ಕನಕ ವೃತ್ತದಲ್ಲಿ ಶ್ರೀ ಕನಕದಾಸರ ನಾಮಫಲಕ--ಸ್ವಾಗತಾರ್ಹ
ಧಾರವಾಡ:--ನಗರದ ಹೃದಯ ಭಾಗದಲ್ಲಿರುವ ಟೋಲನಾಕ ವೃತದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾಡಳಿತ ಮಹಾನಗರ ಪಾಲಿಕೆ ಆಯುಕ್ತರು ಮತ್ತು ಬಿ ಆರ್ ಟಿ ಎಸ್ ಎಂಡಿಗಳು ಕನಕ ವೃತ್ತದಲ್ಲಿ ಶ್ರೀ ಕನಕದಾಸರ ನಾಮಫಲಕವನ್ನು ಯನ್ನು ಸ್ಥಾಪನೆ ಮಾಡಿದ್ದು ಸ್ವಾಗತಾರ್ಹ ಎಂದು ಬಸವರಾಜ ದೇವರು ಹರ್ಷ ವ್ಯಕ್ತಪಡಿಸಿದ್ದಾರೆ.
ಅನೇಕ ದಶಕಗಳಿಂದ ಟೂಲನಾಕಾ ವೃತ್ತವು ಶ್ರೀ ಕನಕದಾಸ ವೃತ ಎಂದು ನಾಮಕರಣಗೊಂಡಿದ್ದು ಇರುತ್ತದೆ ಆದರೆ ಬಿಆರ್ಟಿಎಸ್ ನ ಕಾಮಗಾರಿಯ ಸಮಯದಲ್ಲಿ ಕನಕದಾಸ ವೃತ್ತದ ನಾಮ ನಾಮಫಲಕವನ್ನು ತೆರವುಗೊಳಿಸಿದ್ದರಿಂದಾಗಿ ಸುಮಾರು 3-4 ವರ್ಷಗಳಿಂದ ನಿರಂತರವಾಗಿ ಸಮಾಜದ ಮುಖಂಡರು ಹೋರಾಟ ಹಾಗೂ ಪ್ರತಿಭಟನೆಗಳು ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಪತ್ರಗಳನ್ನು ಸಲ್ಲಿಸಿದರು ಕೂಡ ಇಲ್ಲಿಯವರೆಗೆ ನಾಮಪಲಕವನ್ನು ಪ್ರತಿಷ್ಠಾಪನೆ ಮಾಡಿರಲಿಲ್ಲ.ಆದರೆ ಮೊನ್ನೆ ದಿನ ಕನಕ ಜಯಂತಿಯ
ಪೂರ್ವಭಾವಿ ಸಭೆಯನ್ನು ಮಾನ್ಯ ಜಿಲ್ಲಾಧಿಕಾರಿಗಳು ಅವರ ಸಭಾಭವನದಲ್ಲಿ ಕರೆದಾಗ ಶ್ರೀ ಬಸವರಾಜ ದೇವರುಗಳ ನೇತೃತ್ವದಲ್ಲಿ ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕರಾದ ಬಸವರಾಜ ಮಲಕಾರಿ ಹಾಗೂ ಹಿರಿಯರಾದ ಬಸವರಾಜ ಕಟಗಿಯವರು ಮತ್ತು ಯುವ ಘಟಕದ ಅಧ್ಯಕ್ಷ ರಮೇಶ ನಲವಡಿ ಹಾಗೂ ಸಮಾಜದ ಮುಖಂಡರುಗಳೆಲ್ಲ ಸದರಿ ಟೋಲನಾಕ ವೃತ್ತದಲ್ಲಿ ಕನಕದಾಸರ ನಾಮಪಲಕವನ್ನು ಅಳವಡಿಸದೆ ಹೋದರೆ ಕನಕ ಜಯಂತಿಯ ಜಿಲ್ಲಾಡಳಿತದ ಕಾರ್ಯಕ್ರಮಕ್ಕೆ ನಾವು ಗೈರು ಉಳಿಯುತ್ತೇವೆ ಹಾಗೂ ಪ್ರತಿಭಟನೆ ಮಾಡುತ್ತೇವೆ ಎನ್ನುವ ಒತ್ತಾಯವನ್ನ ಮಾಡಿದಾಗ ಜಿಲ್ಲಾಧಿಕಾರಿಗಳು ಕೂಡಲೇ ಕಾರ್ಯ ಪ್ರವೃತ್ತರಾಗಿ ಸಂಬಂಧಪಟ್ಟ ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಬಿ ಆರ್ ಟಿ ಎಸ್ ನ ಎಂಡಿ ಗಳಿಗೆ ತಿಳಿಸಿ ಕನಕದಾಸರ ನಾಮಫಲಕವನ್ನು ಅಳವಡಿಸಿದ್ದು ನಮ್ಮೆಲ್ಲರಿಗೂ ಕೂಡ ತೀವ್ರ ಹರ್ಷವನ್ನು ಉಂಟು ಮಾಡಿದ್ದು ನಮ್ಮೆಲ್ಲರ ಒಗ್ಗಟ್ಟಿನ ಹೋರಾಟದ ಪ್ರತಿಫಲ ಹೀಗಾಗಿ ಸದರಿ ಜಿಲ್ಲಾಡಳಿತಕ್ಕೆ ಧನ್ಯವಾದಗಳು ಎಂದು ಮನ್ಸೂರು ರೇವಣಸಿದ್ದಶ್ವರ ಪೀಠದ ಜಗದ್ಗುರುಗಳಾದ ಶ್ರೀ ಬಸವರಾಜ ದೇವರು ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕರಾದ ಬಸವರಾಜ ಮಲಕಾರಿ ಅವರು ಹಾಗೂ ಹಿರಿಯರಾದ ಬಸವರಾಜ ಕಟಗಿ ಅವರು ಮತ್ತು ಜಿಲ್ಲಾ ಯುವ ಕುರುಬರ ಸಂಘದ ಅಧ್ಯಕ್ಷರಾದ ರಮೇಶ ನಲವಡಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ನಾಮ ಫಲಕವನ್ನು ಡೊಳ್ಳು ಬಾರಿಸಿ ಕಂಬಳಿ ಹೊದ್ದಿಸಿ ಮಾಲಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಬಸವರಾಜ ದೇವರು,ಬಸವರಾಜ ಮಲಕಾರಿ,ಬಸವರಾಜ ಕಟಗಿ,ರಮೇಶ ನಲವಡಿ,ನಾಗಪ್ಪ ವಾಲಿಕಾರ,ಶಿದ್ದಪ್ಪ ಬೇಳವಲದ,ರ್ಯವಪ್ಪ ಐರನಿ,ವಕೀಲರಾದ ಇರಗೊಂಡ, ಮಾಯಪ್ಪ ಬೆಲ್ಲಿಗಟ್ಟಿ,ಭೀಮಶಿ ಬೇಲ್ಲಿಗತ್ತಿ, ಗುರಪ್ಪನವರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
STAR 74 NEWS CHANNEL SUBSCRIBE LIKE& SHARE