ಯೋಗೀಶಗೌಡ ಕೊಲೆ ಕೇಸ್ : ವಿನಯ ಕುಲಕರ್ಣಿಗೆ 3 ಗಂಟೆ ಹುಬ್ಬಳ್ಳಿ ಭೇಟಿಗೆ ಅನುಮತಿ ನೀಡಿದ ಕೋರ್ಟ್
ಧಾರವಾಡ:-- ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಪಂ ಸದಸ್ಯ ಹಾಗೂ ಬಿಜೆಪಿ ಮುಖಂಡ ಯೋಗೀಶಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿನಯ ಕುಲಕರ್ಣಿಗೆ 3 ಗಂಟೆ ಹುಬ್ಬಳ್ಳಿ ಭೇಟಿಗೆ ಷರತ್ತುಬದ್ಧ ಅನುಮತಿ ನೀಡಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ.
ಸಹೋದರ ಸಂಬಂಧಿ ವಿಜಯ್ ಲಕ್ಷ್ಮೀ ಪಾಟೀಲ್ ಅನಾರೋಗ್ಯ ಹಿನ್ನೆಲೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ಭೇಟಿ ನೀಡುವ ಸಲುವಾಗಿ ವಿನಯ್ ಕುಲಕರ್ಣಿ ಕೋರ್ಟ್ ಗೆ ಮನವಿ ಸಲ್ಲಿಸಿದರು.ಇನ್ನು ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್ ಆಸ್ಪತ್ರೆ ಭೇಟಿ ಬಿಟ್ಟು ಬೇರೆ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸದಂತೆ ಸೂಚನೆ ನೀಡಿದೆ .
ಇನ್ನು ಮೂರು ದಿನ ಅನುಮತಿ ಕೋರಿದ್ದ ಕುಲಕರ್ಣಿಗೆ ಕೋರ್ಟ್ ಮೂರು ಗಂಟೆಗಳ ಕಾಲ ಮಾತ್ರ ಅವಕಾಶ ನೀಡಿದೆ.
STAR 74 NEWS YouTube CHANNAL DO SUBSCRIBE