ಹಿರಿಯ ಸಾಹಿತಿ ಡಾ. ನ ಗುರುಲಿಂಗ ಕಾಪಸೆಗೆ ಸಿರಿಗನ್ನಡಂಗ ಗೆಲ್ಲೆ ರಾ.ಹ.ದೇಶಪಾಂಡೆ ಪ್ರಶಸ್ತಿ
ಧಾರವಾಡ: 'ಕರ್ನಾಟಕ ವಿದ್ಯಾವರ್ಧಕ ಸಂಘವು ಇದೇ ಮೊದಲ ಬಾರಿಗೆ ನೀಡುತ್ತಿರುವ ಸಿರಿಗನ್ನಡಂಗ ಗೆಲ್ಲೆ ರಾ.ಹ.ದೇಶಪಾಂಡೆ ಪ್ರಶಸ್ತಿಯು
ಹಿರಿಯ ಸಾಹಿತಿ ಡಾ. ಗುರುಲಿಂಗ ಕಾಪಸೆ ಅವರಿಗೆ ಲಭಿಸಿದೆ' ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು. ಅದೇ ರೀತಿ ಕನ್ನಡ ಪ್ರಪಂಚ ಪಾಟೀಲ ಪುಟ್ಟಪ್ಪ ಪ್ರಶಸ್ತಿಯು ಸಂಯುಕ್ತ ಕರ್ನಾಟಕ ಪತ್ರಿಕೆಗೆ ಲಭಿಸಿದೆ. ಎರಡೂ ಪ್ರಶಸ್ತಿಗಳು ತಲಾ 50ಸಾವಿರ ನಗದು ಹಾಗೂ
ಸ್ಮರಣಿಕೆಯನ್ನು ಒಳಗೊಂಡಿದೆ' ಎಂದು ಸೋಮವಾರ
ಸುದ್ದಿಗೋಷ್ಠಿಯಲ್ಲಿ ಹೇಳಿದರು.