ಮನಸ್ಸುಗಳು ಮಹಾಲಿಂಗವಾಬೇಕು ವರ್ತನೆಯಲ್ಲಿ ಪರಿವರ್ತನೆಯಾಗಬೇಕು

ಮನಸ್ಸುಗಳು ಮಹಾಲಿಂಗವಾಬೇಕು ವರ್ತನೆಯಲ್ಲಿ ಪರಿವರ್ತನೆಯಾಗಬೇಕು
ಧಾರವಾಡ   :- ಅಂಧಶ್ರದ್ಧಾ, ಮೂಢನಂಬಿಕೆ, ಕಂದಾಚಾರಗಳಿಂದ ಹೊರಬಂದು ಸಕಲ ಮಾನವರ ಸೇವೆ ಜಂಗಮ, ದಾಸೋಹ ತಿಳಿದು ಶರಣರ ಸಂಗ ಹಾಗೂ ಧರ್ಮ ಸ್ತೋತ್ರಗಳಾದ ಬಸವಾದಿ ಶರಣರ ವಚನಗಳ ಅಧ್ಯಯನ ಮಾಡಬೇಕು ಎಂದು ಡಾ.ಗಿರೀಶ ದೇಸೂರ
 ಅಭಿಪ್ರಾಯಪಟ್ಟರು.
ಬಸವಕೇಂದ್ರದ ವಚನ ಭಂಡಾರ ಭವನದಲ್ಲಿ ನಿರಂಜನ ಶರಣ ಹರ್ಡೇಕರ ಮಂಜಪ್ಪನವರ, ಶರಣೆ ಸೋಮೇಶ್ವರಿ ಶಂಕರಪ್ಪ ಚೌಧರಿ ಅವರ ಸ್ಮರಣಾರ್ಥ ಜರುಗಿದ ಅರಿವಿನ ಅಂಗಳ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜಕ್ಕೆ ಉತ್ತಮ ಮಾರ್ಗರ್ದಶನ ಮಾಡುತ್ತಾರೋ ಯಾರು ಸತ್ಕಾರ್ಯ ಮಾಡುತ್ತಾರೋ ಅವರನ್ನು ಮಹಾತ್ಮರೆಂದು ಕರೆಯುತ್ತೇವೆ. ಎಲ್ಲಿಯವರೆಗೆ ದೇವರು -ಧರ್ಮ ಎಂಬುದು ಮನುಷ್ಯನಿಗೆ ಅರ್ಥವಾಗುದಿಲ್ಲವೋ ಅಲ್ಲಿಯವರೆಗೆ ಕಲ್ಯಾಣ ರಾಜ್ಯ ನಿರ್ಮಾಣವಾಗುವುದಿಲ್ಲ ಇದು ಜನರಲ್ಲಿ ಜಾಗೃತಗೊಳ್ಳಬೇಕು. ಮನಸ್ಸುಗಳು ಮಹಾಲಿಂಗವಾಬೇಕು ವರ್ತನೆಯಲ್ಲಿ ಪರಿವರ್ತನೆಯಾಗಬೇಕು ಇದುವೆ ಧರ್ಮ ಎಂದು ತಿಳಿಸಿದವರು ನಿರಂಜನ ಶರಣ ಹರ್ಡೇಕರ ಮಂಜಪ್ಪನವರು ಎಂದರು.
ರಂಗಕರ್ಮಿ ಮಹಾದೇವ ಹಡಪದ ಮಾತನಾಡಿ, ಮಾನವರ ಮಧ್ಯೆ ಸಮಾನತೆ ತರುವ ಮಹತ್ತರ ಉದ್ದೇಶದಿಂದ ಅಹಿಂಸಾ ಮಾರ್ಗದ ಮೂಲಕ ವಿಶ್ವದಲ್ಲಿ ಆರಂಭವಾದ ಮೊದಲ ಸಮತಾ ಚಳುವಳಿ ಎಂಬ ಕೀರ್ತಿ ವಚನ ಚಳುವಳಿಗೆ ಲಭಿಸಿದೆ. ಇಂಥಹ ವಚನಗಳ ಹಾಗೂ ಬಸವಾದಿ ಶರಣರ ಸಂದೇಶವನ್ನು ಜಗತ್ತಿಗೆ ಮುಟ್ಟಿಸುವ ಕೆಲಸಕ್ಕೆ ಬಸವ ಬಳ್ಳಿಗಳ ಸಾಂಸ್ಕೃತಿಕ ವೇದಿಕೆಯು ನಾಟಕ, ಚಲನಚಿತ್ರ ಸಿದ್ದ ಮಾಡುತ್ತಿದೆ ಎಂದರು.
ಬಸವ ಕೇಂದ್ರ ಅಧ್ಯಕ್ಷ ಸಿದ್ದರಾಮಣ್ಣ ನಡಕಟ್ಟಿ ಅಧ್ಯಕ್ಷತೆವಹಿಸಿ ಮಾತನಾಡಿ, ಮಾನವೀಯ ಮೌಲ್ಯದೊಂದಿಗೆ ಮೃದುವಚನವೇ ಸಕಲ ಜಪ ತಪಂಗಳು, ಸದ್ವಿನಯವೇ ಸದಾಶಿವನೊಲುಮೆಯ ವಿಚಾರಧಾರೆಗಳನ್ನು ಕೊಟ್ಟ ಅನೇಕ ಶರಣರ, ಸಂತರ,
 ಮಹಾತ್ಮರನ್ನು ನೆನೆದು ಅವರ ಸ್ಮರಣೋತ್ಸವ ಸಂಭ್ರಮಾಚರಣೆ ಮಾಡಲು ಬಸವಕೇಂದ್ರ ಸದಾ ಸಿದ್ದವಾಗಿದೆ ಎಂದರು.
ಮಲ್ಲಿಕಾರ್ಜು ಚೌಧರಿ, ಎಂ.ಆರ್.ಶರಣ್ಣನವರ, ರಾಜು ಡಮ್ಮಳ್ಳಿ, ಶಕುಂತಲಾ ಮನ್ನಂಗಿ, ಉಮೇಶ ಕಟಗಿ, ರವಿಕುಮಾರ ಕಗ್ಗಣ್ಣವರ ಉಪಸ್ಥಿತರಿದ್ದರು. ಬಸವಂತ ತೋಟದ ಸ್ವಾಗತಿಸಿದರು. ಡಾ.ಮಲ್ಲಿಕಾರ್ಜುನ ಬಾಗೇವಾಡಿ ನಿರೂಪಿಸಿದರು. ಅರುಣ ಮೋಡಿ ವಂದಿಸಿದರು.
ನಂತರ ಡಾ.ಗಿರೀಶ ದೇಸೂರ ಹಾಗೂ ಮಹಾದೇವ ಹಡಪದ ಅವರನ್ನು ಸನ್ಮಾನಿಸಿತು.
ಸ್ಮರಣೋತ್ಸವ  ಕಾರ್ಯಕ್ರಮ ನಾಳೆ ಲಿಂಗಾಯತ ಭವನದಲ್ಲಿ.     ಧಾರವಾಡ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ) ಧಾರವಾಡ ಜಿಲ್ಲಾ ಘಟಕದ ಕಾರ್ಯನಿರ್ವಾಹಕ ಸಮಿತಿ ಸದಸ್ಯರು, ಮಹಿಳಾ ಘಟಕ, ಯುವ ಘಟಕ ಹಾಗೂ ಎಲ್ಲ ತಾಲೂಕ ಘಟಕ ಹಾಗೂ ಸಮಾಜದ ಮುಖಂಡರುಗಳು ಸೇರಿ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಸಿದ್ದಗಂಗಾಮಠ, ತುಮಕೂರ ಹಾಗೂ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಜ್ಞಾನಯೋಗಾಶ್ರಮ ವಿಜಯಪುರ ಪೂಜ್ಯರುಗಳು ಸ್ಮರಣೋತ್ಸವ ಕಾರ್ಯಕ್ರಮವನ್ನು ದಿ ೦೧ ರ ಬುಧವಾರ ಮುಂಜಾನೆ ೧೧:೦೦ ಗಂಟೆಗೆ, “ಲಿಂಗಾಯತ ಭವನ” ಚನ್ನಬಸವೇಶ್ವರ ನಗರ ಧಾರವಾಡದಲ್ಲಿ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಸುತ್ತೂರುಮಠ ಮೈಸೂರು ಇವರು ವಹಿಸುವರು, ಸಾನಿಧ್ಯವನ್ನು ಪೂಜ್ಯ ಶ್ರೀ ಜಗದ್ಗುರು ಶ್ರೀ ಗುರುಸಿದ್ದ ರಾಜಯೋಗೇಂದ್ರ ಮಹಾಸ್ವಾಮಿಗಳು, ಮೂರುಸಾವಿರಮಠ ಹುಬ್ಬಳ್ಳಿ, ಪೂಜ್ಯ ಶ್ರೀ ಡಾ, ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮುರುಘಾಮಠ ಧಾರವಾಡ ಹಾಗೂ ಪೂಜ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಅಧ್ಯ ಜ್ಞಾನಯೋಗಾಶ್ರಮ ವಿಜಯಪುರ ಇವರು ವಹಿಸುವರು. ಅಥಿತಿಗಳಾಗಿ ಡಾ, ವೀರಣ್ಣ ರಾಜೂರ ಹಿರಿಯ ಸಾಹಿತಿಗಳು ಹಾಗೂ ಡಾ,
 ಪಿ.ಎಸ್.ಹಳಿಯಾಳ ನಿವೃತ್ತ ಪ್ರಾಧ್ಯಾಪಕರು ಕ.ವಿ.ವಿ ಧಾರವಾಡ ಇವರು ಆಗಮಿಸುವರು ಅಧ್ಯಕ್ಷತೆಯನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷರಾದ  ಗುರುರಾಜ ಹುಣಶಿಮರದ ವಹಿಸುವರು. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಭಾಂದವರು ಆಗಮಿಸಿ ಉಭಯ ಗುರುಗಳ ಕೃಪಾಶೀರ್ವಾದಕ್ಕೆ ಪಾತ್ರರಾಗಲು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶಿವಶರಣ ಕಲಬಶೆಟ್ಟರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ನವೀನ ಹಳೆಯದು

نموذج الاتصال