ಪಿರಮಿಡ್ ಸ್ಪಿರಿಚುವಲ್ ಸೊಸೈಟೀಸ್ ಮೂವ್ಮೆಂಟ್, ಹಾಗೂ ಪತ್ರೀಜಿ ವೆಜಿಟೇರಿಯನ್ ಮೂಮೆಂಟ್, ಕರ್ನಾಟಕ ಅಡಿಯಲ್ಲಿ ಹಮ್ಮಿಕೊಂಡ ಶಾಕಾಹಾರ ಜನಜಾಗೃತಿ ಜಾಥಾ
ಕಾರ್ಯಕ್ರಮವನ್ನು ಇಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರು ಸಸಿ ನೆಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಹಾಪೌರರಾದ ಶ್ರೀ ಈರೇಶ ಅಂಚಟಗೇರಿ ರವರು ಧ್ಯಾನ ಹಾಗೂ
ಸಸ್ಯಾಹಾರದಿಂದ ಆರೋಗ್ಯ ಹಾಗೂ ಸ್ಮೃತಿ ಶಕ್ತಿ ಸಹ ವೃದ್ಧಿಸುತ್ತದೆ, ಇಂತಹ ಜಾಥಾ ಕಾರ್ಯಕ್ರಮಕ್ಕೆ ಯುವಪೀಳಿಗೆಯ ಸಹಕಾರವೂ ಮುಖ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಅವಳಿನಗರದಲ್ಲಿಯೂ ಸಹ ಪಿರಮಿಡ್
ಸಂಸ್ಥೆಯನ್ನು ಸ್ಥಾಪಿಸುವ ಕುರಿತು ಕುಲಪತಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಡಾ. ಆನಂದ ಪಾಂಡುರಂಗಿ ರವರು, ಶ್ರೀ ದತ್ತಾ ಡೋರ್ಲೆ ರವರು, ಗುರುಮಾತೆ ಸ್ವರ್ಣಮಾಲಾ ಪತ್ರಿ ಅಮ್ಮನವರು, ಶ್ರೀಮತಿ ಸುಮಂಗಳಾ ಸಾಲಿಮಠ ರವರು, ಶ್ರೀಮತಿ ವಿಶಾಲಾಕ್ಷಿ ಆಕಳವಾಡಿ ರವರು, ಹಾಗೂ ಪಿರಮಿಡ್ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು