ನವಂಬರ್ 1 ರಂದು ದೆಹಲಿ ಚಲೋ
ಹುಬ್ಬಳ್ಳಿ : ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಎ ಐ ಕೆ ಕೆ ಎಂ ಎಸ್ ವತಿಯಿಂದ ಹುಬ್ಬಳ್ಳಿಯ ಎಪಿಎಂಸಿ ಯಲ್ಲಿ ನವಂಬರ್ 1 ರಂದು ದೆಹಲಿ ಚಲೋ ಅಂಗವಾಗಿ ಪ್ರಚಾರ ಕಾರ್ಯ ನಡೆಯಿತು. ರೈತರ ಉತ್ಪನ್ನಗಳನ್ನು ಸರ್ಕಾರವೇ ಖರೀದಿಸಿ, ಸರ್ಕಾರವೇ ಮಾರಾಟ ಮಾಡಬೇಕು, ವಿದ್ಯುತ್ ಕಾಯ್ದೆ 2022 ತಿದ್ದುಪಡಿಯನ್ನು ವಿರೋಧಿಸಿ ಮತ್ತು ರೈತರ ಸಮಸ್ಯೆಗಳನ್ನು ಬಗೆಹರಿಸಲು ಆಗ್ರಹಿಸಿ ಒತ್ತಾಯಿಸಿ ನವಂಬರ್ 1 ರಂದು ದೆಹಲಿಯ ಜಂತರ್ ಮಂತರ್ ನಲ್ಲಿ ರೈತರ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.
ಹತ್ತೊತ್ತಾಯಗಳು
ರೈತರ ಬೆಳೆಗಳಿಗೆ ಸಿ2+ಶೇ,50 ಸೂತ್ರದ ಪ್ರಕಾರ ಉತ್ಪಾದನಾ ವೆಚ್ಚಕ್ಕಿಂತ ಒಂದೂವರೆ ಪಟ್ಟಿನಷ್ಟು ಮೊತ್ತಕ್ಕೆ ಸಮನಾಗಿ ನೀಡಲು ಕನಿಷ್ಟ ಬೆಂಬಲ ಬೆಲೆ ಕಾನೂನನ್ನು ಜಾರಿಗೆ ತರಬೇಕು. ಕೃಷಿ ಮಾರುಕಟ್ಟೆಯಿಂದ ಖಾಸಗಿ ಕಂಪೆನಿಗಳನ್ನು ಹೊರಹಾಕಬೇಕು. ಸರ್ಕಾರವೇ ಎಲ್ಲಾ ಅವಶ್ಯಕ ಕೃಷಿ ಉತ್ಪನ್ನಗಳ ವ್ಯಾಪಾರವನ್ನು ತನ್ನ ವಶಕ್ಕೆ ತೆಗೆದುಕೊಳ್ಳಬೇಕು. ಜೊತೆಗೆ, ಗ್ರಾಮೀಣ ಹಾಗೂ ನಗರದ ಬಡ ಜನತೆಗೆ ಅಗ್ಗದ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಪಡಿತರವನ್ನು ನೀಡಬೇಕು.
ವಿದ್ಯುತ್ ಕಾಯ್ದೆ ತಿದ್ದುಪಡಿ 2022 ಅನ್ನು ವಾಪಸ್ ತೆಗೆದುಕೊಳ್ಳಬೇಕು. ಪ್ರೀಪೆಯ್ಡ್ ಸ್ಟಾರ್ಟ್ ಮೀಟರ್ ಅಳವಡಿಸುವುದನ್ನು ನಿಲ್ಲಿಸಬೇಕು.
ಕಾಂಪೊಸ್ಟ್, ಬೀಜ, ಕೀಟನಾಶಕ, ಕೃಷಿ ಯಂತ್ರಗಳು ಮತ್ತು ಡೀಸೆಲ್ ರೈತರಿಗೆ ಅಗ್ಗವಾಗಿ ಸಿಗಬೇಕು. ಕುಲಾಂತರಿ ಬೀಜವನ್ನು ನಿಷೇಧಿಸಬೇಕು.
ಕೆಲಸ ನೀಡಬೇಕು. ನರೆಗಾ ವೇತನವನ್ನು ರೂ.600 ಕ್ಕೆ ಏರಿಸಬೇಕು. 5. ಅರಣ್ಯ ರಕ್ಷಣಾ ಕಾನೂನಿನ ತಿದ್ದಪಡಿಗಳನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು. ಕಾಡಿನ ನಾಶ ಮತ್ತು ಕಾಡಿನಿಂದ ಆದಿವಾಸಿಗಳನ್ನು ಹಾಗೂ ರೈತರನ್ನು ಒಕ್ಕಬ್ಬಿಸುವುದನ್ನು ನಿಲ್ಲಿಸಬೇಕು.
ಎಲ್ಲಾ ಗ್ರಾಮೀಣ ಬಡವರಿಗೆ ಪ್ರತಿ ತಿಂಗಳು ರೂ.10,000 ಪಿಂಚಣಿ ನೀಡಬೇಕು.
ಗ್ರಾಮೀಣ ಬಡ ಜನರಿಗೆ ವರ್ಷವಿಡೀ
ಪ್ರವಾಹ ಮತ್ತು ಬರ ತಡೆಯಲು, ಜೀವ ಹಾಗೂ ಆಸ್ತಿಪಾಸ್ತಿ ನಷ್ಟಗಳಿಗೆ ಪರಿಹಾರ ನೀಡಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ನೀರಾವರಿ ಮತ್ತು ಕುಡಿಯುವ ನೀರಿಗಾಗಿ ಸರಿಯಾದ ವೈಜ್ಞಾನಿಕ ರಾಷ್ಟ್ರೀಯ ಜಲನೀತಿಯನ್ನು ರೂಪಿಸಬೇಕು.
ಸಣ್ಣ ಹಾಗೂ ಮಧ್ಯಮ ರೈತರ ಎಲ್ಲಾ ಸಾಲಗಳನ್ನು ಮನ್ನಾ ಮಾಡಬೇಕು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ದೀಪಾ ಧಾರವಾಡ, ಜಿಲ್ಲಾ ಕಾರ್ಯದರ್ಶಿ ಶರಣು ಗೋನವಾರ ಮುಂತಾದವರು ಇದ್ದರು.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ:9945564891.