಯಕ್ಕೆ ಸಲಹೆಗಾರರಾಗಿದ್ದ ಡಾ. ವಾದಿರಾಜ ಪಂಚಮುಖಿ, ಖ್ಯಾತ ನ್ಯಾನೋ ವಿಜ್ಞಾನಿ ಡಾ. ಕಟೇಶ ಕಟ್ಟಿ, ಎಚ್. ಎ. ಎಲ್ ಮಾಜಿ
ಸಿ.ಎಂ.ಡಿ. ಮೋಹನ ನಾಡಗೀರ, ಇಸ್ರೋದ ಉಪನಿರ್ದೇಶಕ ಡಾ. ಆರ್. ಏ. ನಾಡಗೌಡ, ಖ್ಯಾತ ವಿಜ್ಞಾನಿ ಡಾ. ಎಸ್. ಎಂ. ಶಿವಪ್ರಸಾದ, ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ, ಕರ್ನಾಟಕ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಪ್ರಮೋದ ಗಾಯಿ, ಕರ್ನಾಟಕ ಹೈಕೋರ್ಟ ನ್ಯಾ.ಮೂ. ನಾಗಪ್ರಸನ್, ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ ವಲಷ್ಠ, ಪದ್ಮಶ್ರೀ ಪುರಸ್ಕೃತ ರಾಮಕೃಷ್ಣ ಹೊಸೂರ, ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಸಂರಕ್ಷಕರಾದ ರಮೇಶ ಕಲಘಟಗಿ (ಆಂಧ್ರಪ್ರದೇಶ), ಡಾ. ಗಿರಿಧರ ಕಿನ್ನಾಳ (ಮಧ್ಯಪ್ರದೇಶ), ಸಧ್ಯ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕರಾದ ಅರವಿಂದ ಬೆಲ್ಲದ, ನರಗುಂದ ಶಾಸಕರಾದ ಸಿ.ಸಿ. ಪಾಟೀಲ, ಈಗ ಧಾರವಾಡ ಜಿಲ್ಲಾಧಿಕಾಲಯಾಗಿರುವ ಐ.ಎ.ಎಸ್ ಅಧಿಕಾರಿ ಗುರುದತ್ ಹೆಗಡೆ, ಐ.ಪಿ.ಎಸ್ ಅಧಿಕಾರಿ ವಿಕ್ರಾಂತ ಪಾಟೀಲ, ಐ.ಆರ್.ಎಸ್. ಅಧಿಕಾಲ ದ್ಯಾಮಪ್ಪ ಐರಣಿ, ಬ್ರಿಗೇಡಿಯರ್(ನಿ) ಸುಧೀಂದ್ರ ಇಟ್ನಾಳ, ಎಲಕ್ಸನ್ ಗ್ರುಪ್ ಚೇರಮನ್ ಅರುಣ ಬಳ್ಳಾರಿ, ಪಾಲಿಮರ ವಿಜ್ಞಾನಿ ಡಾ. ಪದ್ಮಾಕರ ಕುಲಕರ್ಣಿ, ರಣಜಿ ಕ್ರಿಕೆಟ ಪಟುಗಳಾದ ಆನಂದ ಕಣ್ವ ಮತ್ತು ಸೋಮಶೇಖರ ಶಿರಗುಪ್ಪಿ ಈ ಶಾಲೆಯ ಹಳೆಯ ವಿದ್ಯಾರ್ಥಿಗಳು ಎಂಬುದು ಹೆಮ್ಮೆಯ ಸಂಗತಿ. ಇಂತಹ ಸಾಧಕರ ಪಟ್ಟಿ ಬೆಳೆಯುತ್ತಲೇ ಇದೆ.
ಕೆಬೋಸಾ ತನ್ನ ಕಾರ್ಯಜಾಲವನ್ನು ವಿಸ್ತರಿಸಿಕೊಂಡು ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸುವದರ ಜೊತೆಗೆ ಅನುಕೂಲ ಸ್ಥಿತಿಯಲ್ಲಿರುವ ಹಳೆಯ ವಿದ್ಯಾರ್ಥಿಗಳು ತೊಂದರೆಯಲ್ಲಿರುವ ಇತರ ಹಳೆಯ ವಿದ್ಯಾರ್ಥಿಗಳಿಗೆ ನೆರವಾಗಲು ಒಂದು ವೇದಿಕೆಯನ್ನು ಒದಗಿಸುತ್ತಿದೆ. ಉದ್ಯಮಪತಿಗಳಾಗಿರುವ ಅನೇಕ ಹಳೆಯ ವಿದ್ಯಾರ್ಥಿಗಳು ಉದ್ಯೋಗದ ಅವಶ್ಯಕತೆ ಇರುವ ಇತರ ಹಳೆಯ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಒದಗಿಸಲು ಈ ವೇದಿಕೆಯ ಮೂಲಕ ಸಾಧ್ಯವಾಗುತ್ತದೆ.
ಇದಲ್ಲದೇ ಕೆಬೋಸಾ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುಸ್ತಕ, ಅಭ್ಯಾಸ ಸಾಮಗ್ರಿ, ಶಿಷ್ಯವೇತನ ಇತ್ಯಾದಿಗಳನ್ನು ಪ್ರತಿ ವರ್ಷ ನೀಡುವ ಮೂಲಕ ಪ್ರೋತ್ಸಾಹಿಸುತ್ತಿದೆ. 2012 ರಲ್ಲಿ ಶಾಲೆಯ ಅಮೃತ ಮಹೋತ್ಸವ ಆಚರಣೆಯ ಸಂದರ್ಭದಲ್ಲಿ ಒಂದು ವರ್ಗದ ಕೋಣೆಯನ್ನು ಸ್ಮಾಟ ೯ ರೂಂ ಆಗಿ ಅಭಿವೃದ್ಧಿ ಪಡಿಸಿದೆ.
ಈಗ ಅರುಣ ಬಳ್ಳಾರಿ ಕೆಬೋಸಾ ಅಧ್ಯಕ್ಷರಾಗಿದ್ದು ಉಪಾಧ್ಯಕ್ಷರಾಗಿ ಡಾ. ವಿಜಯವಿಠಲ ಮನಗೋಳಿ, ಪ್ರೊ. ರಾಘವೇಂದ್ರ ಗುತ್ತಲ ಮತ್ತು ಕಾರ್ಯದರ್ಶಿಯಾಗಿ ಡಾ. ಕೃಷ್ಣ ಕುಲಕರ್ಣಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು .
ಪತ್ರಿಕಾಗೋಷ್ಟಿಯಲ್ಲಿ
ಡಿ ಎಸ್ ರಾಜಪುರೋಹಿತ,ಅರುಣ ಬಳ್ಳಾರಿ,ಡಾ ಕ್ರಿಷ್ಣಾ ಕುಲಕರ್ಣಿ, ಹಷ೯ ಡಂಬಳ,ಗೋವಿಂದ ರೆಡ್ಡಿ ಇದ್ದರು.