ಬಿಗ್ ಮಿಶ್ರಾ “ದವರಿಂದ ಉತ್ತರ ಕರ್ನಾಟಕದಲ್ಲಿನ ಅತಿ ದೊಡ್ಡ ಸಸ್ಯಾಹಾರಿ ಉಪಹಾರ ಗೃಹದ ಲೋಕಾರ್ಪಣೆ .

ಬಿಗ್ ಮಿಶ್ರಾ “ದವರಿಂದ ಉತ್ತರ ಕರ್ನಾಟಕದಲ್ಲಿನ ಅತಿ ದೊಡ್ಡ ಸಸ್ಯಾಹಾರಿ ಉಪಹಾರ ಗೃಹದ ಲೋಕಾರ್ಪಣೆ 23ರಂದು. 

ಧಾರವಾಡ 22 :
ಬಿಗ್ ಮಿಶ್ರಾ “ದವರಿಂದ ಉತ್ತರ ಕರ್ನಾಟಕದಲ್ಲಿನ ಅತಿ ದೊಡ್ಡ ಸಸ್ಯಾಹಾರಿ ಉಪಹಾರ ಗೃಹದ ಲೋಕಾರ್ಪಣೆ 23ರಂದು ಮಾಡಲಾಗುವದು ಎಂದು 
ಬಿಗ್ ಮಿಶ್ರಾ ಪೇಡೆಯ ವ್ಯವಸ್ಥಾಪಕ 
ಶ್ರೀಧರ ಬೋರಕರರವರು ತಿಳಸಿದರು ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು 
ಸಿಹಿ ತಿನಿಸು, ನಮಕೀನ, ಊಟ, ಉಪಹಾರ, ಚಾಟ, ಜ್ಯೂಸ್ ಮತ್ತು ಆಯಿಸ್ ಕ್ರೀಮಗಳನ್ನು ಸವಿಯಲು ಒಟ್ಟಿಗೆ ನಾಲ್ಕು ನೂರಕ್ಕೂ ಹೆಚ್ಚು ಜನರಿಗೆ ಸ್ಥಳಾವಕಾಶ ಇರಲಿದೆ ಎಂದರು.

1933 ರಲ್ಲಿ ಧಾರವಾಡದಲ್ಲಿ ಆರಂಭಗೊಂಡ ಪೇಡಾ ಸಿಹಿ ತಿನಿಸು ತಯಾರಿಸುವ ಮಿಸ್ರಾ ಮನೆತನದ ಉದ್ಯೋಗವು ನಂತರ 1969ರಲ್ಲಿ ಎರಡನೆ ತಲೆಮಾರಿನ ಗಣೇಶ ಅವಧಬಿಹಾರಿ ಮಿಶ್ರಾರವರು ಹುಬ್ಬಳ್ಳಿಯ ಭಂಡಿವಾಡ ಬೇಸ ಹತ್ತಿರ ಆಝಾದ ರಸ್ತೆಯಲ್ಲಿನಲ್ಲಿ ಚಿಕ್ಕ ಅಂಗಡಿಯೊಂದರಲ್ಲಿ ಪೇಢಾ ತಯಾರಿಸಿ ಮಾರಾಟವನ್ನು ಆರಂಭಿಸುವದರೊಂದಿಗೆ ಹುಬ್ಬಳ್ಳಿಗೆ ತಮ್ಮ ವ್ಯವಹಾರ ಸ್ಥಳಾಂತರಗೊಳಿಸಿದರು. ನಂತರ ಕೆಲ ದಿನಗಳಲ್ಲಿ ಹುಬ್ಬಳ್ಳಿ ನಗರದ ಜನತೆಯ ಹೃದಯವನ್ನು ಗೆದ್ದು ಭಂಡಿವಾಡಬೇಸನಲ್ಲಿನ ದೊಡ್ಡ ಅಂಗಡಿಗೆ ಸ್ಥಳಾಂತರಗೊಂಡು 'ಮಿಶ್ರಾ ಪೇಡೆ" ಎನ್ನುವ ಹೆಸರಿನಿಂದ ಜನಪ್ರಿಯಗೊಂಡಿತು ಎಂದರು 
ನಂತರ ವ್ಯಾಪಾರದ ಕಮಾನು ಕೈಗೆತ್ತಿಕೊಂಡ ಮಿಶ್ರಾ ಮನೆತನದ ಮೂರನೆಯ ತಲೇಮಾರಿನ ಸಂಜಯ ಮಿಶ್ರಾರವರು ವ್ಯವಹಾರವನ್ನು ವಿಸ್ತರಿಸುತ್ತ ಗಮನ ಹರಿಸಿ 1996ರಲ್ಲಿ ಧಾರವಾಡ ಹೊರ ವಲಯದ ಕ್ಯಾರಕೊಪ್ಪದಲ್ಲಿ ಪೇಢಾ ಮತ್ತು ನಮಕೀನಗಳನ್ನು ತಯಾರಿಸುವ ಘಟಕವನ್ನು ಸ್ಥಾಪಿಸಿ ಮನೆತನದ ವ್ಯವಹಾರಕ್ಕೆ ಒಂದು ನವೀನ ರೂಪವನ್ನು ಕೊಟ್ಟು ಮಿಶ್ರಾ ಪಡೆಯನ್ನು ಮನೆ ಮಾತನ್ನಾಗಿ ಮಾಡಿದರು. ಪೇಡೆ ಮತ್ತು ನಮಕೀನಗಳ ತಯಾರಿಕೆಯಲ್ಲಿ ಅನೇಕ ಹೊಸ ಪ್ರಯೋಗಗಳಿಗೆ ಒತ್ತು ಕೊಟ್ಟ ಸಂಜಯ ಮಿಶ್ರಾರವರು ಸುಮಾರು ಇನ್ನೂರಕ್ಕೂ ಹೆಚ್ಚು ತರಹದ ಸಿಹಿ ತಿನಿಸು ಮತ್ತು ನಮಕೀನಗಳ ಉತ್ಪಾದನೆಯನ್ನು ಆರಂಬಿಸಿ ಹುಬ್ಬಳ್ಳಿ ಧಾರವಾಡದಿಂದ ಹೊರಗೆ ವ್ಯವಹಾರವನ್ನು ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಗೆ ವಿಸ್ತರಿಸಿದರು.
ಪ್ರಸ್ತುತ ಕ್ಯಾರಕೊಪ್ಪದಲ್ಲಿ 17 ಎಕರೆಗಳ ವಿಸ್ತಾರವಾದ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಉತ್ಪಾದನಾ ಘಟಕದಲ್ಲಿ 1200ಕ್ಕೂ ಹೆಚ್ಚು ಜನರಿಗೆ ನೇರ ಹಾಗೂ ಪರೋಕ್ಷ ಉದ್ಯೋಗಾವಕಾಶವನ್ನು ಕಲ್ಪಿಸಿಲಾಗಿದ್ದು ಭೌಗೋಳಿಕ ಸೂಚಕ ಟ್ಯಾಗನ್ನು ಹೊಂದಿರುವ ಧಾರವಾಡ ಪೇಡೆಯ ಜೊತೆಗೆ ನಮಕೀನ ಬೇಕರಿ ಉತ್ಪನ್ನಗಳನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಿ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಲ್ಲಿ ವ್ಯಾಪಿಸಿರುವ 185 ಮಾರಾಟ ಮಳಿಗೆಗಳ ಮುಖಾಂತರ ಗ್ರಾಹಕರಿಗೆ ತಲುಪಿಸಲಾಗುತ್ತಿದೆ ಎಂದರು .
 ಹುಬ್ಬಳ್ಳಿಯ ಆಝಾದ ರಸ್ತೆಯಲ್ಲಿ ಒಂದು ಚಿಕ್ಕ ಮಳಿಗೆಯಲ್ಲಿ ಆರಂಭಗೊಂಡ ಮಿಶ್ರಾ ಪೇಡೆಯು ಇಂದು ಮೂರು ರಾಜ್ಯಗಳಿಗೆ ವಿಸ್ತಾರಗೊಂಡು 7000ಕ್ಕು ಹೆಚ್ಚು ಜನರಿಗೆ ನೇರ ಪರೋಕ್ಷ ಉದ್ಯೋಗಗಳನ್ನು ಕಲ್ಪಿಸಿರುವ “ಬಿಗ್ ಮಿಶ್ರಾ ಪೇಡೆ" ಆಗಿ ಬೆಳೆದು ನಿಂತಿದೆ.

ಸಿಹಿ ತಿನಿಸು, ನಮಕೀನ ಮತ್ತು ಬೇಕರಿ ಕ್ಷೇತ್ರದಿಂದ ಈಗ 'ಬಿಗ್ ಮಿಶ್ರಾ ಪೇಡೆ'ಯೂ ಉಪಾಹಾರ ಗೃಹವನ್ನು ತನ್ನ 187ನೇ ಮಳಿಗೆಯಾಗಿ ಅರಂಭಿಸಲಿದೆ. ಹುಬ್ಬಳ್ಳಿ ಧಾರವಾಡ ಬೈ ಪಾಸನಲ್ಲಿ ಟೋಲ ಪ್ಲಾಝಾ ಬಳಿ ಯರಿಕೊಪ್ಪದಲ್ಲಿ 7 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ತಲೆ ಎತ್ತಲಿರುವ 'ಬಿಗ್ ಮಿಶ್ರಾ" ದ ಹೊಸ ಮಳಿಗೆಯಲ್ಲಿ ಎಲ್ಲ ಸಿಹಿ ಮತ್ತು ನಮಕೀನ ಉತ್ಪನ್ನಗಳನ್ನು ಮಾರಾಟ ಮಳಿಗೆಯೊಂದಿಗೆ ಬೈ ಪಾಸನಲ್ಲಿ ಸಂಚರಿಸುವ ಪ್ರಯಾಣಿಕರ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಸುಸಜ್ಜಿತ ಮತ್ತು ಶುಚಿಯಾದ ಸಸ್ಯಾಹಾರಿ ಊಟ ಮತ್ತು ಉಪಹಾರ ಗೃಹವನ್ನು ಇದೇ ದಿ 23 ರಂದು ಆರಂಭಿಸಲಾಗುತ್ತಿದೆ. ರುಚಿಯಾದ ದಕ್ಷಿಣ ಭಾರತೀಯ, ಉತ್ತರ ಭಾರತೀಯ ಊಟ ಹಾಗೂ ಉಪಹಾರಗಳ ಜೊತೆ ಈ ಭಾಗದ ವಿಶೇಷ ಜೋಳದ ರೊಟ್ಟಿ ಎಣಗಾಯಿ ಊಟವು ಗ್ರಾಹಕರಿಗೆ ಸಿಗಲಿದೆ. 

ಅಲ್ಲದೇ ಇಲ್ಲಿ “ಬಿಗ್ ಮಿಶ್ರಾ ಪೇಡೆ"ಯನ್ನು ಗ್ರಾಹಕರ ಎದುರಿನಲ್ಲಿಯೇ ತಯಾರಿಸುವ 'ಲೈವ್ ಪೇಡಾ ಸೆಂಟರ ಇರಲಿದ್ದು ಗ್ರಾಹಕರು ತಯಾರಾದ ತಾಜಾ ಪೇಡೆಗಳ ರುಚಿಯನ್ನು ಸವಿಯ ಬಹುದಾಗಿದೆ. ವಿವಿಧ ಬಗೆಯ ಕುಕಿ ಹಾಗೂ ಕೇಕಗಳು ಸಹ ಇಲ್ಲಿ ದೊರೆಯಲಿವೆ. ಇಲ್ಲಿರುವ ಚಾಟ ಸೆಂಟರನಲ್ಲಿ 20 ಕ್ಕೂ ಹೆಚ್ಚು ವಿವಿಧ ಬಗೆಯ ಚಾಟಗಳು, ಜ್ಯೂಸ ಸೆಂಟರನಲ್ಲಿ ತಾಜಾ ಹಣ್ಣಿನ ರಸಗಳು, ಮತ್ತು ಆಯಿಸ ಕ್ರೀಂ ಸೆಂಟರನಲ್ಲಿ ಕುಳ್ಳಿಯಾದಿಯಾಗಿ ವಿವಿಧ ಬಗೆಯ ಆಯಿಸ ಕ್ರೀಂ ಗಳನ್ನು ಸವಿಯಬಹುದಾಗಿದೆ. "ಬಿಗ್ ಮಿಶ್ರಾ" ಯಾವಾಗಲೂ ರುಚಿ ಮತ್ತು ಶುಚಿಗೆ ಆದ್ಯತೆ ನೀಡುತ್ತಿದ್ದು ಇಲ್ಲಿಯೂ ಸಹ ಗ್ರಾಹಕರ ಬೇಡಿಕೆಗಳಿಗೆ ಆದ್ಯತೆಯನ್ನು ನೀಡಿ ಉತ್ತಮ ಸೇವೆಯನ್ನು ಯೋಗ್ಯ ಬೆಲೆಯಲ್ಲಿ ಒದಗಿಸಲಿದೆ ಎಂದು  ತಿಳಿಸಿದರು.
ಪತ್ರಿಕಾ ಗೋಷ್ಟಿಯಲ್ಲಿ ಗಿರಿಧರ ಲಡ್ಡಾ, ವಿಷ್ಣು ಭಾಂಡಗೆ ಮತ್ತು ಯೋಗೇಶ ಜೈನರವರು, ನವೀನ ಪವಾರ ,ಮಹೇಂದ್ರ ಚವ್ಹಾಣ ಉಪಸ್ಥಿತರಿದ್ದರು.

ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ: 9945564891
ನವೀನ ಹಳೆಯದು

نموذج الاتصال