ಜಾನಪದ ಜಾತ್ರೆಗೆ ಚಾಲನೆ ನೀಡಿದ ದೀಪಕ್ ಚಿಂಚೂರೆ

ಜಾನಪದ ಜಾತ್ರೆಗೆ ಚಾಲನೆ ನೀಡಿದ ದೀಪಕ್ ಚಿಂಚೂರೆ  ಧಾರವಾಡ  :  
ಶ್ರೀ ಮುರುಗಾ ಮಠದಲ್ಲಿ ಶಿವ ಯೋಗೇಶ್ವರ ಜಾನಪದ ಕಲಾಸಂಘದ ವತಿಯಿಂದ ಜಾನಪದ ಜಾತ್ರೆಯನ್ನು  ದೀಪಕ್ ಚಿಂಚರೆ ಅವರು ಉದ್ಘಾಟಿಸಿ ಮಾತನಾಡಿದ ಅವರು  ಜಾನಪದ ಇದನ್ನು ಯಾವ ಶಾಲೆಯಲ್ಲಿ ಕಲಿಸುವುದಿಲ್ಲ ಹಿಂದಿನ  ತಲೆಮಾರಿನಿಂದ  ಮುಂದಿನ ತೆಲೆಮಾರಿಗೆ ಮೌಖಿಕವಾಗಿ   ಬರುವುದೇ ಜಾನಪದ, ಮನುಷ್ಯನ ತಪ್ಪುಗಳನ್ನು ತಿದ್ದಿ ಸರಿಯಾದ ಜೀವನವನ್ನು ನಡೆಸಲು ಮಾರ್ಗದರ್ಶನ ನೀಡುವುದೇ ಜಾನಪದ ಸಾಹಿತ್ಯ,  ಇವತ್ತಿನ ಯುವ ಪೀಳಿಗೆ ಜಾನಪದ ಹಾಡು ಕಲಿಯಲು  ಉತ್ಸಾಹ ತೋರಬೇಕು, ಹಿರಿಯ  ಕಲಾವಿದರು ತಮಗೆ ಬರುವ ಎಲ್ಲ ಕಲೆಯನ್ನು ಯುವ ಪೀಳಿಗೆಗೆ ಧಾರೆಯರಿಯಬೇಕು, ಸರ್ಕಾರವು ನೂರಾರು ಕೋಟಿ ಹಣ ಕಲೆಯನ್ನು ಉಳಿಸಲು ಖರ್ಚು ಮಾಡುತ್ತಿದೆ ಆದರೂ ಸಹ ಕಲಾವಿದರು ಇನ್ನೂ ಆರ್ಥಿಕವಾಗಿ ಪ್ರಗತಿ ಸಾಧಿಸುತ್ತಿಲ್ಲ ಎಂದರು, ಸರ್ಕಾರವು ಕಲಾವಿದರಿಗೆ ಕನಿಷ್ಠ 5000 ಮಾಶಾಸನ ನೀಡಬೇಕೆಂದು ನನ್ನ ಆಗ್ರಹ ,ಮುಂದಿನ ದಿನಮಾನಗಳಲ್ಲಿ  ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ  ಬಂದದ್ದೆ ಆದರೆ ನಾನೇ ನಿಂತು ಕಲಾವಿದರಿಗೆ 5000 ಮಾಶಾಸನ ಜಾನಪದ ಕಲಾವಿದರೆಲ್ಲರಿಗೂ ಸರ್ಕಾರದ ವತಿಯಿಂದ ಮನೆ ನಿರ್ಮಾಣ ಮಾಡಲು ಸರಕಾರವನ್ನು ಒತ್ತಾಯಿಸಿ ಕೆಲಸವನ್ನು ಮಾಡಿಸಿ ಕೊಡುಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ,  ಜನರು ಸಹ ಕಲಾವಿದರಿಗೆ ತಮ್ಮ ಕೈಲೇ ಆದಷ್ಟು ಮಟ್ಟಿಗೆ ಸಹಾಯ ಸಹಕಾರ ನೀಡಿ ಪ್ರೋತ್ಸಾಹ ನೀಡಿ ಎಂದರು, ಕಲಾವಿದ ಕಲೆ ಸಂಗೀತ ಸಂಸ್ಕೃತಿ ನಿಸರ್ಗ ಹೀಗೆ ದೇವರು ಒಂದಕ್ಕೊಂದು ಸಂಬಂಧವಿದೆ ಹಿಂದಿನ ಕಾಲದಲ್ಲಿ ಮಳೆಯನ್ನು ಸಂಗೀತ ಹಾಡಿ ಹರಿಸಿದ್ದಾರೆ ನೃತ್ಯ ಮಾಡಿ ಬರಿಸಿದ್ದಾರೆ ಅಂದರೆ ಭಗವಂತನಿಗೂ ಪ್ರಿಯವಾದದ್ದು ಸಂಗೀತ ಕಲೆ, ಆದ್ದರಿಂದ ಎಲ್ಲರೂ ಇದನ್ನು ಉಳಿಸಿ ಬೆಳೆಸೋಣ ಎಂದು  ದೀಪಕ್ ಚಿಂಚೋರೆ ಅವರು ತಮ್ಮ ಮನದಾಳದ ಮಾತನ್ನು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಸತೀಶ್ ತುರುಮರಿ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಹಿಂದೂಸ್ತಾನಿ ಗಾಯಕಿ  ಶ್ರೀಮತಿ ಸುಪ್ರಿಯ ಭಟ್ , ಭಾಗವಹಿಸಿದ್ದರು.  ಕಾರ್ಯಕ್ರಮ ನಿರೂಪಿಣೆ ಫಕೀರಪ್ಪ ನಡುವಿನಮನಿ,  ಸಿಂದೋಗಿಯವರು ವಂದಿಸಿದರು, ಕಾರ್ಯಕ್ರಮದಲ್ಲಿ ನೂರಾರು ಕಲಾವಿದರು ಶ್ರೀಮಠದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
STAR 74 NEWS YOUTUBE CHANNEL DO SUBSCRIBE
ನವೀನ ಹಳೆಯದು

نموذج الاتصال