ಬಸವಾದಿ ಶರಣರು ರಚಿಸಿದ ಅನುಭವ ಮಂಟಪ ಹಾಗೂ ವಚನ ಸಾಹಿತ್ಯ ಈ ನಾಡಿಗೆ ಅಷ್ಟೇ ಅಲ್ಲದೆ ಜಗತ್ತಿಗೆ ಮಾದರಿಯಾಗಿದೆ

  ಬಸವಾದಿ ಶರಣರು ರಚಿಸಿದ ಅನುಭವ ಮಂಟಪ ಹಾಗೂ ವಚನ ಸಾಹಿತ್ಯ ಈ ನಾಡಿಗೆ ಅಷ್ಟೇ ಅಲ್ಲದೆ ಜಗತ್ತಿಗೆ ಮಾದರಿಯಾಗಿದೆ
 ಇದನ್ನು ಮತ್ತಷ್ಟು ಪ್ರಸಾರ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹುಬ್ಬಳ್ಳಿ ಮೂರಸಾವಿರ ಮಠದ ಶ್ರೀ ಗುರುಸಿದ್ದ ರಾಜಯೋಗಿಂದ್ರ ಸ್ವಾಮಿಜಿ ಹೇಳಿದರು.
ಶಹರದ ಸಪ್ತಗಿರಿ ಲೇಔಟದಲ್ಲಿರುವ ಅಲ್ಲಮಪ್ರಭು ನಗರದಲ್ಲಿ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರ ಸ್ಮಾರಕ ಭವನ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು. ೧೨ ನೇ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿ ನಂತರ ಬಸವಾದಿ ಶರಣರು ವಚನಗಳನ್ನು ಸಂರಕ್ಷಣೆ ಮಾಡುವಲ್ಲಿ ತಮ್ಮ ಜೀವನನ್ನೆ ತೆತ್ತರು. ತದ ನಂತರ ಡಾ. ಹಳಕಟ್ಟಿಯವರು ಶರಣರು ಸಂಚರಿಸಿದ ಜಾಗದಲ್ಲಿ ಹೋಗಿ ವಚನಗಳನ್ನು ಕ್ರೋಢಿಕರಿಸುವ ಕೆಲಸ ಮಾಡಿದ್ದರು. ಕಾಲಕ್ರಮೇಣ ವಚನಗಳನ್ನು ಸಂಗ್ರಹಣೆ ಮಾಡುತ್ತಾ ತಮ್ಮ ಜೀವನವನ್ನೆ ಸವೆಸಿ ವಚನ ಗೃಂಥಗಳನ್ನು ಸಿದ್ದಪಡಿಸಿದರು. ಹಗಲಿರುಳು ಶ್ರಮಿಸಿ ಬಡತನದ ಬೇಗೆಯನ್ನು ಅನುಭವಿಸಿದ ಹಳಕಟ್ಟಿಯವರನ್ನು ನಾವು ನಿತ್ಯ ಸ್ಮರಿಸಬೇಕು ಎಂದರು.
ಶಾಸಕ ಅರವಿಂದ ಬೆಲ್ಲದ ಪೂಜೆ ನೆರವೇರಿಸಿ ಮಾತನಾಡಿ, ಡಾ.ಹಳಕಟ್ಟಿಯವರು ವಚನ ಸಾಹಿತ್ಯವನ್ನು ಜನಮನಕ್ಕೆ ತಲುಪಿಸಿದ ಕಾರಣ ಇಂದು ಜಗತ್ತಿಗೆ ಬಸವಣ್ಣನವರ ವಚನ ಹಾಗೂ ಅವರ ಅನುಭವ ಮಂಟಪದ ಮಾಹಿತಿ ಲಭ್ಯವಾಗಿದೆ. ನಮ್ಮ ಯುವಜನರು ಬಸವತತ್ವ ಪ್ರಚಾರ ಮಾಡುವುದರ ಜೊತೆಗೆ ಬಸವಾದಿ ಶರಣರ ಆದರ್ಶಗಳನ್ನು ಬೆಳೆಸಿಕೊಳ್ಳಬೇಕು. ಸ್ಮಾರಕ ಭವನ ನಿರ್ಮಾಣದ ನಂತರ ಮಕ್ಕಳು ಹಾಗೂ ಯುವಜನರನ್ನು ಕರೆಯಿಸಿ ಅವರಿಗೆ ವಚನ ಸಾಹಿತ್ಯ ಹಾಗೂ ಬಸವಾದಿ ಶರಣರ ಸಂದೇಶಗಳನ್ನು ತಿಳಿಸಿಕೊಟ್ಟು ಮತ್ತಷ್ಟು ಹೆಚ್ಚು ಬಸವತತ್ವ ಪ್ರಚಾರ ಮಾಡೋಣ ಎಂದರು.
ಸAಸ್ಥೆಯ ಗೌರವಾಧ್ಯಕ್ಷ ಚಂದ್ರಕಾAತ ಬೆಲ್ಲದ ಮಾತನಾಡಿ, ಬಸವಣ್ಣನವರು ಯಾವುದೇ ಒಂದು ಜಾತಿ, ಮತ, ಪಂಥಕ್ಕೆ ಸೇರಿದವರಲ್ಲ ಅವರು ವಿಶ್ವಜ್ಯೋತಿಯಾದವರು. ಅವರ ಸಾಹಿತ್ಯವನ್ನು ಉಳಿಸಿ ಬೆಳೆಸುತ್ತಿರುವ ಬಸವತತ್ವ ಪ್ರಸಾರ ಸಂಸ್ಥೆಯು ಈ ಮಹತ್ವದ ಕೆಲಸಕ್ಕೆ ಸಿದ್ದವಾಗಿದ್ದು ಎಲ್ಲಾ ಸಮಾಜ ಬಾಂಧವರು ಭವನ ನಿರ್ಮಾಣಕ್ಕೆ ಸಹಕಾರ, ಸಹಾಯ ಮಾಡಬೇಕು ಎಂದರು.
ಸAಸ್ಥೆಯ ಅಧ್ಯಕ್ಷ ಡಾ.ಎಸ್.ಆರ್.ಗುಂಜಾಳ ಅಧ್ಯಕ್ಷತೆವಹಿಸಿ ಮಾತನಾಡಿ, ಹಳಟ್ಟಿಯವರ ಭವನ ನಿರ್ಮಾಣಕ್ಕೆ ಇಂದು ಪೂಜೆ ನೆರವೇರಿಸಿದ್ದು ಇದು ಸಾಧ್ಯವಾದಷ್ಟು ಬೇಗನೆ ಸಿದ್ದಗೊಳ್ಳಬೇಕಿದೆ. ಅದಕ್ಕೆ ಬಸವತತ್ವ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇಣಿಗೆ ನೀಡುವ ಮೂಲಕ ಕೈ ಜೋಡಿಸಬೇಕು. ಭೂಮಿ ಪೂಜೆ ಸಮಾರಂಭದಲ್ಲಿಯೇ ಅನೇಕ ಮಠಾಧೀಶರು, ಸಮಾಜ ಬಾಂಧವರು ೨೫ ಲಕ್ಷಕ್ಕೂ ಅಧಿಕ ವಾಗ್ದಾನ ಮಾಡಿರುವುದು ಸಂತಸದ ಸಂಗತಿ ಎಂದರು.
ತೋAಟದಾರ್ಯ ಸಂಸ್ಥಾನಮಠದ ಶ್ರೀ ಡಾ. ತೋಂಟದ ಸಿದ್ದರಾಮ ಸ್ವಾಮಿಜಿ, ಜಮಖಂಡಿ ಓಲೆಮಠದ ಶ್ರೀ ಡಾ. ಅಭಿನವಕುಮಾರ ಚನ್ನಬಸವ ಸ್ವಾಮಿಜಿ, ಮುರಘಾಮಠದ ಶ್ರೀ ಡಾ. ಮಲ್ಲಿಕಾರ್ಜುನ ಸ್ವಾಮಿಜಿ, ಸಂಶೋಧಕ ಡಾ.ವೀರಣ್ಣ ರಾಜೂರ, ಕಾರ್ಯದರ್ಶಿ ಡಾ. ಸುಲೋಚನಾ ಮಟ್ಟಿ , ರವಿಕುಮಾರ, ನಾಗರಾಜ ಪಟ್ಟಣಶೆಟ್ಟಿ, ಮಾರ್ಕಾಂಡೇಯ ದೊಡಮನಿಇದ್ದರು. ಪ್ರಭಾವತಿ ತಂಡದವರು ವಚನ ಪ್ರಾರ್ಥನೆ ನಡೆಸಿಕೊಟ್ಟರು. ಕೂಡಲಪ್ಪ ಕೊಪ್ಪದ ನಿರೂಪಿಸಿದರು. ಮಹೇಶ ಬೆಲ್ಲದ  ಸ್ವಾಗತಿಸಿದರು. ಶಕುಂತಲಾ ಮನ್ನಂಗಿ ವಂದಿಸಿದರು.

ನವೀನ ಹಳೆಯದು

نموذج الاتصال