ನವರಾತ್ರಿ ಅಂಗವಾಗಿ ಶ್ರೀ ದುರ್ಗಾದೇವಿ ಮೂರ್ತಿಯ ಮೆರವಣಿಗೆ.
ಧಾರವಾಡ :- ದಸರಾ ನವರಾತ್ರಿ ಉತ್ಸವ ನಿಮಿತ್ಯ ಶ್ರೀ ದುರ್ಗಾದೇವಿ ಮೂರ್ತಿಯ ಮೆರವಣಿಗೆ ಹಾಗೂ ಪ್ರತಿಷ್ಠಾಪನೆ ಕಾರ್ಯಕ್ರಮ ಹೊಸಯಲ್ಲಾಪೂರ ಛಾವಣಿ ಓಣಿಯ ಶ್ರೀ ಮರಗಮ್ಮಾದೇವಿ ದೇವಸ್ಥಾನ ಆವರಣದಲ್ಲಿಂದು ಜರುಗಿತು.
ಶ್ರೀ ದುರ್ಗಾದೇವಿ ಮೂರ್ತಿಯ ಮೆರವಣಿಗೆಯು ಕಲಾತಂಡ ಹಾಗೂ ವಾದ್ಯ ಮೇಳದೊಂದಿಗೆ ಹೆಬ್ಬಳ್ಳಿ ಅಗಸಿಯಿಂದ ಆರಂಭಗೊAಡು ಗಾಂಧಿಚೌಕ, ಕಾಮನಕಟ್ಟಿ ಹಾಗೂ ಹೊಸಯಲ್ಲಾಪೂರ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಛಾವಣಿ ಓಣಿಯ ಶ್ರೀ ಮರಗಮ್ಮಾದೇವಿ ದೇವಸ್ಥಾನ ತಲುಪಿತು. ನಂತರ ವಿಶೇಷ ಪೂಜೆ, ಭಜನೆ, ಪ್ರಾರ್ಥನೆ, ಕೀರ್ತನೆ, ಪ್ರವಚನ ಹಾಗೂ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸುರೇಶ ಚಾಬೂಕಸವಾರ, ಬಸವರಾಜ ಮಟ್ಟಿ, ಲಕ್ಷಣ ಚಾಬೂಕಸವಾರ, ಅಶೋಕ ಮಾನೆ, ಪವನ ಲೋಖಂಡೆ, ರುತಿಕ ಪಾಟೀಲ, ಸುರಂಜನ ಗುಂಡೆ, ಪ್ರತೀಕ ಶಿಂಧೆ, ಅಮೋಘ ಕದಂ, ವೇದಾಂತ ಜಯರಾಮನವರ, ಆದಿತ್ಯ ವಾಲಿಕಾರ, ಧೀರಜ ಮಾನೆ, ಅಶೋಕ ಚಾಬೂಕಸವಾರ, ಕೇದಾರ ಸಾಳುಂಕೆ, ಮನೀಶ ಮಾನೆ, ರಾಹುಲ್ ಚವ್ಹಾಣ ಸೇರಿದಂತೆ ಮಾರುತಿ ಮಂದಿರ ಟ್ರಸ್ಟ ಕಮೀಟಿ, ಹರಿಭಕ್ತ ಸಂತ ಮಂಡಳಿ, ಶ್ರೀ ಛತ್ರಪತಿ ಶಿವಾಜಿ ಯುವಕ ಮಂಡಳ, ಶ್ರೀ ಬಾಲ್ಯ ಮಣಿಕಂಠ ಭಕ್ತವೃಂದ, ಶ್ರೀ ಎಕ್ಕೇರಮ್ಮಾ ಪಂಚ ಕಮೀಟಿ, ಜಾಲಿಮರದ ಕರೆಮ್ಮಾ ಕಮೀಟಿ ಸರ್ವ ಪದಾಧಿಕಾರಿಗಳು, ಭಕ್ತಾಧಿಗಳು ಪಾಲ್ಗೊಂಡಿದ್ದರು.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ:9945564891