ಶಿಕ್ಷಣ ಸಕಾರಾತ್ಮಕವಾದಾಗ ಮೌಲ್ಯಗಳು ಗಟ್ಟಿಗೊಳ್ಳಲು ಸಾಧ್ಯ
ಧಾರವಾಡ:-- ಸಮಾಜದಲ್ಲಿ ಉಂಟಾಗುತ್ತಿರುವ ವಿಪ್ಲವಗಳಿಗೆ ಶಿಕ್ಷಣದ ಮೌಲ್ಯಗಳ ಕುಸಿತವೇ ಕಾರಣ ಎಂದು ಲೇಖಕ, ಸಮಾಜ ಚಿಂತಕ ಮತ್ತು ಉಪನ್ಯಾಸಕರಾದ ಡಾ. ಶ್ರೀಧರ ಹೆಗಡೆ ಭದ್ರನ್ ಹೇಳಿದರು.
ಅವರು ತಾಲೂಕು ಬ್ರಾಹ್ಮಣ ಸಭಾ ಏರ್ಪಡಿಸಿದ್ದ ದಿ. ಬಿ. ಟಿ. ಕುಲಕರ್ಣಿ ಅವರ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾಯ೯ಕ್ರಮದಲ್ಲಿ , ಕುಸಿಯುತ್ತಿರುವ ಶಿಕ್ಷಣದ ಮೌಲ್ಯಗಳು " ವಿಷಯದ ಕುರಿತು ಮಾತನಾಡುತ್ತ ಶಿಕ್ಷಣವು ಪಾಲಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತ್ರಿಕೋನಗಳ ವ್ಯವಸ್ಥೆಯಲ್ಲಿದೆ. ಈ ನೆಲೆಗಟ್ಡಿನಲ್ಲಿ ಎಲ್ಲವೂ ಸಕಾರಾತ್ಮಕವಾಗಿದ್ದಾಗ ಮಾತ್ರ ಮೌಲ್ಯಗಳು ಗಟ್ಟಿಗೊಳ್ಳಲು ಸಾಧ್ಯ ಎಂದರು.
ಇದರ ಜೊತೆ ಜೊತೆಗೆ ಸಮಾಜದ ಪಾತ್ರವೂ ಮಹತ್ತರ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಯ ವ್ಯಕ್ತಿತ್ವ ವಿಕಶನ, ಸನ್ನಡತೆ, ತತ್ವ ಸಿದ್ಧಾಂತ, ಏಕಾಗ್ರತೆ ಮತ್ತು ಸಂಸ್ಕಾರ ಗಳು ಶೈಕ್ಷಣಿಕ ಮೌಲ್ಯಗಳು ಅಂತಿಮವಾಗಿ ಫಲಪ್ರದವಾಗುವುದು ಎಂದರು.
ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಿರುವದಕ್ಕೆ ಮೌಲ್ಯ ಗಳ ಕುಸಿತಕ್ಕೆ ಕಾರಣವಾಗುತ್ತಿದೆ ಎಂದು ಹಲವು ಉದಾಹರಣೆಗಳ ಮೂಲಕ ಹಾಗೂ ಸ್ವಾನುಭವದ ಹಿನ್ನೆಲೆಯಲ್ಲಿ ಮನೋಜ್ಞವಾಗಿ ನಿರೂಪಿಸಿದರು.
ದತ್ತಿ ದಾನಿಗಳಾದ ರಮೇಶ್ ಪರ್ವತೀಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ತಮ್ಮ ತಂದೆಯವರ ವ್ಯಕ್ತಿತ್ವವನ್ನು ಪರಿಚಯಿಸಿ, ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಂಗನಾಥ ಕುಲಕರ್ಣ ಮಾತನಾಡಿ; ಶಿಕ್ಷಕರಾಗಿದ್ದ ಡಿ. ಬಿ. ಟಿ. ಕುಲಕರ್ಣಿಯವರನ್ನು ಅರ್ಥಪೂರ್ಣವಾಗಿ ಸ್ಮರಿಸುವ ಕಾರ್ಯವಾಗಿದೆ ಎಂದರು.
ಜೈಶ್ರಿ ಕರಗುದರಿ ಮತ್ತು ಜೈಶ್ರಿ ಆಶ್ರಿತ ಸುಶ್ರಾವ್ಯವಾಗಿ ಪ್ರಾರ್ಥನೆ ಹಾಡಿದರು. ಧಾರವಾಡ ತಾಲೂಕ ಬ್ರಾಹ್ಮಣ ಸಭಾದ ಗೌರವಾದ್ಯಕ್ಷರಾದ ರಾಜು ಪಾಟೀಲ ಕುಲಕರ್ಣಿ ಯವರು ಸ್ವಾಗತಿಸಿದರು. ಶ್ರೀಮತಿ. ವಿದ್ಯಾ ಕದರಮಂಡಲಗಿ ಅತಿಥಿಗಳನ್ನು ಪರಿಚಯಿಸಿದರು. ಅರವಿಂದ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.
ಕೆ ಎಮ್ ಕುಲಕರ್ಣಿ ವಂದಿಸಿದರು.