ಅಲಗಿಲವಾಡ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
ಗದಗ : ಶಿರಹಟ್ಟಿ ತಾಲೂಕಿನ ಅಲಗಿಲವಾಡ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಆಚರಿಸಲಾಯಿತು ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಿ ೫೦ ವರ್ಷವಾದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯಾದ್ಯಂತ ಕರ್ನಾಟಕ ಸಂಭ್ರಮ ೫೦ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಅಭಿಯಾನದಡಿಯಲ್ಲಿ ವರ್ಷವಿಡಿ ವಿಶಿಷ್ಟ ರೀತಿಯ ಕಾರ್ಯಕ್ರಮಗಳನ್ನು ಆಚರಿಸಲು ಸರಕಾರ ಆದೇಶದಂತೆ ಹಾಗೂ ಗದಗ ಜಿಲ್ಲೆಯ ಉಪನಿರ್ಧೇಶಕರಾದ ಎಂ ಎ ರಡ್ಡೇರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ ಎಂ ಮುಂದಿನಮನಿ ಇವರ ನಿರ್ಧೇಶನದಂತೆ ಆಚರಿಸಲಾಗುತ್ತಿದೆ .ಕನ್ನಡ ನಾಡು ನುಡಿ ಬಿಂಬಿಸುವ ಹೆಸರಾಂತ ಕನ್ನಡ ಕವಿಗಳ ಹಾಡುಗಳನ್ನು ಹಾಡುವದರ ಮೂಲಕ ಶಾಲೆಯಲ್ಲಿ ನುಡಿ ನಮನ ಸಲ್ಲಿಸಲಾಯಿತು ಇದೆ ಸಂದರ್ಭದಲ್ಲಿ
ಅಲಗಿಲವಾಡ ಶಾಲೆಯ ಪ್ರಧಾನ ಗುರುಗಳಾದ ಹಾಲೇಶ ಜಕ್ಕಲಿ ಮಾತನಾಡಿ ಕನ್ನಡದ
ಕುಲಪುರೋಹಿತರಾದ ಆಲೂರ ವೆಂಕಟರಾಯರು ೧೯೦೫ ರಲ್ಲಿ ಕರ್ನಾಟಕ ಏಕೀಕರಣ ಚಳುವಳಿಯನ್ನು ಪ್ರಾರಂಭಿಸಿದರು ಭಾರತವು ೧೯೫೦ ರಲ್ಲಿ ಗಣರಾಜ್ಯವಾದ ನಂತರ ಭಾರತದ ವಿವಿಧ ಪ್ರಾಂತ್ಯಗಳು ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರೂಪುಗೊಂಡವು ಕನ್ನಡ ಮಾತನಾಡುವ ಮದ್ರಾಸ , ಮುಂಬಯಿ , ಹೈದರಾಬಾದ , ಪ್ರಾಂತ್ಯಗಳು ಸೇರಿ ೧೯೫೬ ನವೆಂಬರ್ ೧ ರಂದು ಮೈಸೂರು ರಾಜ್ಯ ಉದಯವಾಯಿತು .ನಂತರ ೧೯೭೩ ನವಂಬರ ೧ ರಂದು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು . ಐವತ್ತು ವರ್ಷದ ಸವಿ ನೆನಪಿಗಾಗಿ ಸುವರ್ಣ ಮಹೋತ್ಸವ ಕಾರ್ಯಕ್ರಮ ರಾಜ್ಯಾದ್ಯಂತ ಆಯೋಜಿಸಲಾಗಿದೆ ಈ ಸಂಭ್ರಮ ಸಡಗರದಲ್ಲಿ ನಾವೆಲ್ಲರೂ ಕೂಡ ಭಾಗಿಯಾಗೋಣ ಎಂದರು .
ಹೆಬ್ಬಾಳ ಸಿ ಆರ್ ಪಿ ತಿರಕಪ್ಪ ಪೂಜಾರ ಮಾತನಾಡಿ ೪೩ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಎಂದು ನಾಮಕರಣ ಮಾಡಲು ಒಮ್ಮತದ ತಿರ್ಮಾನ ಕೈಗೊಂಡು ಸರಕಾರಕ್ಕೆ ಮನವಿ ಸಲ್ಲಿಸಿದ್ದು ನಮ್ಮ ಗದಗ ಜಿಲ್ಲೆಯಿಂದಲೆ ಎನ್ನುವದು ನಮಗೊಂದು ಹೆಮ್ಮೆಯಾಗಿದೆ ಈ ಹಿನ್ನೆಲೆಯಲ್ಲಿ ಗದಗ ಜಿಲ್ಲಾಡಳಿತ ಅದ್ಧೂರಿಯಾಗಿ ಕರ್ನಾಟಕ ಸಂಭ್ರಮ ೫೦ ಗದಗದಲ್ಲಿ ಆಚರಿಸಲಾಗುತ್ತಿದೆ ಎಂದರು .
ಈ ಕಾರ್ಯಕ್ರಮದಲ್ಲ ವಡವಿ ಗ್ರಾಮ ಪಂಚಾಯತಿ ಸದಸ್ಯರಾದ ಅಲಗಿಲವಾಡ ಗ್ರಾಮದ ಪ್ರೇಮಯ್ಯ ಬಾಳಿಹಳ್ಳಿಮಠ , ಹೆಬ್ಬಾಳ ಸಿ ಆರ್ ಪಿ ತಿರಕಪ್ಪ ಪೂಜಾರ , ಪ್ರಧಾನ ಗುರುಗಳಾದ ಹಾಲೇಶ ಜಕ್ಕಲಿ , ಗುರುಮಾತೆಯರಾದ ಜಿ ಎಚ್ ರಡ್ಡೇರ , ಗ್ರಾಮದ ಹಿರಿಯರಾದ ಖಾದರಸಾಬ ದೊಡ್ಡಮನಿ , ಬಸಮ್ಮ ಹಸವಿಮಠ ಒಳಗೊಂಡಂತೆ ಗ್ರಾಮದ ಗುರುಹಿರಿಯರು ಮಕ್ಕಳು ಭಾಗವಹಿಸಿ ಈ ಕಾರ್ಯಕ್ರಮ ಯಶಸ್ವಿಗೊಳಿಸಿದರು .