ಧೀಮಂತರಿಗೆ ಗೌರವ ಸನ್ಮಾನ/ ಡಾ.ಲಿಂಗರಾಜ ಅಗಡಿ ಕರೆ *ಮಹಿಳೆಯರು ಸಾಹಿತ್ಯಕ್ಕೆ ಕೊಡುಗೆ ನೀಡಲಿ*
ಧಾರವಾಡ: ಮಹಿಳೆಯರು ನಾಲ್ಕು ಗೋಡೆಗಳಿಂದ ಹೊರಬಂದು, ತಮ್ಮ ಬಿಡುವಿನ ವೇಳೆ ಸಾಹಿತ್ಯ ಚಟವಟಿಕೆಯಲ್ಲಿ ತೊಡಗಿಕೊಂಡು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಲಿಂಗರಾಜ ಅಂಗಡಿ ಕರೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ ಧಾರವಾಡ ತಾಲೂಕು ಘಟಕ ನಗರದ ಜಿಲ್ಲಾ ಕಸಾಪ ಭವನದಲ್ಲಿ ಶನಿವಾರ ಸಾಪ್ತಾಹಿಕ ಸಾಹಿತ್ಯ ಮಾಲಿಕೆಯಡಿ ಹಮ್ಮಿಕೊಂಡ ಡಾ.ದ.ರಾ.ಬೇಂದ್ರೆ ಬದುಕು-ಬರಹ ಉಪನ್ಯಾಸ ಹಾಗೂ ಕನ್ನಡ ಧೀಮಂತ ಪ್ರಶಸ್ತಿ ಪುರಸ್ಕೃತರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ತೊಟ್ಟಿಲು ತೂಗುವ ಕೈ ಜಗತ್ತು ತೂಗಬಲ್ಲದು ಎಂಬುದನ್ನು ಅನೇಕರು ಸಾಭೀತು ಮಾಡಿದ್ದು ಸ್ಮರಣೀಯ. ಹಾಗೆಯೇ ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡವ ಆಸಕ್ತ ಹೊಂದಿರುವ ಮಹಿಳೆಯರಿಗೆ ಕಸಾಪ ಅಗತ್ಯ ಸಹಾಯ-ಸಹಕಾರ ನೀಡಲಿದೆ. ಹೀಗಾಗಿ ಮಹಿಳೆಯರು ತಮ್ಮ ಆಯುಷ್ಯದ ಕೆಲವು ಸಮಯ ಸಾಹಿತ್ಯಕ್ಕೆ ಮೀಸಲಿಡಬೇಕು ಎಂದು ತಿಳಿಸಿದರು.
ಡಾ.ಬೇಂದ್ರೆ ಬದುಕು-ಬರಹ ಬಗ್ಗೆ ಉಪನ್ಯಾಸ ನೀಡಿದ ಸುಧಾ ಕಬ್ಬೂರ, ನವೋದಯ ಕಾಲದ ಪ್ರಸಿದ್ಧ ಕವಿಗಳಲ್ಲಿ ಒಬ್ಬರಾದ ಡಾ.ಬೇಂದ್ರೆ ಕನ್ನಡಕ್ಕೆ ಜ್ಞಾನಪೀಠ ತಂದುಕೊಟ್ಟ ಮೇರು ವ್ಯಕ್ತಿತ್ವದ ವ್ಯಕ್ತಿಗಳು ಎಂದು ಬಣ್ಣಿಸಿದರು.
ಶಿರಹಟ್ಟಿಯಲ್ಲಿ ಜನಿಸಿದ ಬೇಂದ್ರೆ ತಮ್ಮ ತಾಯಿ ಹಾಗೂ ಅಜ್ಜಿಯ ಬಗ್ಗೆ ಅಪಾರ ಪ್ರೀತಿ ಹಾಗೂ ಗೌರವ ಹೊಂದಿದ್ದರು. ಪುಣೆ-ಸೊಲ್ಲಾಪುರದಲ್ಲಿ ಉಪನ್ಯಾಸ ವೃತ್ತಿ ಜತೆ ಜಯ ಕರ್ನಾಟಕ ಪತ್ರಿಕೆ ಸಂಪಾದಕರಾಗಿಯೂ ಕೆಲಸ ಮಾಡಿದ ಬೇಂದ್ರೆ ಅವರು, ಅನೇಕ ಕಾವ್ಯ, ಕಥೆ, ನಾಟಕ ರಚಿಸಿ, ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಧೀಮಂತ ವ್ಯಕ್ತಿ ಎಂದು ಹೇಳಿದರು.
ಪತ್ರಕರ್ತ ಜಾವೇದ ಅಧೋನಿ ಮಾತನಾಡಿ, ಧೀಮಂತ ಪ್ರಶಸ್ತಿ ನನಗೆ ಆಶ್ಚರ್ಯ ತಂದಿದೆ. ಈ ಪ್ರಶಸ್ತಿ ನೀಡಿರುವ ಹು-ಧಾ ಮಹಾನಗರ ಪಾಲಿಕೆ ಧನ್ಯವಾದ. ಕಸಾಪ ಗೌರವ ಖುಷಿ ತಂದಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಹು-ಧಾ ಮಹಾನಗರ ಪಾಲಿಕೆ ಕನ್ನಡ ಧೀಮಂತ ಪ್ರಶಸ್ತಿ ಪುರಸ್ಕೃತರಾದ ಪತ್ರಕರ್ತ ಜಾವೇದ ಅಧೋನಿ, ಕಸಾಪ ಗೌರವ ಕಾರ್ಯದರ್ಶಿ ಪ್ರೊ. ಕೆಎಸ್.ಕೌಜಲಗಿ, ಪ್ರಸಾಧನ ಕಲಾವಿದ ಸಂತೋಷ ಮಹಾಲೆ, ದಿವ್ಯಾಂಗ ಕ್ರೀಡಾಪಟು ಕೇಶವ ಟಿ ಪ್ರಭಾಕರ ಅವರಿಗೆ ಸನ್ಮಾಸಿ, ಗೌರವಿಸಲಾಯಿತು.
ಕಸಾಪ ಧಾರವಾಡ ತಾಲೂಕಾಧ್ಯಕ್ಷ ಮಹಾಂತೇಶ ನರೇಗಲ್ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾ ಕೋಶಾಧ್ಯಕ್ಷ ಎಸ್.ಎಸ್.ದೊಡಮನಿ, ತಾಲೂಕು ಗೌರವ ಕಾರ್ಯದರ್ಶಿ ಮಾರ್ತಂಡಪ್ಪ ಕತ್ತಿ, ಜೆ.ಪಿ.ದೊಡಮನಿ ಇದ್ದರು.
ವಕೀಲೆ ಸುವರ್ಣಾ ಸುರಕೋಡ ಪ್ರಾರ್ಥಿಸಿದರು. ನಿವೃತ್ತ ಶಿಕ್ಷಕಿ ಸುನಂದಾ ಸ್ವಾಗತಿಸಿದರು.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ:9945564891