ನಾಲ್ಕನೇ ದಿನ ಪೌರ ಕಾಮಿ೯ಕರ ಪ್ರತಿಭಟನೆ.
ಧಾರವಾಡ : ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರದಿಂದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಪೌರಕಾರ್ಮಿಕರು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಲ್ಲಿ 400ಕ್ಕೂ ಹೆಚ್ಚು ಮಹಿಳಾ ಗುತ್ತಿಗೆ ಪೌರಕಾರ್ಮಿಕರು ಪಾಲ್ಗೊಂಡಿದ್ದಾರೆ. ಮೂರು ದಿನ ಕಳೆದರೂ ಸಹ ಜಿಲ್ಲಾ ಸಚಿವರು, ಸಂಬಂಧಪಟ್ಟ ಸಚಿವರಾಗಲಿ, ಶಾಸಕರಾಗಲಿ ಈ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿಲ್ಲ ಭೇಟಿನೂ ನೀಡಿಲ್ಲ.
ಕೊರೋನಾ ಸಂದರ್ಭದಲ್ಲಿ ಇದೇ ಪೌರ ಕಾರ್ಮಿಕರು ಮನೆ ಮನೆಗೆ ಬಂದು ಕಸ, ವಲೋಚರಂಡಿ ಸ್ವಚ್ಛತಾ ಕಾರ್ಯ ನಿರ್ವಹಿಸದೆ ಹೋಗಿದ್ದರೆ ಹುಬ್ಬಳ್ಳಿ ಧಾರವಾಡ ನಗರದ ಜನರ ಆರೋಗ್ಯದ ಸ್ಥಿತಿ ಹೇಗೆ ಇರಬಹುದು ಎಂಬುದರ ಬಗ್ಗೆ ಪಾಲಿಕೆ ಹಾಗೂ ಸರ್ಕಾರ ವಿಚಾರ ಮಾಡಬೇಕಾಗಿದೆ. ಪಾಲಿಕೆಯ 868 ಮಹಿಳಾ ಗುತ್ತಿಗೆ ಪೌರಕಾರ್ಮಿಕರಿಗೆ ಮೆಡಿಕಲ್ ಬೋನಸ್ ನೀಡದೆ ಇರುವುದು, ಆರೋಗ್ಯ ವಿಮೆ, ಹೆಲ್ತ್ ಕಾರ್ಡ್ ಸೌಲಭ್ಯ ನೀಡದೆ ಇರುವುದು ಎಷ್ಟು ಸರಿ? ಪೌರಕಾರ್ಮಿಕರು ತಮ್ಮ ಹಾಗೂ ತಮ್ಮ ಕುಟುಂಬದ ಜೀವ ಲೆಕ್ಕಿಸದೆ ಎಲ್ಲಾ ಸಂದರ್ಭದಲ್ಲಿ ಬೆಳಿಗ್ಗೆ ಎದ್ದು ಕಸ ವಿಲೇವಾರಿಗೆ ಮುಂದಾಗುತ್ತಾರೆ. ಅವರು ಆರೋಗ್ಯದಿಂದ ಇದ್ದರೆ ಮಾತ್ರ ಹುಬ್ಬಳ್ಳಿ ಧಾರವಾಡ ಮಹಾನಗರ ಜನತೆ ಆರೋಗ್ಯವಂತರಾಗಿ ರೋಗಮುಕ್ತರಾಗಿ ಇರೋದಕ್ಕೆ ಸಾಧ್ಯ. ಈ ಕುರಿತು ಜಿಲ್ಲಾ ಮಂತ್ರಿಗಳು ಕೂಡಲೇ ಸಂಬಂಧಪಟ್ಟ ಇಲಾಖೆ ಜೊತೆ ಚರ್ಚಿಸಿ ಇವರ ಬಹುದಿನದ ಬೇಡಿಕೆಗಳನ್ನು ಈಡೇರಿಸಿ ಹುಬ್ಬಳ್ಳಿ ಧಾರವಾಡ ಇನ್ನೂ ಸ್ವಚ್ಛವಾಗಿ ಇರಿಸಲು ಮುಂದಾಗ ಬೇಕಾಗಿದೆ.
ಘಟನೆಯಲ್ಲಿ ಪಾಲ್ಗೊಂಡು ಪ್ರತಿಭಟನಗಾರರನ್ನು ಉದ್ದೇಶಿಸಿ ಸ್ವಾತಿ ಮಾಳಗಿ ಹಾಗೂ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅಬ್ದುಲ್ ದೇಸಾಯಿ, ವಕೀಲ ಎಂ ಆರ್ ರಾಮದುರ್ಗ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಸ್ವಾತಿ ಮಾಳಗಿ
ರಾಷ್ಟ್ರೀಯ ಯುವ ಕಾಂಗ್ರೆಸ್ ಸಮಿತಿ