ಶ್ರೀ ಧರ್ಮಸ್ಥಳ ಮಂಜುನಾನೇಶ್ವರ ಅಭಿಯಾಂತ್ರಿಕ -- ತಾಂತ್ರಿಕ ಮಹಾವಿದ್ಯಾಲಯ:ಒಳಾಂಗಣ ಕ್ರೀಡಾ ಸಮುಚ್ಚಯ ಉದ್ಘಾಟನೆ ನಾಳೆ

ಶ್ರೀ ಧರ್ಮಸ್ಥಳ ಮಂಜುನಾನೇಶ್ವರ ಅಭಿಯಾಂತ್ರಿಕ -- ತಾಂತ್ರಿಕ ಮಹಾವಿದ್ಯಾಲಯ:ಒಳಾಂಗಣ ಕ್ರೀಡಾ ಸಮುಚ್ಚಯ ಉದ್ಘಾಟನೆ ನಾಳೆ

    ಧಾರವಾಡ 28 : ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ, 'ಅಭಿಯಾಂತ್ರಿಕ ಹಾಗೂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನೂತನವಾಗಿ ನಿರ್ಮಿಸಲಾದ ಒಳಾಂಗಣ ಕ್ರೀಡಾ ಸಮುಚ್ಚಯವನ್ನು ಶ್ರೀ ಡಾ.ಡಿ. ವೀರೇಂದ್ರ ಹಗ್ಗಡೆಯವರ ಅನುಗ್ರಹದಿಂದ ಬರುವ ಮಾರ್ಚ್ 1 ರಂದು ಉದ್ಘಾಟಿಸಲಾಗುವುದು ಎಂದು ಮಹಾವಿದ್ಯಾಲಯದ ಸಾವ೯ಜನಿಕ ಸಂಪಕಾ೯ಧಿಕಾರಿ ಡಾ.ವಿ.ಕೆ.ಪವ೯ತಿ  ತಿಳಿಸಿದರು.
     ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘ (ಅಲ್ಯೂಮಿನ್ಯ ಅಸೋಸಿಯೇಶನ್) ದ ಬೆಂಬಲ ಮತ್ತು ಸಾಯದಿಂದ ಕ್ರೀಡಾ ಸಂಕೀರ್ಣವನ್ನು ನಿರ್ಮಿಸಲಾಗಿದೆ ಎಂದರು.
    ಎಲ್ಲರ ಪ್ರಯತ್ನದಿಂದಾಗಿ, ಅತ್ಯುತ್ತಮ ಒಳಾಂಗಣ ಕ್ರೀಡಾ ಸಂಕೀರ್ಣವು ಈಗ ಸಿದ್ಧವಾಗಿದ್ದು ದಿ.1 ರಂದು ಬೆಳಿಗ್ಗೆ 11-30 ಕ್ಕೆ 
 ಶಾಸಕರಾದ  ಅರವಿಂದ ಬೆಲ್ಲದ ಮತ್ತು  ಅಮೃತ ದೇಸಾಯಿ, ಎಸ್‌ಡಿಎಂಇ ಸೊಸೈಟಿಯ ಉಪಾಧ್ಯಕ್ಷರಾದ ಸುರೇಂದ್ರ ಕುಮಾರ್, ಎಸ್‌ಡಿಎಂ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ನಿರಂಜನ್ ಕುಮಾರ ಮತ್ತು ಇತರ ಗಣ್ಯರ ಉಪಸ್ಥಿತಿಯಲ್ಲಿ ಶ್ರೀ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಲಿದ್ದಾರೆ ಎಂದರು.
   ಮಹಾವಿದ್ಯಾಲಯವು 1000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು 500 ಸಿಬ್ಬಂದಿಯನ್ನು ಹೊಂದಿರುವ ಕ್ಯಾಂಪಸ್ ಆಗಿದ್ದು, ಒಳಾಂಗಣ ಕ್ರೀಡಾ ಸಮುಚ್ಚಯವು ಬಹುದಿನದ ಬೇಡಿಕೆಯನ್ನು ಪೂರೈಸುತ್ತದೆ ಎಂದರು.
   ಒಳಾಂಗಣ ಕ್ರೀಡಾ  ಸೌಲಭ್ಯವು ಸುಮಾರು 15000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ ಮತ್ತು ಟೇಬಲ್ ಟೆನಿಸ್, ಜಿಮ್ಮಾಸ್ಪಿಕ್ಸ್, ಚೆಸ್, ಕೇರಂ, ಕುಸ್ತಿ ಮತ್ತು ಕಬಡ್ಡಿ ಮುಂತಾದ ಕ್ರೀಡೆಗಳ ಜೊತೆಗೆ 4 ಬ್ಯಾಡ್ಮಿಂಟನ್ ಕೋರ್ಟ್, ಒಂದು ಒಳಾಂಗಣ ವಾಲಿಬಾಲ್ / ಬಾಸ್ಕೆಟ್‌ಬಾಲ್ ಕೋರ್ಟ್ ಇವುಗಳಿಗೆ ಸ್ಥಳಾವಕಾಶ ಕಲ್ಪಿಸುತ್ತದೆ, 600 ಕ್ಕೂ ಹೆಚ್ಚು ಪ್ರೇಕ್ಷಕರು ಕುಳಿತುಕೊಳ್ಳಬಹುದಾದ ಪ್ರೇಕ್ಷಕರ ಗ್ಯಾಲರಿ ಹೊಂದಿದೆ ಎಂದರು.
   ಈ: ಸಮುಚ್ಚಯದ ಎಲ್ಲ ಕ್ರೀಡಾ ಕ್ಷೇತ್ರಗಳನ್ನು ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ನಿರ್ಮಿಸಬೇಾಗಿದೆ ಮತ್ತು ರಾಜ್ಯ , ರಾಷ್ಟ್ರೀಯ ಮಟ್ಟದಲ್ಲಿ ಪಂದ್ಯಗಳನ್ನು ಆಯೋಜಿಸಲು ಬಳಸಬಹುದು. ಕ್ರೀಡಾಪಟುಗಳಿಗೆ ಉಪಯುಕ್ತವಾದ ಲಾಕರ್ ಕೊಠಡಿಗಳು, ವಾಶ್ ರೂಮ್ ಸೌಲಭ್ಯಗಳು, ವಿಶಾಲವಾದ ಲಾಬಿ ಮತ್ತು ಕಚೇರಿ ಸ್ಥಳವನ್ನು ಸಹ ಒದಗಿಸಲಾಗಿದೆ ಎಂದರು.
    ಅಂದಾಜು ನಾಲ್ಕು ಕೋಟಿ ರೂ.ಗಳ ಯೋಜನಾ ವೆಚ್ಚವನ್ನು ಹೊಂದಿರುವ ಈ ಯೋಜನೆಗೆ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘವು 1.5 ಕೋಟಿ ರೂ.ಗಳ ಆರ್ಥಿಕ ಕೊಡುಗೆಯನ್ನು ನೀಡಿದೆ.
   ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಡಾ.ಎಸ್.ಜಿ.ಜೋಶಿ,
ಕಾರ್ಯದರ್ಶಿ ಪ್ರೊ. ವಿ.ಕೆ.ಪರ್ವತಿ
 ಹಾಗೂ ಖಜಾಂಚಿ  ಸುನಿಲ್ ಹೊನ್ನುನಗಾರ್‌  ಅವರುಗಳು ಈ ಕ್ರೀಡಾ ಸಮುಚ್ಚಯಕ್ಕೆ ಉದಾರವಾಗಿ ಕೊಡುಗೆ ನೀಡುವಂತೆ ಹಳೆಯ ವಿದ್ಯಾರ್ಥಿಗಳ ಮನವೊಲಿಸಿದ್ದಾರೆ, 1992 ರ ಬ್ಯಾಚಿನ ಹಳೆಯ ವಿದ್ಯಾರ್ಥಿ ಬಿ.ಕೃಷ್ಣ ಮೋಹನ್ ಅವರು ಈ ಯೋಜನೆಗೆ 10 ಲಕ್ಷ ರೂ. ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
       ಪತ್ರಿಕಾಗೋಷ್ಟಿಯಲ್ಲಿ ಪ್ರೋ.ಎಸ್.ಜಿ.ಜೋಶಿ, ಸುನೀಲ್ ರೈ, ಬಿ.ಮಂಜುನಾಥ, ಮಹಾದೇವ ದೊಡ್ಡಮನಿ  ಉಪಸ್ಥಿತರಿದ್ದರು.
ನವೀನ ಹಳೆಯದು

نموذج الاتصال