ಕೂಡಲ ಸಂಗಮದ ಶರಣ ಮೇಳ, ಪ್ರಚಾರಾರ್ಥ ಸಭೆ
ಧಾರವಾಡ- ಸಿಖ್ಖ ಧರ್ಮಿಯರಿಗೆ ಅಮೃತಸರ, ಬೌದ್ಧರಿಗೆ ಬುದ್ದಗಯಾ, ಮುಸಲ್ಮಾನರಿಗೆ ಮೆಕ್ಕಾ, ಲಿಂಗಾಯತ ಧರ್ಮಿಯರಿಗೆ ವಿಶ್ವಗುರು ಬಸವಣ್ಣನವರ ಐಕ್ಯಕ್ಷೇತ್ರ ಕೂಡಲ ಸಂಗಮವು ಪವಿತ್ರ ಸ್ಥಳವಾಗಿದೆ. ಪ್ರತಿಯೊಬ್ಬ ಬಸವಧರ್ಮ ಅನುಯಾಯಿ ತನ್ನ ಜೀವಮಾನದಲ್ಲಿ ಒಮ್ಮೆಯಾದರೂ ಕೂಡಲ ಸಂಗಮದಲ್ಲಿ ನಡೆಯುವ ಶರಣ ಮೇಳದಲ್ಲಿ ಪಾಲ್ಗೊಳ್ಳಲೇಬೇಕು ಎಂದು ಬಸವ ಧರ್ಮ ಪೀಠಾಧ್ಯಕ್ಷರಾದ ಶ್ರೀ ಮಾತೆ ಗಂಗಾದೇವಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ವಿಶ್ವಧರ್ಮ ಪ್ರವಚನ ವೇದಿಕೆಯಲ್ಲಿ ೩೬ ನೇ ಶರಣ ಮೇಳದ ಪ್ರಚಾರಾರ್ಥ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಬಸವಣ್ಣನು ಪಾದವಿಟ್ಟುದು ಅವಿಮುಕ್ತ ಕ್ಷೇತ್ರ ಎಂದು ಜಗನ್ಮಾತೆ ಅಕ್ಕಮಹಾದೇವಿ ನುಡಿದ ಪ್ರಕಾರ ಕೂಡಲ ಸಂಗಮವು ತಪೋಸ್ಥಾನ ಐಕ್ಯಕ್ಷೇತ್ರವಾಗಿ ಕಂಗೊಳಿಸುತ್ತಿದೆ. ತನ್ನ ಧಾರ್ಮಿಕ ಅನುಯಾಯಿತ್ವವನ್ನು ಸ್ವೀಕರಿಸದೆ ಇರುವವರು ಪ್ರಾಮಾಣಿಕ ಲಿಂಗಾಯತನಾಗಲ್ಲ ವರ್ಷಕ್ಕೊಮ್ಮೆಯಾದರೂ ಬಸವಧರ್ಮಿ, ಲಿಂಗಾಯತರು ಕೂಡಲ ಸಂಗಮಕ್ಕೆ ಬಂದು ಗಣಲಿಂಗ ದರ್ಶನವನ್ನು ಮಾಡಬೇಕು ಎಂದು ಹೇಳಿದರು.
ಶ್ರೀ ಲಿಂಗಾನAದ ಸ್ವಾಮಿಜಿ ಅವರು ರಾಜ್ಯ ಅಂತರಾಜ್ಯದ್ಯAತ ಸಂಚರಿಸಿ ಬಸವಧರ್ಮ ಪ್ರವಚನ ಮಾಡಿ ಜನರಿಗೆ ವಚನಗಳ ಸಂದೇಶ ನೀಡಿದ್ದಾರೆ. ಬಸವಧರ್ಮ ಪೀಠದಿಂದ ನಡೆಯುವ ಶರಣ ಮೇಳ ಕಾರ್ಯಕ್ರಮ ಮೂಲಕ ಬಸವಣ್ಣನವರ ಹಾಗೂ ಶರಣರ ಸಂದೇಶವನ್ನು ಜನಮನಕ್ಕೆ ತಲುಪಿಸುವ ಕೆಲಸ ಮಾಡುತ್ತಿದೆ. ಈ ಬಾರಿ ನಡೆಯುವ ಶರಣ ಮೇಳದಲ್ಲಿ ಸಾಮೂಹಿಕ ಪ್ರಾರ್ಥನೆ, ಲಿಂಗಪೂಜೆ, ಗಣಲಿಂಗ ದರ್ಶನ, ಧರ್ಮಚಿಂತನ ಗೋಷ್ಠಿ, ಧಾರ್ಮಿಕ ರಸ್ಪçಶ್ನೆ, ಪಥಸಂಚಲನ, ಉಪನ್ಯಾಸ ಸಮಾರಂಭಗಳು ಜರುಗಲಿವೆ. ಭಾಗವಹಿಸುವ ಬಸವಭಕ್ತರಿಗೆ ವಸತಿ, ಊಟದ ವ್ಯವಸ್ಥೆ ಮಾಡಲಾಗಿದೆ ತಾವೆಲ್ಲರೂ ತಪ್ಪದೆ ಬರಬೇಕೆಂದರು.
ಬನಶಂಕರಿ ಭವನದ ಅಧ್ಯಕ್ಷ ಶಿವಾನಂದ ಲೋಲೆನವರ ಬಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿ. ಶರಣ ಮೇಳವು ಒಂದು ಜಾತಿಗೆ ಸೀಮಿತವಾಗಿಲ್ಲ ಅದು ಎಲ್ಲ ಧರ್ಮದವರನ್ನು ಒಳಗೊಂಡ ಬಸವ ಧರ್ಮದ ಜಾಗತಿಕ ಉತ್ಸವವಾಗಿದೆ, ಇದು ವರ್ಷದಿಂದ ವರ್ಷಕ್ಕೆ ವಿಸ್ತಾರಗೊಳ್ಳುತ್ತಿದ್ದು ಇದರಲ್ಲಿ ಬಸವ ಭಕ್ತರಷ್ಟೇ ಅಲ್ಲದೆ ಸರ್ವ ಜನಾಂಗದವರು ಪಾಲ್ಗೋಳ್ಳುವುದು ಅವಶ್ಯಕ ಎಂದರು. ಶ್ರೀ ಬಸವರತ್ನ ಮಾತಾಜಿ. ಶ್ರೀ ಅನಿಮಿಷಾನಂದ ಸ್ವಾಮಿಜಿ. ರವಿಕುಮಾರ ಕಗ್ಗಣ್ಣವರ.
ಎನ್ ವಿ ಮೆಣಸಿನಕಾಯಿ. ಎಂ ವಿ ಕುಸುಗಲ್ .
ಎಸ್ ಎಲ್ ಎಮ್ಮಿ. ಮಂಜುನಾಥ ಅಂಗಡಿ .ಬಸವಂತ ತೋಟದ. ಇದ್ದರು
ಕೆ ಎಸ್ ಕೋರಿಶೆಟ್ಟರ ನಿರೂಪಿಸಿ ಸ್ವಾಗತಿಸಿದರು.
ಸಮಾರಂಭದಲ್ಲಿ ಶರಣ ಮೇಳದ ಬಿತ್ತಿಪತ್ರ ಬಿಡುಗಡೆ ಮಾಡಲಾಯಿತು.
STAR 74 NEWS CHANNEL DO SUBSCRIBE