ಶಾಸಕರ ಭ್ರಷ್ಟಾಚಾರ ಹಾಗೂ ಬೇಕಾಬಿಟ್ಟಿ ಟೆಂಡರ್ ವರ್ಕ್ ಆರ್ಡರ್ ಇಲ್ಲದೆ ತಮ್ಮಕಾರಿನಲ್ಲಿ ಗುದ್ದಲಿ ಸಲಿಕೆ ತೆಗೆದುಕೊಂಡು ಬಂದು ಪೂಜೆ ಮಾಡುತ್ತಿದ್ದಾರೆಂದು ಶಾಸಕರಾದ ಅರವಿಂದ್ ಬೆಲ್ಲದ ಪ್ರಶ್ನೆ ಕೇಳಿ ವಿರುದ್ಧ ಆರೂಪ
ಮಾಡಿದ್ದರ ಸಲುವಾಗಿ ಶಾಸಕರು ತಮ್ಮ ವಕೀಲರ ಮೂಲಕ ಸಾರ್ವಜನಿಕವಾಗಿ ತಪ್ಪನ್ನು ಕೇಳಬೇಕು ಎಂದು ಮಾಧ್ಯಮದಲ್ಲಿ ಹೇಳಿದ್ದಾರೆ ಮೊದಲಿಗೆ
ನನಗೆ ಇನ್ನು ಯಾವುದೇ ನೋಟೀಸ್ ಬಂದಿಲ್ಲ ಇನ್ನು ಎಲ್ಲಾ ಆರೋಪಗಳು ಸತ್ಯವಾದದ್ದವು ನಾನು ಯಾವತ್ತು ವಯಕ್ತಿಕವಾಗಿ ಶಾಸಕರ ವಿರೋಧಿ ಅಲ್ಲ. ಸಾರ್ವಜನಿಕ ವಲಯದಲ್ಲಿ ಅರೂಪಗಳು ಸಹಜ ಇನ್ನು 20% ಕಮಿಷನ್ ಕೇಳಿದ ಆರೋಪಕ್ಕೆ ಸಂಬಂಧ ಪಟ್ಟಂತೆ ನಾನು ಸುದ್ದಿಗೋಷ್ಠಿ ಮಾಡಿದ ದಿನ ಶಿವಾಜಿ ನಗರದ ರಸ್ತೆ ಕಾಮಗಾರಿಗೆ ವರ್ಕ್ ಆರ್ಡರ್ ಕೊಟ್ಟಿದ್ದಾರೆ ಅದರಲ್ಲಿ ಫೆಬ್ರವರಿ 15 ದಿನಾಂಕ ಹಾಕಿದ್ದಾರೆ ಆದರೆ ಗುತ್ತಿಗೆದಾರ awork ಆರ್ಡರ್ ನಲ್ಲಿ 6/3/2023 ಎಂದು ರಬ್ಬರ್ ಸ್ಟ್ಯಾಂಪ್ ಇದೆ ಗುತ್ತಿಗೆದಾರ 28/2/23 ರಂದು ಅದಿಕ್ಷಕರಿಗೆ ಕಾರ್ಯನಿರ್ವಾಹಕ ಅಭಿಯಂತರರಿಗೆ ಈ ಬಗ್ಗೆ ಪತ್ರ ಬರೆದಿರುತ್ತಾರೆ ಗುತ್ತಿಗೆದಾರ ನನ್ನ ಜೊತೆ ಮಾಡಿದ ಹಾಗೂ ಶಾಸಕರ ಸಹಾಯಕ ಆಪ್ತ ರ ಮಾಡಿದಆಡಿಯೋ ಸಂಭಾಷಣೆಕೂಡಾ ಇದೆ ಇದಕ್ಕಿಂತ ಸಾಕ್ಷಿ ಬೇಕೇ.
ಶಾಸಕರು ಬೇಕಾಬಿಟ್ಟಿ ವರ್ಕ್ ಆರ್ಡರ್ ಇಲ್ಲದೆ ಗುದ್ದಲಿ ಪೂಜಾ ಮಾಡುತ್ತಿದ್ದಾರೆಂದು ಆರೋಪ ಮಾಡಿದ್ದೆ ಉದಾಹರಣೆಗೆ ಪಶ್ಚಿಮ ಕ್ಷೇತ್ರದ ವಾರ್ಡ್ ನಂ 34 ರಲ್ಲಿ 2013 ರಿಂದ ನನ್ನ ಪತ್ನಿ ದೀಪಾ ಗೌರಿ ಪಾಲಿಕೆಯ ಸದಸ್ಯರಿದ್ದರು ಈಗ ನನ್ನ ತಾಯಿ ಪಾಲಿಕೆಯ ಸದಸ್ಯರಿದ್ದು ಇಲ್ಲಿಯ ಅನೇಕ ಕಾಮಗಾರಿಗಳನ್ನು ಶಾಸಕರು ತಮ್ಮ ಫೇಸ್ಬುಕ್ ಪೇಜ್ನಲ್ಲಿ ದಿನಾಂಕ 4/03/23 ರಂದು ಗುದ್ದಲಿ ಪುಜೆ ಮಾಡಿದ ಬಗ್ಗೆ ತಾವೇ ಹಾಕಿಕೊಂಡಿದ್ದಾರೆ ಆದರೆ ಆ ಕಾಮಗಾರಿಗೆ 10/3/23 ರ ಶುಕ್ರವಾರದ ವರೆಗೂ ವರ್ಕ್ ಆರ್ಡರ್ ಪಡೆದಿಲ್ಲ. ಇನ್ನು ನಾನು ಮಾಡಿದ ಆರೂಪಗಳಾದ ಶಾಸಕರ ಮನೆಮುಂದಿನ ಬಾವಿ, ರಾಯಪುರ ಶೋರೂಮ್ ನಲ್ಲಿ ಹಾದು ಹೋದ ಸಾರ್ವಜನಿಕ ಕುಡಿಯುವ ನೀರಿನ ಪೈಪ್ ಲೈನ್, ಸಾರ್ವಜನಿಕ ರಸ್ತೆ ನಾಪತ್ತೆ, ಉಣಕಲ್ ಶೋರೂಮ್ ನಲ್ಲಿ ಹಾದು ಹೋದ ನಾಲಾ ಅನೇಕ ಆರೋಪ ಗಳು ದಾಖಲೆ ಸಮೇತ ಇವೆ. ಇನ್ನು ನನಗೆ ನೋಟೀಸ್ ಮುಟ್ಟಿದ 7 ದಿನಗಳೂಳಗೆ ಶಾಸಕರಿಗೆ ಬಹಿರಂಗ ಕ್ಷಮೆ ಕೇಳಬೇಕೆಂಬ ವಿಚಾರ ಈ ಹಿಂದೆ ತಪ್ಪೋಪ್ಪಿಕೊಂಡ ವಿಚಾರ ಇನ್ನು ಇತಿಹಾಸ ದಲ್ಲಿದೆ ನಾನೇನು ಸಾವರ್ಕರ್ ಅಲ್ಲಾ ನಾನು ನಾಗರಾಜ ಗೌರಿ ಕ್ಷಮೆ ಕೇಳುವ ಪ್ರಶ್ನೆನೆ ಇಲ್ಲಾ ಇವರು ಕೊವಿಡ್ ಸಂದರ್ಭದಲ್ಲಿ ಆಹಾರ ಕಿಟ್ಟ ವಿತರಿಸುವ ವೇಳೆ, ಪೆಟ್ರೋಲ್ ಡೀಸೆಲ್ 100 ರೂ ದಾಟಿದಾಗ, ನವಲೂರ್ ಬಿ ಆರ್ ಟಿ ಎಸ್ ಬ್ರಿಡ್ಜ್ ಪ್ಯಾನಲ್ ಗಳು ಬೀಳುವಾಗ, ಸಾರ್ವಜನಿಕ ಆಸ್ತಿಕಬಳಿಸಿದ ಬಗ್ಗೆ ಪ್ರಶ್ನೆ ಮಾಡಿದಾಗ ನನ್ನ ಮೇಲೆ ಶಾಸಕರು ಅಧಿಕಾರಿಗಳ ಮೂಲಕ ಕೇಸ್ ದಾಖಲೆ ಮಾಡಿದ್ದಾರೆ ಈಗ ಮಾನಹಾನಿ ಕೇಸ್ ಹಾಕುವುದಾಗಿ ಹೆದರಿಸಿ ನಮ್ಮ ಪ್ರಶ್ನೆ ಹಾಗೂ ಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ ಯಾವುದೇ ಕಾರಣಕ್ಕೆ ಕೇಸ್ಗಳಿಗೆ ಹೆದರುವ ಪ್ರಶ್ನೆ illa.
*ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ*
ಧಾರವಾಡ ವಿದ್ಯಾಕಾಶಿ ಎಂದು ಹೆಸರುವಾಸಿಯಾದ ಕ್ಷೇತ್ರದಿಂದ ಸುಮಾರು 20 ವರ್ಷ ಅವರ ತಂದೆ ಈಗ 10 ವರ್ಷ ಅರವಿಂದ ಬೆಲ್ಲದ ರವರು ಒಂದಾದರು ಯೂನಿವರ್ಸಟಿ ಪ್ರೊಫೆಸರ್ ಸಭೆ ಕರೆದಿಲ್ಲ, ಶಿಕ್ಷಣ ಇಲಾಖೆ, ಆಯುಕ್ತರು, ನಿರ್ದೇಶಕರು, ಉಪಕುಲಪತಿಗಳ, ಕ್ಷೇತ್ರ ಶಿಕ್ಷಣಧಿಕಾರಿಗಳ 10 ವರ್ಷದಿಂದ ಯಾವುದೇ ಸಭೆ ಕರೆದಿಲ್ಲ. ಯೂನಿವರ್ಸಿಟಿಯಲ್ಲಿ ಪ್ರತಿನಿತ್ಯ ವಿದ್ಯಾರ್ಥಿಗಳು, ಉಪನ್ಯಾಸಕ ಅತಿಥಿಗಳು ಪ್ರತಿಭಟನೆ ಮಾಡುತ್ತಿದ್ದಾರೆ ಶಾಸಕರು ಒಮ್ಮೆನು ಗಮನಹರಿಸಿಲ್ಲ. ಪ್ರತ್ಯೆಕ ಧಾರವಾಡ ಪಾಲಿಕೆ ಸಲುವಾಗಿ ಅನೇಕ ಹಿರಿಯರು ಹೋರಾಟ ಮಾಡಿದರು ಒಮ್ಮೆನೂ ವಿಧಾನಸೌದದಲ್ಲಿ ಧ್ವನಿ ಎತ್ತಿಲ್ಲ.
ಯಾವುದೇ ಅಭಿವೃದ್ಧಿ ಮಾಡದೇ ಸುಳ್ಳು ಹೊಲ್ಡಿಂಗ್ ಗಳನ್ನು ಹಾಕಿ ಸಾರ್ವಜನಿಕರ ಕಿವಿಗೆ ಹೂ ಇಡುವ ಕೆಲಸ ಶಾಸಕರು ಮಾಡುತ್ತಿದ್ದಾರೆ ಶೋರೂಮ್ ನಲ್ಲಿ ಕುಳಿತವರನ್ನು ಜನರು ಶಾಸರನ್ನಾಗಿ ಮಾಡಿದ ರಿಣ ತೀರಿಸಲಿಲ್ಲ ಈ ಚುನಾವಣೆಯಲ್ಲಿ ಜನ ಶಾಸಕರಿಗೆ ಬುದ್ದಿ ಕಲೆಸುತ್ತಾರೆ
ಅಧಿಕಾರಿಗಳು, ಗುತ್ತಿಗೆದಾರರು ಹೆದರುವ ಅವಶ್ಯಕತೆ ಇಲ್ಲಾ ಇನ್ನು ಕೆಲವೇ ದಿನಗಳಲ್ಲಿ ಶಾಸಕರ ಅಧಿಕಾರ ಮುಗಿಯುತ್ತದೆ ಯಾರೂ ಎದೇಗುಂಡಬೇಡಿ ನಿಮ್ಮ ಜೊತೆ ನಾವಿದ್ದೇವೆ
ಈ ಸುದ್ದಿಗೋಷ್ಠಿ ಯಲ್ಲಿ, ಮುತ್ತುರಾಜ ಮಾಕಾಡವಾಲೆ, ಚಂದನ್ ಸವದಿ, ಎಸ್ ಎಂ ರೋಣ, ಮಂಜುನಾಥ ಕಟ್ಟಿ, ಐ ಎಂ ಜವಳಿ ಆತ್ಮನಂದ್ ತಳವಾರ್ ಚಿದಾನಂದ್ ಶೀಶನಲ್ಲಿ ಷಣ್ಮುಖ ಬೆಟಗೇರಿ ಬಸವರಾಜ ಮನಗುಂಡಿ ಉಪಸ್ಥಿತರಿದ್ದರು