ಎನ್.ಪಿ.ಎಸ್ ವಿರೋಧಿಸಿ; ಒಪಿಎಸ್ ಬೆಂಬಲಿಸಿ ಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲ: ಮಾಜಿ ಸಭಾಪತಿ ಹೊರಟ್ಟಿ ಚಾಲನೆ

ಎನ್.ಪಿ.ಎಸ್ ವಿರೋಧಿಸಿ; ಒಪಿಎಸ್ ಬೆಂಬಲಿಸಿ   ಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲ: ಮಾಜಿ ಸಭಾಪತಿ ಹೊರಟ್ಟಿ ಚಾಲನೆ
  ಸರ್ಕಾರಿ ಎನ್.ಪಿ.ಎಸ್ ನೌಕರರ ಬೃಹತ್ ಸಂಕಲ್ಪ ಯಾತ್ರೆ
    ಧಾರವಾಡ 07 :ಎನ್‌.ಪಿ.ಎಸ್ ರದ್ಧುಗೊಳಿಸಿ ಓಪಿಎಸ್ ಯೋಜನೆ ಜಾರಿ ಮಾಡುವಂತೆ ಒತ್ತಾಯಿಸಿ ಡಿಸೆಂಬರ್ 19 ರಂದು ಬೆಂಗಳೂರಿನ ಫ್ರೀಡ್‌ಂ ಪಾಕ್೯ದಲ್ಲಿ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಮುಂದಾದ 
ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್( (NPS )ನೌಕರರ ಸಂಘದ ಜಿಲ್ಲಾ ಘಟಕದಿಂದ ರಾಜ್ಯ ಸರ್ಕಾರಿ ನೌಕರರು ಇಂದು ನಗರದಲ್ಲಿ ಬೃಹತ್  ಓಪಿಎಸ್ ಸಂಕಲ್ಪ ಯಾತ್ರೆನಡೆಸಿದರು.
    ಇಂದು ಬೆಳಿಗ್ಗೆ  ನಗರದ ಕಲಾಭವನದಿಂದ
ಸಾವಿರಾರು  ಎನ್‌ಪಿಎಸ್ ನೌಕರರು ಸಂಕಲ್ಪ ಯಾತ್ರೆಯ ಪೂರ್ವಭಾವಿಯಾಗಿ ನಗರದಲ್ಲಿ ಬೃಹತ್ ಜಾಗೃತಿ ಜಾಥಾ ನಡೆಸಿದರು.
ಮಾಜಿ ಸಭಾಪತಿ, ವಿಧಾನ ಪರಿಷತ ಸದಸ್ಯ ಬಸವರಾಜ ಹೊರಟ್ಟಿ ಅವರು ಜಾಗೃತಿ ಜಾಥಾಗೆ ಚಾಲನೆ ನೀಡಿದರು.

  ಬರುವ ಡಿಸೆಂಬರ್ 19 ರಂದು ಬೆಂಗಳೂರಿನ ಫ್ರೀಡಂ ಪಾಕ್೯ದಲ್ಲಿ ಮಾಡು ಇಲ್ಲವೇ ಮಡಿ ಎಂಬ ಸತ್ಯಾಗ್ರಹವನ್ನು ಎನ್‌ಪಿಎಸ್ ವಿರೋಧಿಸಿ ಹಮ್ಮಿಕೊಳ್ಳಲಾಗಿದೆ. ಅದರ ಜಾಗೃತಿಗಾಗಿ ಈ ರ‍್ಯಾಲಿಯನ್ನು ನಡೆಸಲಾಯಿತು.
      ನಿಶ್ಚಿತ ಪಿಂಚಣಿ ನಮ್ಮ ಹಕ್ಕು ಅದನ್ನು ಹೋರಾಟದಿಂದಲೇ ಪಡೆಯಬೇಕು. ಪಿಂಚಣಿ ಎಂಬುದು ಕೇವಲ ನೌಕರನ ಆರ್ಥಿಕ ಸೌಲಭ್ಯ ಮಾತ್ರವಲ್ಲ , ಆದೊಂದು ಘನತೆ ಹಾಗೂ ಗೌರವದ ಪ್ರತೀಕವಾಗಿದೆ. ಎನ್.ಪಿ.ಎಸ್ ( NPS) ತೊಲಗಿಸಿ ಓ.ಪಿ.ಎಸ್.(OPS) ಜಾರಿಗೊಳಿಸಲು ಹೋರಾಟದ ಪರ್ವಕಾಲದಲ್ಲಿ ನಾವಿದ್ದೇವೆ . ಪ್ರಜಾತಂತ್ರ ವ್ಯವಸ್ಥೆಯಲ್ಲಿ ಹೋರಾಟವೆಂಬುದು ಅನಿವಾರ್ಯವಾಗಿದೆ ಎಂದು ಸಂಘ ಹೇಳಿದೆ.
    ಸಂಘದ ಜಿಲ್ಲಾಧ್ಯಕ್ಷರಾದ ಯಲ್ಲಪ್ಪ ಕರೆಣ್ಣವರ ನೌಕರರನ್ನುದ್ದೇಶಿಸಿ ಮಾತನಾಡಿ,
 2018 ರಲ್ಲಿ ನಡೆದ ಎನ್.ಪಿ.ಎಸ್ (NPS) ವಿರೋಧಿಸಿ ಹೋರಾಟಗಳಾದ “ ಫ್ರೀಡಂ ಪಾರ್ಕ್ ಚಲೋ ”  “ ರಕ್ತ ಕೊಟ್ಟೇವು ಪಿಂಚಣಿ ಬಿಡೆವು ”  “ ಬೆಳಗಾವಿ ಚಲೋ ” ಇವುಗಳ ಅಭೂತಪರ್ವ ಯಶಸ್ಸಿನಿಂದ ಎನ್.ಪಿ.ಎಸ್ ಯೋಜನೆಯಲ್ಲಿ ಆಮೂಲಾಗ್ರ ಬದಲಾವಣೆಗಳಾಗಿವೆ . ( ಮರಣ ಮತ್ತು ನಿವೃತ್ತಿ ಉಪದಾನ ) DCRG ಸೌಲಭ್ಯ ಕುಟುಂಬ ಪಿಂಚಣಿ ಜಾರಿಗೊಳಿಸಲಾಗಿದೆ . ಸರ್ಕಾರದ ವಂತಿಗೆ ಶೇ .10 ರಿಂದ 14 ಕ್ಕೆ ಏರಿಕೆಯಾಗಿದೆ . ಎನ್.ಪಿ.ಎಸ್ ಮೊತ್ತದಲ್ಲಿ ಭಾಗಶಃ ಹಿಂಪಡೆಯುವ ಸೌಲಭ್ಯವನ್ನು ಸರ್ಕಾರದ ಕಲ್ಪಿಸಿದೆ . ಆದರೆ ನಮ್ಮೆಲ್ಲರ ಒಕ್ಕೊರಲ ಬೇಡಿಕೆ ಎನ್.ಪಿ.ಎಸ್. ಯೋಜನೆಯಲ್ಲಿ ಬದಲಾವಣೆಗಳಲ್ಲ , ಎನ್.ಪಿ.ಎಸ್.( NPS) ಅನ್ನು ರದ್ದುಗೊಳಿಸಿ ನಿಶ್ಚಿತ ಪಿಂಚಣಿ ಜಾರಿಗೊಳಿಸುವುದೆ ಆಗಿದೆ ಎಂದರು
        ಈಗಾಗಲೇ ಪಶ್ಚಿಮ ಬಂಗಾಳ , ರಾಜಸ್ಥಾನ , ಛತ್ತೀಸಗಡ್ , ಜಾರ್ಖಂಡ್ ಮತ್ತು ಪಂಜಾಬ್ ರಾಜ್ಯಗಳಲ್ಲಿ OPS ಜಾರಿಯಾಗಿದೆ . ಎಂದರೆ ನಮ್ಮಲ್ಲಿ ಯಾಕಾಗಬಾರದು ? ನಮ್ಮ ರಾಜ್ಯದಲ್ಲೂ ಹಳೆ ಪಿಂಚಣಿಯನ್ನು ಪಡೆದೇ ತೀರುವ ಸಂಕಲ್ಪದೊಂದಿಗೆ ಡಿಸೆಂಬರ್ 19 , 2022 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ " ಮಾಡು ಇಲ್ಲವೇ ಮಡಿ " ಅನಿರ್ದಿಷ್ಟಾವಧಿ ಹೋರಾಟಕ್ಕೆ ರಾಜ್ಯ ಸಂಘದಿಂದ ಕರೆ ನೀಡಿದ್ದು , ನಾವೆಲ್ಲರೂ ಹೋರಾಟದಲ್ಲಿ ಭಾಗವಹಿಸುವ ಮೂಲಕ ನಿಶ್ಚಿತಪಿಂಚಣಿ ಪಡೆಯುವ ಸಂಕಲ್ಪವನ್ನು ಇಂದೇ ಮಾಡೋಣ. ನಮ್ಮ ಈ ಹೋರಾಟಕ್ಕೆರಾಜ್ಯ ಸರಕಾರದ ಎಲ್ಲಾ ಇಲಾಖೆಯ ನೌಕರರ ಸಂಘದವರು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು.
      ೨೦೦೬ರಿಂದ ಜಾರಿಯಾದ ಎನ್‌ಪಿಎಸ್ ಯೋಜನೆಯನ್ನು ರದ್ಧುಗೊಳಿಸಬೇಕು. ಎನ್‌ಪಿಎಸ್ ರದ್ಧುಗೊಳಿಸಿ ಓಪಿಎಸ್ ಜಾರಿ ತಂದು ನೌಕರರ ಕುಟುಂಬಗಳನ್ನು ರಕ್ಷಿಸಬೇಕೆಂದು  ಒತ್ತಾಯಿಸಿದರು. 1 -4 2006 ರಿಂದ ಎನ್‌ಪಿಎಸ್ ಜಾರಿಯಾಗಿದ್ದು, ಇದು ನಿವೃತ್ತಿ ನಂತರ ಅಥವಾ ಆಕಸ್ಮಿಕ ಮರಣದಿಂದಾಗಿ ಸರ್ಕಾರಿ ನೌಕರರ ಕುಟುಂಬಗಳು ಅತಂತ್ರವಾಗಲಿವೆ. ಡಿಸೆಂಬರ್ 19 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ದಲ್ಲಿ ಮಾಡು ಇಲ್ಲವೇ ಮಡಿ ಎಂಬ ಸತ್ಯಾಗ್ರಹದ ಪೂರ್ವಭಾವಿಯಾಗಿ ಎಲ್ಲ ಜಿಲ್ಲೆಗಳಲ್ಲೂ ಜಾಗೃತಿ ಮೂಡಿಸಲಾಗುತ್ತಿದೆ. ಸರ್ಕಾರಕ್ಕೆ ಹಕ್ಕೋತ್ತಾಯಕ್ಕಾಗಿ ಈ ಯಾತ್ರೆಯನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

  ನಗರದ ಕಲಾಭವನದಿಂದ  ಜುಬಲಿ ಸಕ೯ಲ್,  ಕೋರ್ಟ್‌ ಸಕ೯ಲ್   ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಾಯಾ೯ಲಯ ತಲುಪಿ ಮನವಿ ಅಪಿ೯ಸಿದರು.
   ಯಾತ್ರೆಯಲ್ಲಿ ರಾಜು ಮಾಳವಾಡ, ಪರಮಾನಂದ ಶಿವಳ್ಳಿಮಠ, ಫೀರೋಜ್ ಗುಡೆನಕಟ್ಟಿ, ಉಮೇಶ ಕುರುಬರ, ಚಂದ್ರಶೇಖರ ತಿಗಡಿ, ಎಲ್.ಐ.ಲಕ್ಕಮ್ಮನವರ, ವೆಂಕಟೇಶ ಹಟ್ಡಿ, ಗಂಗಾಧರ ಹಿರೇಮಠ, ಶಾಂತಯ್ಯ  ಹಿರೇಮಠ  ಸೇರಿದಂತೆ, ಲತಾ ಮುಳ್ಳುರ,
ವಿವಿಧ ಇಲಾಖೆಯ  ಸಾವಿರಾರು ಸರ್ಕಾರಿ ನೌಕರರು ಪಾಲ್ಗೊಂಡಿದ್ದರು.
STAR 74 NEWS CHANNEL SUBSCRIBE LIKE & SHARE
ನವೀನ ಹಳೆಯದು

نموذج الاتصال